ಚಾಲಕರೇ ಎಚ್ಚರವಿರಲಿ
ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ
ಇದು ಚಾಲಕನ ಮೇಲೆ ಅವಲಂಬಿತ
ನಿರ್ಲಕ್ಷಿಸಿದರೆ ಆಗುವುದು ಅನಾಹುತ
ಇತ್ತೀಚೆಗೆ ನಡೆಯಿತಲ್ಲಾ ಅಬ್ಬರದ ಅಪಘಾತ!
ಗ್ರಾಮೀಣ ಪ್ರದೇಶಕ್ಕೆ ಖಾಸಗಿ ಬಸ್ಸೇ ಜೀವನಾಡಿ
ಟಾಪ್ನಲ್ಲೂ ಪ್ರಯಾಣಿಸುತ್ತಾರೆ ಪರದಾಡಿ
ಊರು ಸೇರಬೇಕು ಹೇಗಾದರೂ ಮಾಡಿ
ಸುರಕ್ಷಿತವಾಗಿ ಬಸ್ಸು ಓಡುತ್ತಿದೆಯೇ ನೋಡಿ!
ಚಾಲಕರಿಗೆ ತರಬೇತಿ ಇರಲಿ
ಕುಡಿಯದಂತೆ ಚಲಾಯಿಸಲಿ
ಧೂಮಪಾನದಿಂದ ದೂರವಿರಲಿ
ಚಾಲನೆಯಲಿ ಮೊಬೈಲ್ ಬಳಸದಿರಲಿ
ರಸ್ತೆಯ ಮೇಲೆಯೇ ಕಣ್ಣು ನೆಟ್ಟಿರಲಿ!
-ಗೀತಾ ಪರಮೇಶ, ಕೋರಮಂಗಲ
ಸ್ಫೋಟಕ ಸಾಗಿಸಬೇಡಿ!
ಹಳ್ಳಿಗಳಲ್ಲಿ ಬೆಳೆದ ಬೆಳೆಯನ್ನು ರೈತರು ಅಲ್ಲಿಯೇ ಮಾರಿದರೆ ಯಾವುದೇ ಲಾಭ ಬರದು. ಹಾಗಾಗಿ ಅದನ್ನು ಹತ್ತಿರದ ನಗರಕ್ಕೆ ಒಯ್ದು ಮಾರಿದರೆ ಉತ್ತಮ ಬೆಲೆ ಸಿಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುವುದಿಲ್ಲ. ಬಂದರೂ ಅದು ಮಧ್ಯಾಹ್ನವೋ, ಸಂಜೆಯೋ ಬರುತ್ತದೆ, ಆಗ ಮಾರುವ ಬೆಳೆಯನ್ನು ಸಾಗಿಸಲು ಸಾಧ್ಯವೇ ಇಲ್ಲ. ವಾಹನದ ಮೇಲೆಯೇ ಬರೆದಿರುತ್ತಾರೆ 'ಅವಸರವೇ ಅಪಘಾತಕ್ಕೆ ಕಾರಣ' ಎಂದು ಆದರೂ ಆದರಂತೆಯೆ ಅಪಘಾತಗಳು ಆಗುತ್ತವೆ. ಹಾವೇರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಸುಮಾರು ದೂರ ಬಸ್ಸು ಉಜ್ಜಿದಾಗ ಡೀಸೆಲ್ ಟ್ಯಾಂಕ್ ಒಡೆ ಯಿತು. ಇದಲ್ಲದೇ ಕೆಲವರು ಬಸ್ಸಿನಲ್ಲಿ ಡೀಸೆಲ್, ಪೆಟ್ರೋಲ್ಗಳನ್ನು ಒಯ್ಯುತ್ತಾರೆ. ಇದು ಅಪಘಾತಕ್ಕೆ ಎಡೆಮಾಡಿ ಕೊಡುತ್ತದೆ. ಹಾಗಾಗಿ ಖಾಸಗಿ ಬಸ್ಸು ಸುರಕ್ಷಿತವಲ್ಲ ಎನ್ನುವುದು ಖಚಿತ.
-ಅಕ್ಷಯ, ಹೈಸ್ಕೂಲ್ ವಿದ್ಯಾರ್ಥಿ, ಗುಲ್ಬರ್ಗಾ
ಅನಿವಾರ್ಯತೆ ಇದ್ದಲ್ಲಿ ಖಾಸಗಿ ಬಸ್ಸು!
ಖಾಸಗಿ ಬಸ್ಸುಗಳ ಪ್ರಯಾಣ ಸುರಕ್ಷಿತವಲ್ಲ ಆದರೂ ಪ್ರಯಾಣ ಅನಿವಾರ್ಯ. ಏಕೆಂದರೆ ಹಳ್ಳಿಗಳಲ್ಲಿ ಹೆಚ್ಚಾಗಿ ಸರ್ಕಾರಿ ಬಸ್ಸುಗಳಿರುವುದಿಲ್ಲ. ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡುವುದರಿಂದ ಯಾರೂ ಯಾವಾಗಲೊ ಬರುವ ಸರ್ಕಾರಿ ಬಸ್ಸಿಗಾಗಿ ಕಾಯುವುದಿಲ್ಲ. ಅಲ್ಲದೇ ಯಾವುದಾದರೂ ರಾಜಕೀಯ ಪಕ್ಷಗಳ ಸಮ್ಮೇಳನಗಳಿಗ ಸರ್ಕಾರಿ ಬಸ್ಸುಗಳನ್ನೇ ತೆಗೆದುಕೊಳ್ಳುತ್ತಾರೆ. ಆಗ ಅನಿವಾರ್ಯವಾಗಿ ಖಾಸಗಿ ಬಸ್ಸುಗಳನ್ನೇ ಅವಲಂಬಿಸಬೇಕಾಗುತ್ತದೆ. ಸರ್ಕಾರಿ ಬಸ್ಸುಗಳಲ್ಲಿ ಯಾವುದೇ ಸ್ಫೋಟಕಗಳನ್ನು ಸಾಗಿಸಲು ಅನುಮತಿ ನೀಡುವುದಿಲ್ಲ. ಆದರೆ ಖಾಸಗಿಯವರು ಯಾವುದೇ ಆತಂಕವಿಲ್ಲದೆ ಈ ಅವಕಾಶವನ್ನು ಮಾಡಿಕೊಡುತ್ತಾರೆ. ಇದನ್ನು ಕಂಡೂ ಕೂಡ ಪ್ರಯಾಣಿಕರು ಇಂತಹ ಬಸ್ಸುಗಳಲ್ಲೇ ಪ್ರಯಾಣಿಸಬೇಕು. ಇದುವೇ ವಸ್ತು ಸ್ಥಿತಿ.
-ರಘು, ದಾವಣಗೆರೆ.
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

