ವಿದ್ಯೆ ಕೊಡಿಸಿದ್ದೆ ಮುಳುವಾಯಿತೆ?
ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ ಅದರ ಜೊತೆಗ ಅನಾಥಾಶ್ರಮವೂ ಆಗುತ್ತಿದೆ. ಇಂದಿನ ಸಮಾಜದಲ್ಲಿ ಯಾರೂ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುತ್ತಿಲ್ಲ. ಅಲ್ಲದೇ ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸಿ ಉನ್ನತ ವ್ಯಾಸಂಗಕ್ಕಾಗಿ ನಗರಕ್ಕೆ ಕಳಿಸುತ್ತಾರೆ. ಅಲ್ಲದೆ ಅಲ್ಲಿಯೇ ಒಂದು ಉದ್ಯೋಗಸಿಗಲೆಂದು ಬಯಸುತ್ತಾರೆ. ಅಲ್ಲಿಯೇ ನೆಲಸುವ ಮಕ್ಕಳು ತಮ್ಮ ಪೋಷಕರನ್ನು ಕರೆದೊಯ್ಯುವ ಯೋಚನೆ ಮಾಡುವುದಿಲ್ಲ. ಮಾಡಿದರೂ ನಗರ ಜೀವನಕ್ಕೆ ಹೊಂದಿಕೊಳ್ಳದೇ ಮತ್ತೆ ಹಳ್ಳಿಗೆ ಮರಳುತ್ತಾರೆ. ವಯಸ್ಸಾದವರ ಸ್ಥಿತಿ ಮಾತ್ರ ಶೋಚನೀಯ. ಅಂತಹವರನ್ನು ನೋಡಿಕೊಳ್ಳಲು ದುಡ್ಡಿದ್ದವರು ಕೆಲಸದವರನ್ನು ನೇಮಿಸಿದರೆ, ಮತ್ತೆ ಕೆಲವರು ಆಗೊಮ್ಮೆ ಈಗೊಮ್ಮೆ ಹೋಗಿ ಬರುತ್ತಾರಷ್ಟೆ. ಇದು ಹಿರಿಯರ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಬಹುದು ಯೋಚಿಸಿ ನೋಡಿ.
ಮುಕ್ತಾ. ವಿ. ಆರ್, ವಿ.ಜಿ.ದೊಡ್ಡಿ, ಮಾಗಡಿ.
ಪ್ರೀತಿ-ವಿಶ್ವಾಸದ ಕೊರತೆ
ತಮ್ಮ ಎಲ್ಲಾ ಸುಖಗಳನ್ನು ಬದಿಗೊತ್ತಿ ತಮ್ಮ ಮಕ್ಕಳಿಗಾಗೆ ಎಷ್ಟೋ ತ್ಯಾಗಗಳನ್ನು ಮಾಡಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ನಗರದ ಹಾಸ್ಟೆಲ್ಗಳಲ್ಲಿ ಬಿಟ್ಟು ತಾವು ಊಟ-ತಿಂಡಿಗಳ ಲಕ್ಷ್ಯವಿಲ್ಲದೆ ದುಡಿದು ತಮ್ಮ ಮಕ್ಕಳ ಏಳಿಗೆಗೆ ಶ್ರಮಿಸುತ್ತಾರೆ. ಆದರೆ, ಇದೇ ಮಕ್ಕಳು ತಮ್ಮ ಓದು ಮುಗಿದ ಮೇಲೆ ಅಲ್ಲಿ ಕೆಲಸ ಗಿಟ್ಟಿಸಿ ಮದುವೆ, ಮಕ್ಕಳು ಎಂದು ಅಲ್ಲಿಯೇ ನೆಲೆಸುತ್ತಾರೆ. ಅಲ್ಲಿ ಅವರವರ ಜವಾಬ್ದಾರಿಯನ್ನೇ ನೋಡಿಕೊಳ್ಳುತ್ತಾ ಪೋಷಕರನ್ನು ನೋಡಿಕೊಳ್ಳುವುದು ಅಷ್ಟರಲ್ಲೇ ಇದೆ. ಎಷ್ಟೇ ರ್ಯಾಂಕ್ ಪಡೆದು ಎಂತಹ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಅದಕ್ಕೆಲ್ಲ ಕಾರಣ ಪೋಷಕರು ಎಂಬುದನ್ನು ಬಹುತೇಕರು ಮರೆತೇ ಬಿಡುತ್ತಾರೆ. ನಾಳೆ ತಮ್ಮ ಮಕ್ಕಳು ತಮಗೆ ಹೀಗೆ ಮಾಡುತ್ತಾರೆಂಬುದನ್ನು ಅರಿಯಬೇಕು. ಎಷ್ಟೇ ಕೆಲಸದ ಒತ್ತಡವಿದ್ದರೂ, ಸಮಯದ ಅಭಾವವಿದ್ದರೂ, ಮನುಷ್ಯತ್ವದಿಂದ ಸಾಕಿ ಸಲುಹಿದವರಿಗೆ ಪ್ರೀತಿ-ವಿಶ್ವಾಸ, ಒಂದೆರಡು ಸಿಹಿ ನುಡಿಗಳನ್ನು ಆಡುವುದು, ಪ್ರೀತಿಯಿಂದ ಆರೈಕೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ಇಂದಿನ ಯುವ ಜನರು ಮೈಗೂಡಿಸಿಕೊಳ್ಳಬೇಕು.
ಗೀತಾ ಶ್ರೀನಿವಾಸ್, ಮೈಸೂರು.
ಪಾಳು ಬೀಳುತ್ತಿರುವ ಭೂಮಿ!
'ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು' ಎಂಬ ಮಾತಿತ್ತು. ಆದರೆ ಹಳ್ಳಿಗರೇ ಇಂದು ತಮ್ಮ ಜನ್ಮಭೂಮಿಯನ್ನು ತೊರೆಯುತ್ತಿರುವುದು ಸಮಂಜಸವಲ್ಲ. ಕಾರಣ ಇಂದಿನ ಯುವಜನಾಂಗ ಮಾಧ್ಯಮಗಳ ಸೆಳೆತಕ್ಕೊಳಗಾಗಿ ನಗರಗಳತ್ತ, ವಿದೇಶಗಳತ್ತ ವಾಲುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ದೇಹಕ್ಕೆ ಸುಖ ನೀಡುವ ಆಹಾರವನ್ನು ಬೆಳೆಯುವ ಕಾರ್ಯದಿಂದ ಪಲಾಯನವಾಗುತ್ತಿದ್ದಾರೆ. ತಮಗೆ ನಗರದಲ್ಲಿ ಸಿಗುವ ಸಿದ್ಧ ಆಹಾರದ ರುಚಿಗೆ ಹೊಂದಿಕೊಂಡುಬಿಟ್ಟಿದ್ದಾರೆ. ದುಡ್ಡು, ಅಧಿಕಾರ, ಅಂತಸ್ತುಗಳ ಅಂಧಕಾರದಲ್ಲಿ ತೇಲುತ್ತಿರುವ ಈ ಯುವಕರಿಗೆ ಹೆತ್ತ ತಂದೆತಾಯಿರು ಭಾರವಾಗಿದ್ದಾರೆ. ನಮ್ಮ ಸಂಪ್ರದಾಯ, ಸಂಸ್ಕೃತಿಗಳಿಗೆ ಬೆಲೆಕೊಡದೇ ವೃದ್ಧಾಶ್ರಮಗಳಿಗೆ ತಳ್ಳುತ್ತಿದ್ದಾರೆ. ತಮ್ಮ ನೆಲೆಯನ್ನು ಇಂದಿನ ಯುವ ಪೀಳಿಗೆ ಮರೆತು ಕೂತಿರುವುದು ಇದಕ್ಕೆ ಕಾರಣವಾಗಿದೆ.
ರಂಜನಾ. ಆರ್. ದೇಶಪಾಂಡೆ, ಧಾರವಾಡ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

