ಬೈಟುಕಾಫಿ

ಸಲ್ಮಾನ್ ಅಪ್

'ಪ್ರತಿಯೊಬ್ಬರ ಒಳಗೂ ಒಂದು ಚಂಡಮಾರುತದಷ್ಟು ಶಕ್ತಿ ಇದೆ. ಮುಚ್ಚಳ ತೆಗೆಯೋ ಕೆಲಸ ಆಗಬೇಕಿದೆ'. ಹೌದು. ನಾವು...

ಸಲ್ಮಾನ್ ಅಪ್
Published On :

ಲಘುಪಾನೀಯ ಥಮ್ಸ್‌ಅಪ್ ಜಾಹೀರಾತಿನ ರೂಪದರ್ಶಿಯಾಗಿ ಒಪ್ಪಂದವನ್ನು ನವೀಕರಿಸಿಕೊಂಡಿರುವ ಖ್ಯಾತ ಬಾಲಿವುಡ್ ತಾರೆ ಸಲ್ಮಾನ್ ಖಾನ್‌ರೊಂದಿಗೆ ಬೈಟೂ ಕಾಫಿ ನಡೆಸಿದ ಆನ್‌ಲೈನ್ ಸಂದರ್ಶನದ ತುಣುಕು.

ಥಮ್ಸ್‌ಅಪ್‌ನ ಹೊಸ ಸ್ಲೋಗನ್ ಏನೋ ತುಂಬಾ ಸ್ಪೂರ್ತಿದಾಯಕವಾಗಿದೆ. ಆದರೆ ಇದು ನಿಜಕ್ಕೂ ಜನರಲ್ಲಿ ಸ್ಫೂರ್ತಿ ತುಂಬಲಿದೆಯಾ?
'ಪ್ರತಿಯೊಬ್ಬರ ಒಳಗೂ ಒಂದು ಚಂಡಮಾರುತದಷ್ಟು ಶಕ್ತಿ ಇದೆ. ಮುಚ್ಚಳ ತೆಗೆಯೋ ಕೆಲಸ ಆಗಬೇಕಿದೆ'. ಹೌದು. ನಾವು  ಗುರಿ ತಲುಪೋದಕ್ಕೆ ಕೇವಲ ನಮ್ಮ ಒಳಗಿರುವ ಸಾಮರ್ಥ್ಯವೊಂದೇ ಕಾರಣ. ಈ ಜಾಹೀರಾತಿನ ಮೂಲಕ ಅದನ್ನೇ ಹೇಳುತ್ತಿದ್ದೇನೆ. ಇದು ಇಂದಿನ ಉತ್ಸಾಹಿ ಯುವಕರಲ್ಲಿ ಅಡಗಿರುವ ಕಿಡಿಯನ್ನು ದೊಡ್ದದಾಗಿಸಲಿದೆ. ಈ ಸ್ಲೋಗನ್ ಅವರಲ್ಲಿ ಸ್ಫೂರ್ತಿ ತುಂಬಿ ನೈಜ ಸಾಮರ್ಥ್ಯ ಹೊರಹಾಕಿಸಲಿದೆ.

ಆದರೆ ನಿಮ್ಮ ಜಾಹೀರಾತು ನೋಡುವ ನವತರುಣರು ಹಾಗೂ ಮಕ್ಕಳು ಅದನ್ನು ತಪ್ಪಾಗಿ ಗ್ರಹಿಸಿ ನಿಮ್ಮಂತೆಯೇ ಸ್ಟಂಟ್ಸ್ ಮಾಡೋಕೆ ಹೋಗಿ ತೊಂದರೆಗೆ ಸಿಲುಕೋ ಸಾಧ್ಯತೆ ಇಲ್ವೆ?
ಖಂಡಿತಾ ಇಲ್ಲ. ಆ ಬಗ್ಗೆ ನಾವು ವಿಶೇಷವಾಗಿ ಸೂಚನೆ ಹಾಗೂ ಎಚ್ಚರಿಕೆ ನೀಡಿದ್ದೇವೆ. ಅದಲ್ಲದೆ ಈ ಜಾಹೀರಾತು ತುಂಬಾ ಸ್ಪಷ್ಟ ಸಂದೇಶ ನೀಡುವಲ್ಲಿ ಸಫಲವಾಗಿದೆ. ಇದು ಯಾರನ್ನೂ ಮಿಸ್‌ಲೀಡ್ ಮಾಡೋದಿಲ್ಲ.   

ಅಂದರೆ ಹಳೆಯ ಥಮ್ಸ್ ಅಪ್ ಜಾಹೀರಾತಿನಂತೆಯೇ ಹೊಸ ಜಾಹೀರಾತಿನಲ್ಲೂ ನಿಮ್ಮ ಸ್ಟಂಟ್‌ಗಳ ವರಸೆ ಇದೆ ಅಂತೀರಿ?
ಥಮ್ಸ್‌ಅಪ್ ಜಾಹೀರಾತಿಗೂ ಮೈನವಿರೇಳಿಸೋ ಸ್ಟಂಟ್ಸ್‌ಗೂ ಅವಿನಾಭಾವ ಸಂಬಂಧ. ಹಾಗಾಗಿ ಈ ಬಾರಿಯೂ ವಿಶೇಷ ಆ್ಯಕ್ಷನ್ ದೃಶ್ಯಗಳು ಚಿತ್ರಿತವಾಗಿವೆ. ಈ ಪರಿಕಲ್ಪನೆಗಾಗಿ ದುಡಿದ ನಿರ್ದೇಶಕ ಮತ್ತು ತಂಡವನ್ನು ಅಭಿನಂದಿಸಲೇಬೇಕು. ಈ ಜಾಹೀರಾತು ಒಂದು ಬಿರುಗಾಳಿ ಎಬ್ಬಿಸೋದಂತೂ ಖಂಡಿತ.

ಆದರೂ ಇಷ್ಟು  ವರ್ಷದಿಂದ ಥಮ್ಸ್‌ಅಪ್‌ನೊಂದಿಗಿನ ಸಂಬಂಧ ಬ್ರೇಕ್‌ಅಪ್ ಆಗದೆ ನಡೆದೇ ಇದೆಯಲ್ಲ?
ನಾನು ಇದನ್ನು ಕುಡಿಯುತ್ತಲೇ ಬೆಳೆದವನು. ಹಾಗಾಗಿ ಇಲ್ಲಿ ಪರ್ಸನಲ್ ಸಂಬಂಧ ಪ್ರೊಫೆಷನಲ್ ಆಗಿ ಬದಲಾಯ್ತು. ಮೊದಲಿಂದಲೂ ಸಾಹಸ ಅಂದ್ರೆ ಇಷ್ಟ. ಸಾಹಸಮಯ ಚಿತ್ರಗಳೇ ಫೇವರಿಟ್. ಸೊ, ಥಮ್ಸ್‌ಅಪ್ ಕೂಡ ಆಲ್‌ಟೈಮ್ ಫೇವರಿಟ್.

ಜೈ ಹೋ ಆದಮೇಲೆ ಬೆಳ್ಳಿತೆರೆಯಲ್ಲಿ ನೀವು ಕಾಣಿಸಿಲ್ಲ. ಮುಂದಿನ ಚಿತ್ರ ಯಾವುದು?
ಸಾಜಿದ್ ನಾಡಿಯಾದ್‌ವಾಲಾ ನಿರ್ದೇಶನದಲ್ಲಿ 'ಕಿಕ್‌' ಚಿತ್ರ ಬರುತ್ತಿದೆ.

ಈ ನಡುವೆ ಹೊಸ ನಿರ್ದೇಶಕರಿಗೆ ಮಣೆ ಹಾಕ್ತಿದೀರಿ ಅಂತ ಕೇಳಿದ್ವಿ. ಯಾವುದಾದರೂ ಹೊಸಬರ ಪ್ರಾಜೆಕ್ಟ್ ಫೈನಲ್ ಮಾಡಿದೀರಾ?
ಅದೇನೂ ಹೊಸ ವಿಷಯ ಅಲ್ಲ. ಈ ಹಿಂದೆಯೂ ಹೊಸಬರೊಂದಿಗೆ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಮಾಡುತ್ತೇನೆ.

ಇತ್ತೀಚೆಗೆ ದೇಶಭಕ್ತಿ ಹಾಗೂ ಸಾಮಾಜಿಕ ಸಂದೇಶ ಇರುವ ಚಿತ್ರಗಳಲ್ಲಿ ಆಸಕ್ತಿ ತೋರುತ್ತಿದ್ದೀರಲ್ಲ?
ಹಾಗೇನಿಲ್ಲ. ನನ್ನ ಸಿನಿಮಾ ಅಂದರೆ ಅಲ್ಲಿ ಮನರಂಜನೆಗೆ ಆದ್ಯತೆ. ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶವೂ ರವಾನೆಯಾದರೆ ಒಳ್ಳೆ ಯದೇ ಅಲ್ವೇ?

- ಸಾಗರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.