ಹಿಂಭಾರ - ಮುಂಭಾರ

ಕಾಳಿದಾಸನ ಋತುಸಂಹಾರದಲ್ಲಿ ಬರುವ ಒಂದು ವರ್ಣನೆಯಿದು. ಇದು ಶಿಶಿರ ಮಾಸಕ್ಕೆ ಸಂಬಂಧಪಟ್ಟದ್ದು. ಶಿಶಿರ ಎಂದ ಮೇಲೆ ಹೇಳಿ ಕೇಳಿ ಚಳಿ. ಆಗ ನಗರದ ತರುಣಿಯರು ಹೇಗಿರುತ್ತಾರೆ?
ಪೃಥು ಜಘನ ಭಾರಾರ್ಥಾಃ ಕಿಂಚಿತ್ ಆನಮ್ರ ಮಧ್ಯಾಃ
ಸ್ತನ ಭರ ಪರಿಖೇದಾತ್ ಮಂದಂ ಮಂದಂ ವ್ರಜಂತ್ಯಃ
ಸುರತ ಸಮಯ ವೇಷಂ ನೈಷಂ ಆಶು ಪ್ರಹಾಯ
ದಧಾತಿ ದಿವಸ ಯೋಗ್ಯಂ ವೇಷಂ ಅನ್ಯಾಃ ತರುಣ್ಯಃ
ಅವರ ಜಘನಗಳು ತುಂಬಿಕೊಂಡು ಭಾರವಾಗಿವೆ. ಪರಿಣಾಮವಾಗಿ, ಸೊಂಟ ತುಸು ಬಾಗಲೇ ಬೇಕು. ಇನ್ನು ಮುಂಬದಿಯಂತೂ ಬಿಡುವಾಗಿದೆಯೆ? ಇಲ್ಲ, ಅದೂ ಭಾರವನ್ನು ಹೊತ್ತಿದೆ. ಹೀಗಾಗಿ ಎದೆ ಮುಂದಕ್ಕೆ ಬಾಗಿದೆ. ಹೀಗೆ ಸೊಂಟವು ಹಿಂದಕ್ಕೂ, ಎದೆಯು ಮುಂದಕ್ಕೂ ಬಳುಕುತ್ತಿರುವುದರಿಂದ ತರುಣಿಯರಿಗೆ ನಡೆಯುವುದೇ ಕಷ್ಟವಾಗಿಬಿಟ್ಟಿದೆ. ಮೆಲ್ಲಮೆಲ್ಲಗೆ ಚಲಿಸುತ್ತಾರೆ. ಆದರೆ ಇವರು, ಸಂಜೆ ಕವಿದಾಗ ರಾತ್ರಿಗೆ ಮೀಸಲಾದ, ಪ್ರಣಯ ಕೇಳಿಗೆ ಅನುಕೂಲವಾದ ವಸನಗಳನ್ನು ಬೇಗಬೇಗನೆ ತೊಟ್ಟುಕೊಳ್ಳುತ್ತಾರೆ. ಬೆಳಗ್ಗೆ ಎದ್ದು ತಾವಿದ್ದ ಅವಸ್ಥೆಯಿಂದ ಬೇಗಬೇಗನೆ ದಿನ ಉಡುಗೆಗೆ ಬದಲಾಗುತ್ತಾರೆ.
ಹಿಂಭಾರ ಹಾಗೂ ಮುಂಭಾರದ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಒಂದೇ ಕಡೆ ಭಾರ ಹೆಚ್ಚಾದರೆ ಅತಿ, ಸಮನಾಗಿದ್ದರೆ ರತಿ! ಝೀರೋ ಸೈಜ್ಗೆ ಯಾವ ಆಕರ್ಷಣೆಯೂ ಇಲ್ಲ. ಅವೆರಡನ್ನೂ ಬ್ಯಾಲೆನ್ಸ್ ಮಾಡುವುದೇ ಸವಾಲು, ಏನಂತೀರಿ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


