ಅತಿ ತೂಕ, ದಿಢೀರ್ ತೂಕ ನಷ್ಟ ಎರಡೂ ಅಪಾಯಕಾರಿ

ಪಿತ್ತಗಲ್ಲಿನ ಸಮಸ್ಯೆಗೆ ಹೆಚ್ಚಾಗಿ ತುತ್ತಾಗುವವರು ಎಂದರೆ ಮಧ್ಯವಯಸ್ಕ ಮಹಿಳೆಯರು. ಸಾಮಾನ್ಯವಾಗಿ ಈ ಹಂತದಲ್ಲಿ ಅವರ ದೇಹತೂಕ ಅತಿಯಾಗಿ ಹೆಚ್ಚುವುದೂ ಇದಕ್ಕೆ ಕಾರಣ ಇರಬಹುದು. ದೇಹತೂಕ ಈ ಸಮಯದಲ್ಲೇ ಏಕೆ ಹೆಚ್ಚುತ್ತದೆ ಎಂದರೆ, ಕೌಟುಂಬಿಕವಾಗಿ ಕೆಲವು ಜವಾಬ್ದಾರಿಗಳನ್ನು ಅಂದರೆ ಮಕ್ಕಳ ಮದುವೆ ಇತ್ಯಾದಿಗಳನ್ನು ಪೂರೈಸಿ ನೆಮ್ಮದಿಯ ಭಾವ ತಾಳಿರುತ್ತಾರೆ. 'ಇನ್ನು ಹೇಗಿದ್ದರೇನು' ಎನ್ನುವ ಧೋರಣೆ ಮನದಲ್ಲಿ ಜಾಗ ಪಡೆಯುವುದೂ ಇದೇ ಸಂದರ್ಭದಲ್ಲಿಯೇ. ಮನೆಯಲ್ಲಿ ಸೊಸೆಯಂದಿರು ಬಂದರೆ ಕೆಲಸವೂ ಬಹುಮಟ್ಟಿಗೆ ಕಡಿಮೆ ಆಗುತ್ತದೆ. ಆಹಾರದ ವಿಚಾರದಲ್ಲಿಯೂ ಮೊದಲಿನ ಕಟ್ಟುನಿಟ್ಟು ಇರುವುದಿಲ್ಲ. ಬಾಯಿ ಚಪಲವೂ ನಿಧಾನಕ್ಕೆ ಜಾಸ್ತಿಯಾಗುತ್ತದೆ. ಇವೆಲ್ಲವೂ ಸೇರಿ ದೇಹತೂಕ ಹೆಚ್ಚತೊಡಗುತ್ತದೆ. ದೇಹತೂಕ ಹೆಚ್ಚುವುದು ಎಂದರೆ ಕೊಬ್ಬು ಶೇಖರಣೆಯಾಗುತ್ತಿದೆ ಎಂದು ತಾನೆ?
ಕೇವಲ 10 ಪೌಂಡ್ನಷ್ಟು ತೂಕ ಜಾಸ್ತಿಯಾದರೂ ಪಿತ್ತಗಲ್ಲಿನ ಸಂಭವನೀಯತೆ ದುಪ್ಪಟ್ಟಾಗುತ್ತದೆ ಎನ್ನುವುದು ಪಾಶ್ಚಾತ್ಯ ಆಹಾರ ತಜ್ಞರ ವಾದ. ಅಂದಮೇಲೆ ಮಧ್ಯವಯಸ್ಕ ಹೆಂಗಸರು ದೇಹ ತೂಕದ ಬಗ್ಗೆ ಎಷ್ಟು ಎಚ್ಚರವಹಿಸಬೇಕು ಎನ್ನುವುದನ್ನು ಯೋಚಿಸಿ. ಕೆಲವು ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಸಹಜ ತೂಕ ಹೊಂದಿರುವ ಸ್ತ್ರೀಯರಿಗಿಂತ ಅಧಿಕ ದೇಹತೂಕ ಹೊಂದಿರುವ ಮಹಿಳೆಯರಲ್ಲಿ ಪಿತ್ತಗಲ್ಲಿನ ಸಾಧ್ಯತೆ ಆರು ಪಟ್ಟು ಹೆಚ್ಚು! ಅಧಿಕ ಕೊಬ್ಬು ಶೇಖರಣೆಯಾದಾಗ ಶರೀರದಲ್ಲಿ ಆಂತರಿಕವಾಗಿ ಉತ್ಪಾದನೆಯಾಗುವ ಕೊಲೆಸ್ಟರಾಲ್ ಪ್ರಮಾಣ ಹೆಚ್ಚುತ್ತದೆ. ನಂತರ ಇದು ಬೈಲ್ನೊಳಕ್ಕೆ ಸೇರಿಕೊಂಡು ಪಿತ್ತಗಲ್ಲಿನ ರಚನೆಗೆ ಕಾರಣವಾಗುತ್ತದೆ ಎನ್ನುವುದು ಈ ಕುರಿತಾಗಿ ಇರುವ ಅಭಿಪ್ರಾಯ. ನೀವು ಅಗತ್ಯಕ್ಕಿಂತ ಹೆಚ್ಚು ಟೈಗ್ಲಿಸರೈಡ್ಗಳನ್ನು ಹೊಂದಿದ್ದರೆ, ನಿಮ್ಮಲ್ಲಿ ಎಚ್ಡಿಎಲ್ ಕೊಲೆಸ್ಟರಾಲ್ ಮಟ್ಟ ಜಾಸ್ತಿ ಇದ್ದರೆ ಪಿತ್ತಗಲ್ಲಿನ ತೊಂದರೆಗೆ ನೀವು ಬಹಳ ಸನಿಹದಲ್ಲಿದ್ದೀರಿ ಎಂದೇ ಭಾವಿಸಿಕೊಳ್ಳಬಹುದು.
ತೂಕ ಕಳೆದುಕೊಳ್ಳುವ ಭರದಲ್ಲಿ ನಿಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಏಕಾಏಕಿ ಕಡಿಮೆ ಮಾಡಿಕೊಳ್ಳುವುದೂ ಸಲ್ಲದು. ಅದು ಕೂಡ ಪಿತ್ತಗಲ್ಲಿನ ರಚನೆಗೆ ಕಾರಣ ಆಗಬಹುದು. ನಿತ್ಯದ ಆಹಾರದಲ್ಲಿ 5ರಿಂದ 10 ಗ್ರಾಮ್ನಷ್ಟು ಕೊಬ್ಬು ಇರಲೇಬೇಕು. ವಾರದಲ್ಲಿಯೇ ಗಣನೀಯ ಪ್ರಮಾಣದಲ್ಲಿ ಇಳಿಸಿಕೊಳ್ಳುವ ಹಠ ಬೇಡ. ನಿಧಾನವಾಗಿ ತೂಕ ಇಳಿಸಿಕೊಳ್ಳುವ ವಿಧಾನಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎನ್ನುವುದು ತಜ್ಞರ ಸಲಹೆ.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


