ಆ ಹಾವು ಕಚ್ಚಿದರೆ

ಇಷ್ಟಾದರೂ ಭರ್ತೃಹರಿಯ ಭವರೋಗ ಹಿಂಗಲಿಲ್ಲ. ಅಷ್ಟರಲ್ಲಾಗಲೇ ಪಿಂಗಳೆಗೆ ತನ್ನ ಭೋಗಲಾಲಸೆ ಜಿಗುಪ್ಸೆ ತಂದಿತ್ತು. ಆಕೆಯಾಗಲೇ ನಾರುಡೆಯುಟ್ಟು ಕಾಡಿನತ್ತ ತಿರುಗಿದ್ದಳು. ಭರ್ತೃಹರಿ ಆಕೆಯನ್ನು ಹಿಂಬಾಲಿಸಿದ. ನೀನು ತಿರುಗಿಬಂದರೆ ನಾವಿನ್ನೂ ಸಂಸಾರ ನಡೆಸಬಹುದು ಎಂದು ಗೋಗರೆದ. ಆದರೆ ಪಿಂಗಳೆ ಕಲ್ಲಾಗಿದ್ದಳು. 'ನಿನಗಿನ್ನೂ ನಿಜವಾದ ವೈರಾಗ್ಯ ಬಂದಿಲ್ಲ' ಎಂದಳು. ಭರ್ತೃಹರಿ ಹೀಗೆಂದು ಗೊಣಗಿಕೊಂಡಿರಬೇಕು:
ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾ ಪರಮಹಂ ದಷ್ಟೋ ನ ತಚ್ಚಕ್ಷುಷಾ
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ವೈದ್ಯೋ ನ ಚಾಪ್ಯೌಷಧಮ್
ನಾನು ಒಂದು ಮಹೋರಗದಿಂದ ಕಚ್ಚಲ್ಪಟ್ಟೆ! ಅದು ದೀರ್ಘವಾದದ್ದು, ಬಹಳ ತೇಜಸ್ಸಿನಿಂದ ಕೂಡಿದ್ದು, ವಕ್ರವಾಗಿ ಚಲಿಸುವುದು, ನೈದಿಲೆಯ ಚೆಲುವಿನಿಂದ ಕೂಡಿದ್ದು, ಭೋಗದಿಂದ ಕೂಡಿದ್ದು. ಈ ಹಾವು ಕಚ್ಚಿದವನಿಗೆ ಯಾವ ಚಿಕಿತ್ಸೆಯೂ ಇಲ್ಲ! ಈ ಹೆಣ್ಣಿನ ಕಣ್ಣಿನ ನೋಟದಿಂದ ಕಡಿಸಿಕೊಂಡವನಿಗೆ ಯಾವ ವೈದ್ಯನೂ ಇಲ್ಲ, ಮದ್ದೂ ಇಲ್ಲ.
ಭೋಗ ಎಂದರೆ ಎರಡರ್ಥ- ಹೆಡೆ ಮತ್ತು ಸುಖ. ಇದನ್ನು ಓದುವಾಗ ನಮಗೆ ನಮ್ಮದೇ ಅನುಭಾವ ಕವಿಗಳಾದ ಶಿಶುನಾಳ ಫರೀಫರ 'ಹಾವು ತುಳಿದೇನೇ ಮಾನಿನಿ' ಎಂಬ ಪದ್ಯ ನೆನಪಾಗದಿರದು. ಅಲ್ಲೂ ಷರೀಫರು ಭೋಗವನ್ನು ಹಾವಿಗೆ ಹೋಲಿಸಿದ್ದಾರೆ. ತಾನು ಅದನ್ನು ತುಳಿದು ನಿಂತೆನೆಂದೂ, ಜಿತೇಂದ್ರಿಯನಾದೆನೆಂದೂ, ಆದರೂ ತನ್ನ ಜೀವ ಅರೆಕ್ಷಣ ಕಳವಳಿಸಿತೆಂದೂ ಹೇಳಿದ್ದಾರೆ. ಭರ್ತೃಹರಿಯ ಜೀವಿತವಿಡೀ ಭೋಗೋರಗದ ತೆಕ್ಕೆಯಲ್ಲಿ ಕಳವಳಿಸಿ, ಕೊನೆಗೂ ಅದರಿಂದ ಬಿಡಿಸಿಕೊಂಡ ಕಥೆ. ತದನಂತರ ಆತ ಋಷಿಯಾದ, ಕವಿಯಾದ.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


