ಸಮ್ಮಿಶ್ರ ಸರ್ಕಾರ ಹಗ್ಗದ ಮೇಲಿನ ನಡಿಗೆ
ಪೂರ್ಣ ಬಹುಮತದ ಸರ್ಕಾರವೇ ಒಳ್ಳೆಯದು. ದೇಶದ ಆರ್ಥಿಕ ಸುಧಾರಣೆ, ಭದ್ರತೆ, ಅಭಿವೃದ್ಧಿಯಾಗಬೇಕಾದರೆ ಇದು ಮುಖ್ಯ. ಸಮ್ಮಿಶ್ರ ಸರ್ಕಾರಗಳೆಂಬ ಕಿಚಡಿ ಸರ್ಕಾರಗಳ ಅಸ್ಥಿರತೆ, ಅಭದ್ರತೆಯಿಂದ ದೊಂಬರಾಟದಂತೆ ಇರುತ್ತದೆ. ಭಿನ್ನಾಭಿಪ್ರಾಯಗಳಿಂದ ತುಂಬಿರುವ, ಅಧಿಕಾರದಾಸೆಗೆ ಬೆಂಬಲ ನೀಡುವ ಸಮ್ಮಿಶ್ರ ಸರ್ಕಾರಗಳು ದೇಶಕ್ಕೆ ಮಾರಕವೇ ಹೊರತು ಪೂರಕವಲ್ಲ. ಸಮ್ಮಿಶ್ರ ಸರ್ಕಾರ ಹಗ್ಗದ ಮೇಲಿನ ನಡಿಗೆಯಂತೆ ಯಾವ ಕ್ಷಣದಲ್ಲಾದರೂ ಉರುಳಬಹುದು. ಮತ್ತೆ ದೇಶದಲ್ಲಿ ಅರಾಜಕತೆ. ಒಂದು ಆಡಳಿತ ಪಕ್ಷಕ್ಕೆ ಒಂದು ಪ್ರಬಲವಾದ ವಿರೋಧ ಪಕ್ಷವಿರಬೇಕು ಆಗಲೇ ದೇಶ ಅಭಿವೃದ್ಧಿ.
ಟ ಎಲ್. ವಿ. ಕುಮಾರಸ್ವಾಮಿ, ಹಿರಿಯೂರು
ಸಮ್ಮಿಶ್ರ ಆಡಳಿತ ಬೇಡ
ಅಧಿಕಾರದ ಗದ್ದುಗೆಯನ್ನು ಬಹುಮತದಿಂದ ಗೆದ್ದ ಒಂದು ಪಕ್ಷವು ನಡೆಸಬೇಕು ಅದರಂತೆ ಈ ಆಡಳಿತ ಪಕ್ಷಕ್ಕೆ ಬಲವಾದ ವಿರೋಧ ಪಕ್ಷವಿರಬೇಕು. ಆಗಲೇ ಆಡಳಿತ ಪಕ್ಷವು ತನ್ನ ಜವಾಬ್ದಾರಿಯನ್ನು ಅರಿತು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತವೆ. ಇಲ್ಲಿ ಒಗ್ಗಟ್ಟು ಕೂಡ ಇರುತ್ತದೆ. ಸಮ್ಮಿಶ್ರ ಸರ್ಕಾರವಿದ್ದಲ್ಲಿ ಹಲವು ಪಕ್ಷ ಹಲವು ನಿರ್ಧಾರಗಳು, ವಿಭಿನ್ನ ನಡವಳಿಕೆಗೆಗಳು ಆವೃತವಾಗಿ ತಮ್ಮ ತಮ್ಮ ಸ್ವಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ದೇಶದ, ಸಾಮಾನ್ಯರ ಕುಂದು ಕೊರತೆಗಳನ್ನು ಪರಿಹರಿಸುವುದಿಲ್ಲ. ಅಲ್ಲದೇ ತಮ್ಮ ಅತಿಯಾದ ಆಸೆ-ಆಮಿಷಗಳು ಸರಿಯಾಗಿ ಪೂರೈಸದಿದ್ದರೆ ರಾಜೀನಾಮೆಯ ನಾಟಕವಾಡುತ್ತಾ ಸರ್ಕಾರದ ಪತನಕ್ಕೆ ಕಾರಣವಾಗುತ್ತಾರೆ. ಇದೆಲ್ಲ ಗೊಂದಲಗಳಿಗೆ ಕಡಿವಾಣ ಹಾಕಬೇಕಾದರೆ ಬಹುಮತವಿರುವ ಪಕ್ಷದ ಆಡಳಿತ ಜಾರಿಗೆ ಬರಬೇಕು.
ಟ ಶರಣಬಸಪ್ಪ. ಕೆ. ದಾನಕೈ, ಯಲಬುರ್ಗಾ
ಸಮ್ಮಿಶ್ರ ಸರ್ಕಾರ ಸಲ್ಲ
ಬಹುಮತ ಸರ್ಕಾರವೇ ಉತ್ತಮ. ಆದರೆ ಇದಕ್ಕೆ ಅಷ್ಟೆ ಪ್ರಬಲವಾದ ವಿರೋಧ ಪಕ್ಷವೂ ಇರಬೇಕು. ಆಗ ಸಹಜವಾಗಿ ದೇಶದ ಅಭಿವೃದ್ಧಿಯಾಗುತ್ತದೆ. ಇದಲ್ಲದೇ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದರೆ ಅದರಲ್ಲಿನ ಹಲವು ಪಕ್ಷಗಳಲ್ಲಿ ಹಲವು ಭಿನ್ನಾಭಿಪ್ರಾಯಗಳಿರುತ್ತದೆ. ಈ ಸಮ್ಮಿಶ್ರ ಸರ್ಕಾರದಿಂದ ಯಾವ ಕ್ಷಣದಲ್ಲಾದರೂ ಸರ್ಕಾರ ಪತನವಾಗಬಹುದು. ಇದು ದೇಶಕ್ಕೆ ಮಾರಕವೇ ಹೊರತು ಪೂರಕವಲ್ಲ. ಸರ್ಕಾರವನ್ನು ರಿಮೋಟ್ನಂತೆ ನಿಯಂತ್ರಿಸುತ್ತದೆ. ಇಂತಹ ಸಮ್ಮಿಶ್ರ ಸರ್ಕಾರದಿಂದ ದೇಶಕ್ಕೆ ಖಂಡಿತ ಭವಿಷ್ಯವಿಲ್ಲ. ಪ್ರತಿ ಬಾರಿ ಪೂರ್ಣ ಬಹುಮತದ ಸ್ಥಿರ ಸರ್ಕಾರವೇ ಬೇಕು ಅದೇ ಉತ್ತಮ ಹಾಗೂ ಪ್ರಗತಿಪರ ಸೇವೆಯನ್ನು ಮಾಡುತ್ತದೆ.
ಟ ನಾಗೇಂದ್ರ ಎಚ್. ಎಸ್, ಹಾಸನ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪೂರ್ಣ ಬಹುಮತದ ಸರ್ಕಾರ ಒಳ್ಳೆಯದೋ? ಸಮ್ಮಿಶ್ರ ಸರ್ಕಾರ ಒಳ್ಳೆಯದೋ?' ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

