ವಿರಹತಪ್ತೆಯ ಪಾಡು

'ವಿರಹೋತ್ಕಂಠಿತೆ' ಎಂಬ ಹೆಸರೇ ಹೇಳುವಂತೆ, ಭರತನ ಈ ನಾಯಿಕೆಯು ವಿರಹದಿಂದ ಉತ್ಕಂಠಿತೆಯಾಗಿರುವವಳು. ಈಕೆಯ ನಲ್ಲ ಅದ್ಯಾವುದೋ ಕಾರಣದಿಂದ ದೂರ ದೇಶಕ್ಕೆ ಹೋಗಿದ್ದಾನೆ. ನಲ್ಲೆಯು ಆತನ ಬರವನ್ನು ಕಾತರದಿಂದ ಎದುರು ನೋಡುತ್ತ ಇದ್ದಾಳೆ. ನಲ್ಲನ ಅನುಪಸ್ಥಿತಿಯಿಂದಾಗಿ ಆಕೆಗೆ ಕಾಯುವಿಕೆಯೇ ಜೀವನವಾಗಿದೆ. ಅಲಂಕಾರ ಶೃಂಗಾರ ಪ್ರಸಾಧನಾದಿಗಳಲ್ಲಿ ಆಕೆಗೆ ಆಸಕ್ತಿಯಿಲ್ಲ. ಕೆಲವೊಮ್ಮೆ ನಲ್ಲನ ಬರವಿಗಾಗಿ ಆಕೆ ಸಿಂಗರಗೊಳ್ಳುವುದೂ ಉಂಟು. ಆದರೆ ಅವುಗಳಿಂದ ಫಲವಿಲ್ಲವೆಂದು ತಿಳಿದು ವಸನಾದಿಗಳಲ್ಲಿ ನಿರಾಸಕ್ತಳಾಗುತ್ತಾಳೆ. ಕಾಳಿದಾಸನ ಮೇಘದೂತದ ಯಕ್ಷನ ಮಡದಿ ಈ ಅವಸ್ಥೆಗೆ ಉದಾಹರಣೆ. ಮುಖಾರಿ, ಪೌರವಿ, ತುರುಷ್ಕತೋಡಿಗಳು ಈಕೆಗೆ ಹೇಳಿ ಮಾಡಿಸಿದ ರಾಗಗಳು.
ತಪ್ತೈ ಮಹಾವಿರಹವಹ್ನಿಶಿಖಾವಲೀಭಿರಾಂ
ಪಾಂಡುರಸ್ತನತಟೇ ಹೃದಯೇ ಪ್ರಿಯಾಯಾಃ
ಮನ್ಮಾರ್ಗವೀಕ್ಷಣನಿವೇಶೀನದೀನದೃಷ್ಟೇರ್
ನೂನಂ ಛಮಛಮಿಚ್ಛತಿ ಬಾಷ್ಪಕಣಾಃ ಪತಂತಿ
ಅತ್ತ ಪ್ರೇಯಸಿಯು ವಿರಹಬೇಗೆಯಿಂದ ಬೇಯುತ್ತಿದ್ದಾಳೆ. ಇತ್ತ ನಾಯಕನು ಆಕೆಯನ್ನು ನೆನಪಿಸಿಕೊಳ್ಳುತ್ತಿದ್ದಾನೆ: ನನ್ನ ನಲ್ಲೆಯು ಈಗ ನಾನು ಬರುವ ದಾರಿಯನ್ನೇ ದೀನತೆಯಿಂದ ದಿಟ್ಟಿಸಿ ನೋಡುತ್ತಾ ಕುಳಿತಿರಬಹುದು. ಅವಳ ಹೃದಯವು ವಿರಹವೆಂಬ ದಾವಾನಲದಿಂದ ಸುಡುತ್ತ, ಎದೆ ಕಾದ ಬಾಣಲೆಯಂತಾಗಿರಬಹುದು. ಆಗ ಆಕೆಯ ಕಣ್ಣಿನಿಂದ ಹನಿಗಳು ಎದೆಯ ಮೇಲೆ ಉದುರಿದರೆ, ಛಂ ಛಂ ಎಂಬ ಸೀಯುವ ಶಬ್ದವನ್ನು ಹೊರಡಿಸುತ್ತವೋ ಏನೋ!
ನಾಯಕನ ಕಲ್ಪನೆ ಚೆನ್ನಾಗಿದೆ. ಪಾಡು ಅವಳದು, ಹಾಡು ಅವನದು.
= ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


