'ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ'
ಜಗದ ಹಿತಕ್ಕಾಗಿ ಸೇವೆ ಸಲ್ಲಿಸುತ್ತ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಮಹಾ ಆದರ್ಶ. ನಿನ್ನ ದಾರಿಯಲ್ಲಿ ನೀನು ಮುನ್ನಡೆಯುತ್ತಲೇ ಇರು. ಮಹಾತ್ಯಾಗದ, ಶಾಂತಿ ಮುಕ್ತಿ ಧನ್ಯತೆಗಳ ಬಾವುಟವನ್ನು ಹಿಡಿದು ಮುನ್ನಡೆ. ಇವು ಸ್ವಾಮಿ ವಿವೇಕಾನಂದರು ಶಿಷ್ಯರನ್ನು ತರಬೇತಿಗೊಳಿಸುವಾಗ ನೀಡುತ್ತಿದ್ದ ಸ್ಫೂರ್ತಿ ನುಡಿಗಳು.
ಸ್ವಾಮೀಜಿ ಅತಿ ಸಾಧಾರಣಾ ಕೆಲಸ ಕಾರ್ಯಗಳಲ್ಲೂ ಏಕಾಗ್ರತೆ, ಪರಿಪೂರ್ಣತೆಗಳಿಂದ ಮಾಡುವ ವಿಧಾನವನ್ನು ಕಲಿಸುತ್ತಿದ್ದರು. ಶಿಷ್ಯರ ಉತ್ತಮ ಅಂಶವನ್ನೂ ಶ್ಲಾಘಿಸಿ ಉತ್ತೇಜಿಸುತ್ತಿದ್ದರು.
ಒಂದು ದಿನ ವಿರಜಾನಂದರು, ಪ್ರಕಾಶಾನಂದರನ್ನು ಕರೆದು ಢಾಕಾದಲ್ಲಿ ರಾಮಕೃಷ್ಣರ ದಿವ್ಯ ಸಂದೇಶಗಳನ್ನು ಹರಡುವ ಕಾರ್ಯದಲ್ಲಿ ಪ್ರವೃತ್ತರಾಗುವಂತೆ ಆದೇಶಿಸಿದರು. ಆಗ ವಿರಜಾನಂದರು, ಸ್ವಾಮೀಜಿ, ನಾನೇನು ಬೋಧಿಸಲಿ, ನನಗೆ ಏನೂ ಗೊತ್ತಿಲ್ಲ ಎಂದರು. 'ಹಾಗಾದರೆ ಅದನ್ನೇ ಬೋಧಿಸು! ನಿಜಕ್ಕೂ ಅದೇ ಒಂದು ದೊಡ್ಡ ಸಂದೇಶ'. 'ನಾನು ಇನ್ನಷ್ಟು ಆಧ್ಯಾತ್ಮಿಕ ಸಾಧನೆ ಮಾಡಿ ಮೊದಲು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತೇನೆ. ಮೊದಲು ನಾನು ನನ್ನ ಮುಕ್ತಿಯನ್ನು ಗಳಿಸಿಕೊಳ್ಳುತ್ತೇನೆ, ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಕು' ಎಂದು ವಿನಂತಿಸಿಕೊಂಡರು. ಆಗ ಸ್ವಾಮೀಜಿ, 'ನೋಡು, ನೀನೇನಾದರೂ ಅತ್ಯುನ್ನತವಾದುದನ್ನು ಪಡೆಯಬೇಕಾದರೆ ಮೊದಲು ಇತರರ ಮುಕ್ತಿಗಾಗಿ ಪ್ರಯತ್ನಿಸು. ವೈಯಕ್ತಿಕ ಮುಕ್ತಿಯ ಆಸೆಯನ್ನು ನಾಶ ಮಾಡಿಬಿಡು. ಇದೇ ಅತಿದೊಡ್ಡ ಅಧ್ಯಾತ್ಮಿಕ ಸಾಧನೆ. ಮೊದಲು ಕಾರ್ಯನಿರತನಾಗು, ಕಾರ್ಯರಂಗಕ್ಕಿಳಿದ ಮೇಲೆಯೇ ಸಾಧನೆಯ ಮಾರ್ಗಗಳು ಗೋಚರಿಸುವುದು' ಎಂದು ಅವರನ್ನು ತರಬೇತಿಗೊಳಿಸಿ ಢಾಕಾಕ್ಕೆ ಕಳುಹಿಸಿದರು.ಟಿ
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

