ಬೈಟುಕಾಫಿ

ಸವತಿಯಾದ ಉಷೆ

ಸವತಿಯಾದ ಉಷೆ
Published On :

ಮರುಮಿಲನವೆಂಬುದು ಬದುಕಿನ ಸೊಗಸಾದ ಗಳಿಗೆ. ಅದು ಅಪ್ಪ- ಮಕ್ಕಳದ್ದಿರಬಹುದು, ಗೆಳೆಯರದ್ದಿರಬಹುದು.ಆತ್ಮೀಯತೆಯುಳ್ಳ ಗಂಡ- ಹೆಂಡತಿಯರ ಮರುಮಿಲನವು ಒಂದು ಕಾವ್ಯಕ್ಕೆ ವಸ್ತುವಾಗುವಂಥದು. ದುಷ್ಯಂತ- ಶಾಕುಂತಲೆಯರ ಪುನರ್ಮಿಲನವನ್ನೇ ನೋಡಿ. ಇಲ್ಲಿ ನೀಡಿರುವ ಜೋಡಿ ಅಂಥ ಮಹಾನಾಯಕ ನಾಯಕಿಯರೇನಲ್ಲ. ಸಾಮಾನ್ಯ ಪ್ರಿಯತಮ- ಪ್ರಿಯತಮೆಯರ ಈ ಮರುಭೇಟಿಯ ರಾತ್ರಿಯು ನಮ್ಮ ಹಾಸ್ಯಕ್ಕೂ ವಸ್ತುವಾಗಬಹುದು.

ಸಮಾಯತೇ ಕಾಂತೇ ಕಥಮಪಿ ಚ ಕಾಲೇನ ಬಹುನಾ
ಕಥಾಭಿರ್ದೇಶಾನಾಂ ಸಖಿ ರಜನಿರರ್ಧಂ ಗತವತೀ
ತತೋ ಯಾವಲ್ಲೀಲಾಕಲಹಕುಪಿತಾಸ್ಮಿ ಪ್ರಿಯತಮೇ
ಸಪತ್ನೀವ ಪ್ರಾಚೀ ದಿಗಿಯಮಭವತ್ತಾವದರುಣಾ

ನಾಯಕಿಯು ಸಖಿಗೆ ಹೇಳುತ್ತಿದ್ದಾಳೆ: ಗೆಳತಿ, ನನ್ನ ಪ್ರಿಯತಮನು ಸುದೀರ್ಘಕಾಲದ ದೂರಪ್ರವಾಸದಿಂದ ನಿನ್ನೆ ಸಂಜೆ ಹಿಂದಿರುಗಿ ಬಂದನು. ರಾತ್ರಿ ಆತನು ತಾನು ಭೇಟಿ ನೀಡಿದ ಪ್ರದೇಶಗಳ ವೈವಿಧ್ಯ ವೈಚಿತ್ರ್ಯಗಳನ್ನು ಹೇಳುತ್ತಾ ಹೊತ್ತು ಕಳೆದನು. ಅದರಲ್ಲೇ ಅರ್ಧ ರಾತ್ರಿ ಕಲೆಯಿತು. ತದನಂತರ, ಆತನ ಮಾತಿನಲ್ಲಿ ಉಲ್ಲೇಖಿತವಾದ ತರುಣಿಯೊಬ್ಬಳ ನೋವ ಹಿಡಿದು ನಾನು ಕೋಪಿಸಿಕೊಂಡೆ. ನನ್ನ ವಿರಸದಲ್ಲೂ ಆತನ ಸಮಜಾಯಿಷಿಕೆಯಲ್ಲೂ ಹೊತ್ತು ಕಳೆಯಿತು. ಇನ್ನೇನು ಸುರತಸಂಭ್ರಮವನ್ನು ಸವಿಯಲು ಅನುವಾಗಬೇಕು ಅನ್ನುವಷ್ಟರಲ್ಲಿ, ನನ್ನ ಸವತಿ ಅರುಣಾ ಕೆಂಪಾದ ಕೆನ್ನೆಯೊಂದಿಗೆ ಅಲ್ಲಿಗೆ ಬಂದಳು!
ಇಲ್ಲಿ ಅರುಣಾ ಎಂದರೆ ಮುಂಜಾನೆಯ ಆಗಸ. ಸೂರ್ಯ ಮೂಡುವ ಸಮಯದಲ್ಲಿ ಆಗಸ ಕೆಂಪಾಗಿರುವುದು ಸಹಜವಷ್ಟೆ. ಬೆಳಗಾದ ಮೇಲೆ ಸರಸವಾಡಲು ಆಗುವುದಿಲ್ಲವಲ್ಲ. ಆದ್ದರಿಂದ ಅದು ಈ ನಾಯಿಕೆಗೆ ಸವತಿಯೇ ಆಗಿಬಿಟ್ಟಿತು.



- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.