ಬೈಟುಕಾಫಿ

ಬಡಿತ ಮಿಡಿತಗಳಲ್ಲಿ ರಾಷ್ಟ್ರಪ್ರೀತಿ

Published On :

ಒಮ್ಮೆ ಸ್ವಾಮೀಜಿಯವರ ಶಾಲಾ ಸಹಪಾಠಿ ಜೋಗೇಶ್ಚಂದ್ರ ದತ್ತ ಮಾತಿನ ಮಧ್ಯೆ, 'ಭಾರತದ ಬುದ್ಧಿವಂತ ಪದವೀಧರರು ಇಂಗ್ಲೆಂಡಿಗೆ ಹೋಗಿ ಸಿವಿಲ್ ಸರ್ವೀಸ್ ಪರೀಕ್ಷೆ ಶಿಕ್ಷಣ ಪಡೆಯಲು ಸಾಧ್ಯವಾಗುವಂತೆ ಅವರಿಗಾಗಿ ನಿಧಿ ಸಂಗ್ರಹ ಮಾಡಬೇಕು. ಹೀಗೆ ಶಿಕ್ಷಣ ಪಡೆದು ಬಂದ ಯುವಕರು ಭಾರತದ ಆರ್ಥಿಕ ಉನ್ನತಿಗಾಗಿ ಶ್ರಮಿಸಬಲ್ಲರು' ಎಂದರು. ಸ್ವಾಮೀಜಿ ಅವರ ಸಲಹೆಯನ್ನು ತಳ್ಳಿ ಹಾಕಿ, 'ಮೇಲ್ನೋಟಕ್ಕಷ್ಟೇ ಈ ಯೋಜನೆ ಅದ್ಭುತವಾಗಿ ತೋರಬಹುದು. ಆದರೆ ಹಾಗೆ ಶಿಕ್ಷಣ ಪಡೆದು ಅಧಿಕಾರಿಗಳಾದವರು ಭಾರತಕ್ಕಾಗಿ ಶ್ರಮಿಸುವುದಿರಲಿ, ಭಾರತೀಯರ ಹತ್ತಿರವೂ ಬರದೆ ಐರೋಪ್ಯರೊಂದಿಗೆ ಬೆರೆತು ಐರೋಪ್ಯರಂತೆಯೇ ಆಗಿ ಬಿಡುತ್ತಾರೆ. ಭಾರತದ ಅಭಿವೃದ್ಧಿಯ ಬಗ್ಗೆ ಭಾರತೀಯರೇ ಸಂಪೂರ್ಣ ಉದಾಸೀನರಾಗಿ ಕುಳಿತಿದ್ದಾರೆ. ಭಾರತೀಯರಿಗೆ ತಾವು ಮೇಲೇಳಬೇಕು, ಇತರರಂತೆಯೇ ಮುನ್ನಡೆಯಬೇಕು ಎಂಬ ಆಸೆಯೇ ಇಲ್ಲ' ಎಂದು ದುಃಖದಿಂದ ಹೇಳುತ್ತಿರುವಾಗ ಸ್ವಾಮೀಜಿಯವರ ಕಣ್ಣುಗಳಲ್ಲಿ ನೀರು ತುಂಬಿರುವುದನ್ನು ಕಂಡು ಜೋಗೇಶ್ಚಂದ್ರರ ಹೃದಯ ಕರಗಿಹೋಯಿತು.
ಜೋಗೇಶ್ಚಂದ್ರರು ತಮ್ಮ ಸ್ಮೃತಿಕೋಶದಲ್ಲಿ ಬರೆಯುತ್ತಾರೆ, 'ಅವರಾದರೋ ತ್ಯಾಗಿಗಳು, ಪ್ರಪಂಚವನ್ನು ತ್ಯಜಿಸಿದವರು. ಆದರೆ ಭಾರತವು ಅವರ ಪ್ರಾಣದ ಪ್ರಾಣವಾಗಿತ್ತು. ಭಾರತಕ್ಕಾಗಿ ಅವರು ಕಣ್ಣೀರ್ಗರೆದರು, ಭಾರತಕ್ಕಾಗಿ ಮಡಿದರು! ಅವರ ಹೃದಯದ ಬಡಿತದಲ್ಲಿ ಭಾರತ! ನಾಡಿಗಳ ಮಿಡಿತದಲ್ಲಿ ಭಾರತ! ಅವರ ಜೀವಿತದಲ್ಲಿ ಭಾರತವು ಬಿಡಿಸಲಾರದಂತೆ ಬೆರೆತಿತ್ತು'. ಇನ್ನೊಮ್ಮೆ ಮಿಸ್ ಮೆಕ್‌ಲಾಡ್, 'ಸ್ವಾಮೀಜಿ, ನಾನು ನಿಮಗೆ ಅತ್ಯುತ್ಕೃಷ್ಟವಾದ ರೀತಿಯಲ್ಲಿ ಹೇಗೆ ನೆರವಾಗಬಲ್ಲೆ?' ತಕ್ಷಣ ಸ್ವಾಮೀಜಿ, 'ಭಾರತವನ್ನು ಪ್ರೀತಿಸು' ಎಂದರು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.