ಕೋಶಗಳು ನಿರಂತರ ಚಲಿಸುವುದೇಕೆ?

ಇಂದು ವಿಶ್ವ ಕ್ಯಾನ್ಸರ್ ದಿನ
ಕ್ಯಾನ್ಸರ್ಕಾರಕ ಕೋಶಗಳ ಅನಿಯಂತ್ರಿತ ವಿಭಜನೆಯಿಂದ ಉಂಟಾದ ಗೆಡ್ಡೆ ಒಂದೆಡೆ ಸ್ಥಾಪಿತಗೊಳ್ಳುತ್ತದೆ. ಆದರೆ ಮೂಲ ಕೋಶ ಮಾತ್ರ ಏಕೆ ದೇಹದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಲೇ ಇರುತ್ತದೆ? ಅದು ಏಕೆ ಒಂದೆ ಕಡೆ ಅಂಟಿಕೊಳ್ಳುವುದಿಲ್ಲ? ಇಂಥ ದ್ದೊಂದು ಪ್ರಶ್ನೆಗೆ 'ನೇಚರ್ ಕಮ್ಯೂನಿಕೇಶನ್ಸ್' ಎನ್ನುವ ವಿಜ್ಞಾನ ನಿಯತಕಾಲಿಕ 2012ರಲ್ಲಿ ಪ್ರಕಟಿಸಿದ ವಿಜ್ಞಾನಿಗಳ ಸಂಶೋಧನಾ ಲೇಖನ ಇದಕ್ಕೆ 'ಸ್ವಲ್ಪಮಟ್ಟಿಗೆ' ಉತ್ತರ ನೀಡುತ್ತದೆ. ಏಕೆಂದರೆ ಇದನ್ನು 'ಮಹತ್ವದ ಸುಳಿವು' ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆಯೇ ವಿನಾ ಇದೇ ಅಂತಿಮ ಎನ್ನುವ ವಾದವನ್ನು ಅವರು ಮುಂದಿಟ್ಟಿಲ್ಲ.
ವಿಜ್ಞಾನಿಗಳ ಪ್ರಕಾರ, ಈ ಚಲನೆಗೆ ಕ್ಯಾನ್ಸರ್ಕಾರಕ ಕೋಶಗಳಲ್ಲಿ ಅಂಟಿಕೊಳ್ಳುವ ಗುಣ ಇಲ್ಲದೇ ಇರುವುದು ಕಾರಣ. ಆ ಕೋಶಗಳು ಮತ್ತು ಗೆಡ್ಡೆಯಾದ ಜಾಗದಲ್ಲಿ ಕೆಲವು ಅಣ್ವಿಕ ಕ್ರಿಯೆಗಳು ನಡೆದು, ಕೋಶಗಳು ಅಂಟಿಕೊಳ್ಳದಂತೆ ಮಾಡುತ್ತವೆ. ಅಲ್ಲಿಂದ ಹೊರದಬ್ಬಿಸಿಕೊಳ್ಳುವ ಕೋಶಗಳು ಮತ್ತೊಂದು ಅಂಗವನ್ನು ಹುಡುಕುತ್ತವೆ ಹಾಗೂ ಅಲ್ಲಿ ನೆಲೆ ನಿಲ್ಲುವ ಪ್ರಯತ್ನ ಮಾಡುತ್ತವೆ. ಅಲ್ಲಿಯೂ ಇದೇ ಕ್ರಿಯೆ ನಡೆದು ಮತ್ತೊಂದು ಅಂಗದತ್ತ ಪ್ರಯಾಣ ಮುಂದುವರಿಯುತ್ತದೆ. ಬಹುತೇಕ ಕ್ಯಾನ್ಸರ್ ಸಾವುಗಳು ಇಂಥ ಚಲನಶೀಲ ಕೋಶಗಳಿಂದಲೇ ಆಗುತ್ತವೆ. ಶೇ 10ರಷ್ಟು ಮರಣಗಳು ಮಾತ್ರ ಪ್ರಾಥಮಿಕ ಗೆಡ್ಡೆಗಳಿಂದ ಸಂಭವಿಸುತ್ತವೆ. ಆದ್ದರಿಂದ ಮತ್ತೊಂದು ಅಂಗದ ಮೇಲೆ ಕ್ಯಾನ್ಸರ್ ಕೋಶ ನೆಲೆಗೊಳ್ಳುವ ಪ್ರಯತ್ನವನ್ನು ವಿಫಲಗೊಳಿಸುವುದು ಹೇಗೆ ಎನ್ನುವುದನ್ನು ಪತ್ತೆ ಮಾಡಿದರೆ ಎರಡನೆ ಅಥವಾ ಮೂರನೆ ಗೆಡ್ಡೆಗಳ ರಚನೆಯನ್ನು ತಡೆಯಬಹುದು.
ನಮ್ಮ ದೇಹದಲ್ಲಿನ ಕೋಶಗಳ ಬೆಳವಣಿಗೆ, ವಿಭಜನೆ, ಸಾವು ಎಲ್ಲದಕ್ಕೂ ನಿರ್ದಿಷ್ಟ ಕ್ರಮವಿದೆ. ಆದರೆ ಕ್ಯಾನ್ಸರ್ಕಾರಕ ಕೋಶಕಗಳದ್ದು ಅನಿಯಂತ್ರಿತ ಬೆಳವಣಿಗೆ ಮತ್ತು ವಿಭಜನೆ. ಮಾತ್ರವಲ್ಲ, ಅವುಗಳಿಗೆ ಮರಣವೂ ಇಲ್ಲ. ಕೆಲವೊಮ್ಮೆ ಕ್ಯಾನ್ಸರ್ ಅನುವಂಶೀಯವಾಗಿಯೂ ಬರಬಹುದು.
ವಂಶವಾಹಿಗಳಿಗೆ (ಡಿಎನ್ಎ) ಹಾನಿ ಅಥವಾ ರೂಪಾಂತರ ಆಗಿದ್ದರೂ ಕ್ಯಾನ್ಸರ್ ಬರುವ ಸಂಭವ ಇದೆ. ಒಂದೊಂದು ಕ್ಯಾನ್ಸರ್ನ ಲಕ್ಷಣಗಳು ಒಂದೊಂದು ರೀತಿ. ವೈದ್ಯರ ಬಳಿ ಹೋದಾಗ ನಿಮ್ಮ ದೇಹದಲ್ಲಿ ಆಗುತ್ತಿರುವ ಯಾವ ಬದಲಾವಣೆಗಳನ್ನೂ ಮುಚ್ಚಿಟ್ಟುಕೊಳ್ಳದೇ ಹೇಳಬೇಕು. ವೈದ್ಯರು ತಮ್ಮ ಅನುಮಾನ ಬಗೆಹರಿಸಿಕೊಳ್ಳಲು ಎಕ್ಸರೇ, ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್, ಪಿಇಟಿ ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನ್ಗಳಲ್ಲಿ ಯಾವುದನ್ನಾದರೂ ಸೂಚಿಸಬಹುದು.
(ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


