ಆ್ಯಂಟಿಬಯೊಟಿಕ್ಸ್!
ನಮ್ಮ ದೇಹದಲ್ಲಿ ರೋಗಗಳನ್ನು ಉಂಟುಮಾಡುವ ಅತಿ ಸೂಕ್ಷ್ಮಜೀವಿಗಳನ್ನು ಕೊಲ್ಲುವಂತಹ ವಿಶೇಷ ಬಗೆಯ ಔಷಧಗಳಿಗೆ ಆ್ಯಂಟಿಬಯೊಟಿಕ್ಸ್ (Antibiotics) ಎನ್ನುತ್ತಾರೆ. ಇಂದು ಅನೇಕ ರೋಗಗಳನ್ನು ಗುಣಪಡಿಸಲು ಇವುಗಳನ್ನು ಬಳಸಲಾಗುತ್ತದೆ. 'ಆ್ಯಂಟಿಬಯೊಟಿಕ್ಸ್' ಎನ್ನುವ ಶಬ್ದ ಆ್ಯಂಟಿಬಯಾಸಿಸ್ ಎಂಬುದರಿಂದ ಬಂದಿದೆ. 'ಆ್ಯಂಟಿ' ಎಂದರೆ ವಿರುದ್ಧವಾದದ್ದು ಮತ್ತು 'ಬಯಾಸಿಸ್' ಎಂದರೆ ಜೀವ ಎಂದರ್ಥ. ಇದು ಕೆಲವು ಬಗೆಯ ಸೂಕ್ಷ್ಮಜೀವಿಗಳ ವಿರುದ್ಧ ಮಾತ್ರ ಕೆಲಸ ಮಾಡುತ್ತದೆ. ನಿಜವಾಗಿ ಬ್ಯಾಕ್ಟೀರಿಯಾ ಮೋಲ್ಡ್ ಮತ್ತು ಕೆಲವು ಸಸ್ಯಗಳ ಸೂಕ್ಷ್ಮಜೀವಿಗಳ ದೇಹದಿಂದ ತೆಗೆದ ರಾಸಾಯನಿಕ ಪದಾರ್ಥಗಳೇ ಆ್ಯಂಟಿ ಬಯೊಟಿಕ್ಸ್.
ಆ್ಯಂಟಿಬಯಾಟಿಕ್ಸ್ ಪದ ಮೊದಲು ಬಳಕೆಗೆ ಬಂದಿದ್ದು 1942ರಲ್ಲಿ. ಮೊಟ್ಟಮೊದಲ ಆ್ಯಂಟಿಬಯೊಟಿಕ್ಸ್ ಔಷಧದ ಹೆಸರು ಪೆನ್ಸಿಲಿನ್. ಈ ಔಷಧ ನಿಮೋನಿಯಾ, ಕೆಮ್ಮು, ಗಂಟಲು ಊತ ಇತ್ಯಾದಿಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಯಿತು. ಆ್ಯಂಟಿಬಯೊಟಿಕ್ ಔಷಧ ಇಂಜೆಕ್ಷನ್ ಅಥವಾ ಕ್ಯಾಪ್ಸೂಲ್ ಮೂಲಕ ದೇಹಕ್ಕೆ ಸೇರಿದಾಗ ಅದು ರೋಗ ಹರಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

