ಬೈಟುಕಾಫಿ

ಮನನ ಮಾಡಿಸಿ

Published On :

ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಹಾಗೆ ಪರೀಕ್ಷೆ ಎಂಬ ಹಬ್ಬವನ್ನೂ ಸಂಭ್ರಮದಿಂದಲೇ ಆಚರಿಸಬೇಕೆಂದು ಮಕ್ಕಳಿಗೆ ತಿಳವಳಿಕೆ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿ. ರಾತ್ರಿ ಮಕ್ಕಳ ಜೊತೆಯಲ್ಲೇ ತಾಯಿ ಮಲಗುವುದರಿಂದ ಆಗ ಮಕ್ಕಳಿಗೆ ಪ್ಲಸ್ ಪಾಯಿಂಟಗಳನ್ನು ತಿಳಿಸಿ ಹುರಿದುಂಬಿಸಬೇಕು. ಅವರಲ್ಲಿನ ನ್ಯೂನತೆಗಳನ್ನೂ ತಿಳಿಸಿ ಅದನ್ನು ಸರಿಪಡಿಸಿಕೊಳ್ಳಲು ಹೇಳಬೇಕು. ಇದರಿಂದ ಮಕ್ಕಳಲ್ಲಿ ಸುರಕ್ಷತಾ ಭಾವನೆ ಹೆಚ್ಚುತ್ತದೆ. ಬೆಳಗ್ಗೆ ಬೇಗ ಎದ್ದು ಪಾಠಗಳನ್ನು ಮನನ ಮಾಡಿಕೊಳ್ಳಲು ಸೂಚಿಸಿ. ಮುದ್ದಾದ ಕೈ ಬರಹದಿಂದ ಅಂಕಗಳನ್ನು ಹೆಚ್ಚು ಗಳಿಸಲು ಸಾಧ್ಯ ಎಂದು ಮಕ್ಕಳಿಗೆ ತಿಳಿಸಿಕೊಡಿ. ಪರೀಕ್ಷೆಯ ದಿನ ನೀವೇ ಖುದ್ದಾಗಿ ಮಕ್ಕಳನ್ನು ಶಾಲೆಗೆ ಬಿಟ್ಟು 'ಆಲ್ ದ ಬೆಸ್ಟ್‌' ಹೇಳಿ ಬನ್ನಿ. ಇದರಿಂದ ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮ ವಿಶ್ವಾಸ ಮೂಡುತ್ತದೆ.
- ಫ್ಯಾಷನ್ ಡಿಸೈನರ್ ಮಧು, ಹಾಸನ

ನಿಮ್ಮ ವರ್ತನೆ ಆದರ್ಶವಾಗಿರಲಿ
ಬೇಗ ಮಲಗು ಬೇಗ ಏಳು ಎಂಬ ಮಂತ್ರದಿಂದಲೇ ಪಾಲಕರು ಮಕ್ಕಳಿಗೆ ಪರೀಕ್ಷೆಯ ಮೂಲವನ್ನು ಆರಂಭಿಸಬೇಕು. ಪರೀಕ್ಷೆಗೆ ಮುಂಚೆ ಮಿತವಾದ ಮತ್ತು ನಿಯಮಿತವಾದ ಪೌಷ್ಠಿಕ ಆಹಾರ ನೀಡುವುದು. ಯೋಗಾಭ್ಯಾಸ, ಧ್ಯಾನ ಮಾಡುವ ಅಭ್ಯಾಸವನ್ನು ರೂಡಿಸಬೇಕು. ಓದು ಕೇವಲ ಪ್ರಶ್ನೆ-ಪತ್ರಿಕೆಗಳಲ್ಲಿ ಬರುವ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿರದೆ, ಸಂಪೂರ್ಣ ವಿಷಯವನ್ನು ಗ್ರಹಣ ಮಾಡಿ, ವಿಷಯ ನಿಖರತೆಯನ್ನು ತಿಳಿದು ಅರ್ಥೈಸಿಕೊಂಡು ಓದುವಂತೆ ಸಲಹೆ ನೀಡಿ. ಪರೀಕ್ಷೆ ಕೇವಲ ತರಗತಿಯಿಂದ ತರಗತಿಗೆ ಹೋಗುವ ಸಾಧನವಾಗದೆ ಎಲ್ಲಾ ವಿಷಯವನ್ನೂ ಮನದಟ್ಟು ಮಾಡಿಕೊಳ್ಳಲಿ. ಅವರಿಗೆ ಶಿಸ್ತು, ಸಂಯಮಗಳನ್ನು ಕಲಿಸಿ, ಅಧ್ಯಯನಕ್ಕೆ ಅನುಕೂಲವಾಗುವಂತೆ ವೇಳಾಪಟ್ಟಿಹಾಕಿಕೊಳ್ಳಬೇಕು. ರಜೆಯನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತಿಳಿ ಹೇಳಿ, ಅವರ ಮೇಲೆ ಹಕ್ಕು ಚಲಾಯಿಸದೆ, ಅವರೊಂದಿಗೆ ಮೈತ್ರಿ ಬೆಳೆಸಿ. 'ನರಿಯ ಹಾಗೆ ಚಾಣಾಕ್ಷ ಬುದ್ಧಿ, ಬೀರಬಲ್ಲನಲ್ಲಿರುವ ಯುಕ್ತಿ' ಯಂತಹ ಕಥೆಯನ್ನು ಹೇಳಿ ಅವರನ್ನು ಚಾಣಾಕ್ಷರನ್ನಾಗಿಸಿ. ಆತ್ಮಬಲ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಶ್ರಮವಹಿಸಿ.
- ವಿದ್ಯಾ ಉಪೇಂದ್ರ ಜೋಶಿ, ಬೆಳಗಾವಿ

ಯಶಸ್ಸಿನ ಮತ್ತು ಬೇಡ!
ಪರೀಕ್ಷಾ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೆ ಪರೀಕ್ಷೆ ಭಯ ದೂರು ಮಾಡಿ ನಗೆಯ ಮನರಂಜನೆಯೊಂದಿಗೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ಹಾಗೆ ಮಾಡಬೇಕಾಗಿದೆ. ಮಕ್ಕಳು ಸಂತೋಷದಿಂದ ಇದ್ದಲ್ಲಿ ದೇಹದಲ್ಲಿ ಒತ್ತಡದ ಹಾರ್ಮೋನುಗಳ ಮಟ್ಟ ಕುಸಿಯುತ್ತದೆ. ಇದರಿಂದ ಮಕ್ಕಳು ಮಾನಸಿಕವಾಗಿ ಸದೃಢರಾಗಿ ಪರೀಕ್ಷೆ ಎಂಬ ಯುದ್ಧವನ್ನು ಸುಲಭವಾಗಿ ಎದುರಿಸುತ್ತಾರೆ. ಒಂದು ವೇಳೆ ಪಾಲಕರೇ ಮಕ್ಕಳಲ್ಲಿ ಪರೀಕ್ಷೆಯ ಭಯ ಹುಟ್ಟಿಸಿದರೆ 'ಟು ಮಚ್ ಇಸ್ ಟೂ ಬ್ಯಾಡ್‌' ಎನ್ನುವ ಹಾಗೆ ತಮ್ಮ ಮಕ್ಕಳ ದುರಂತದ ಕಥೆಗೆ ಪಾಲಕರೇ ಹೊಣೆಯಾಗಬೇಕಾಗುತ್ತದೆ. ತಾಳ್ಮೆಯಿಂದ ಓದುವುದನ್ನು ಕಲಿಸಿ. ಓದಿದ್ದನ್ನು ಮನನ ಮಾಡಲು ಹೇಳಿ ಅದು ಓದಿದ ಎಲ್ಲ ವಿಷಯವು ಮನಸ್ಸಿನಲ್ಲಿ ಉಳಿಯಲು ಸಹಕರಿಸುತ್ತದೆ.
- ರೇಷ್ಮಾ ಕೆ.ಎ., ಬೈಲಹೊಂಗಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.