ಅಮೂಲ್ಯ ಸಮಯ ಉಳಿಸಿ
ಮಕ್ಕಳ ಕೈಗೆ ಮೊಬೈಲ್ ಕೊಡುವದರಿಂದ ಅವರ ಅಮೂಲ್ಯ ಸಮಯ ಹಾಳಾಗುತ್ತಿದೆ, ಮೊಬೈಲ್ ಗೇಮ್ನಲ್ಲೆ ಕಳೆಯುತ್ತಿದ್ದಾರೆ. ಇದರಿಂದ ಅವರು ದೈಹಿಕವಾಗಿ, ಮಾನಸಿಕವಾಗಿಯೂ ಮನರಂಜನೆ ಕೊಡುವಂತಹ ಆಟಗಳು ಕಳೆದುಕೊಳ್ಳುತ್ತಿದ್ದಾರೆ. ವರ್ಷ ತುಂಬದ ಮಗು ಸಹಿತ ಮೊಬೈಲ್ ಕೈಗೆ ಕೊಟ್ಟರೆ ಕಿವಿಯ ಹತ್ತಿರ ಹಿಡಿಯುತ್ತದೆ. ಹುಟ್ಟಿದಾಗಿನಿಂದಲು ಮಕ್ಕಳ ಮೇಲೆ ಇಷ್ಟೊಂದು ಮೊಬೈಲ್ ಪ್ರಭಾವವೆಂದರೆ ಭವಿಷ್ಯದ ಆರೋಗ್ಯದಲ್ಲಿ ಆಪತ್ತು ತರಬಹುದು. ಮಕ್ಕಳ ಆಟಗಳಾದ ಕಣ್ಣಾಮುಚ್ಚಾಲೆ, ಕುಂಟುಬಿಲ್ಲೆಯಂತಹ ಆಟಗಳು ಕಾಣೆಯಾಗುತ್ತಿದೆ. ಕಡ್ಡಾಯವಾಗಿ ಮಕ್ಕಳು ವಯಸ್ಸಿಗೆ ಒಂದು ಹಂತ ತಲುಪಿದಾಗ ಮಾತ್ರ ಅವರಿಗೆ ಮೊಬೈಲ್ ವ್ಯವಸ್ಥೆ ಮಾಡಬೇಕು. ಟಿ
= ವಿಜಯಕುಮಾರ ಎಸ್. ಗುಂಗೆ, ಬೇಲೂರು
ಮೊಬೈಲ್ ಮಕ್ಕಳಿಗೂ ಅಗತ್ಯ
ಬದಲಾದ ಆಧುನಿಕತೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಉಪಯೋಗ ಅತಿಯಾಗಿದ್ದು, ಅದರನ್ನು ಯಾವ ಸಂದರ್ಭ, ಸಮಯದಲ್ಲಿ ಬಳಕೆ ಮಾಡಬೇಕೋ ಆ ಸಮಯ ಸಂದರ್ಭದಲ್ಲಿ ಬಳಕೆ ಮಾಡಿದರೆ ಒಳಿತು. ವೇಗದ ಜೀವನದಲ್ಲಿ ಮಕ್ಕಳಿಗೆ ಈ ವಯಸ್ಸಿನಲ್ಲಿಯೇ ಮೊಬೈಲ್ ನೀಡಬೇಕೆಂಬುದು ಸೂಕ್ತವಲ್ಲ. ಟಿವಿಯನ್ನು ನೋಡುವ ಮಕ್ಕಳು ಮೊಬೈಲ್ ಹಿಡಿದರೆ ತಪ್ಪು ಎನ್ನುವುದು ಯಾವ ನ್ಯಾಯ? ಕಾಲಘಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಸರಿಯಲ್ಲವೇ ಬೆಳೆಯುತ್ತಿರುವ ಜಾಗತೀಕರಣದಲ್ಲಿ ಎಲ್ಲಾ ವಯೋವಾನಕ್ಕೂ ಈ ಮೊಬೈಲ್ ಬೇಕಾಗಿದೆ. ಮಕ್ಕಳು ಹಾಳಾಗುತ್ತಾರೆಂದೋ ಅಥವಾ ಬಳಕೆ ಮಾಡಬಾರದೆಂದೋ ತಿಳಿಯದು. ಒಂದಲ್ಲ ಒಂದು ಬಾರಿ ಮಗುವೇ ನಮ್ಮ ರಕ್ಷಣೆ ಮಾಡುವ ಸಂಭವ ಬರಬಹುದು. ಟಿ
= ಚಳ್ಳಕೆರೆ ವೀರೇಶ್
ಮೊಬೈಲ್ ಕೂಡ ಮಾದಕ
ಮೊಬೈಲ್ ಹಲವು ತುರ್ತು ಸಂದರ್ಭಗಳಲ್ಲಿ ನೆರವು ನೀಡುವ ಸಾಧನವಾದರೂ, ಅದರ ವಿಪರೀತ ಬಳಕೆ ದೈಹಿಕ ಮತ್ತು ಮಾನಸಿಕ ತೊಂದರೆಗೆಳಿಗೆ ಹೇತುವಾಗಿದೆ. ಅದರಲ್ಲೂ ಮಕ್ಕಳ ಮೇಲೆ ಇದು ಬೀರುವ ಪರಿಣಾಮ ಅಧಿಕ. ಮೊಬೈಲನ್ನು ಹದಿಹರೆಯದವರಿಗೆ ನಿಷೇಧಿಸಲ್ಪಟ್ಟ ವಸ್ತುವಾಗಿ ಮಾಡುವುದೊಳಿತು. ಕಲ್ಪನಾ ಲೋಕದಲ್ಲಿ ವಿಹರಿಸುವ ಇವರಿಗೆ ಇದೊಂದು ಮಾದಕ ವಸ್ತುವೆಂದೇ ಹೇಳಬಹುದು. ಹಳ್ಳಿಗಳಲ್ಲಿ ಹುಡುಗ ಹುಡುಗಿ ಮನೆಯಿಂದ ಕದ್ದು ಓಡಿ ಹೋಗುತ್ತಿರುವುದು ಇತ್ತೀಚೆಗೆ ಮಿರಿ ಮೀರುತ್ತಿದೆ. ಇದರ ಹಿಂದೆ ಮೊಬೈಲಿದೆ ಎಂದು ಖಂಡಿತವಾಗಿ ಹೇಳಬಹುದು. ಯಾವುದೇ ವಸ್ತುವನ್ನು ಅದರ ಸಾಧಕ ಬಾಧಕಗಳನ್ನು ಅರ್ಥಮಾಡಿಕೊಂಡವರ ಕೈಗಷ್ಟೇ ಕೊಡುವುದು ವಿಹಿತ. ಟಿ
= ರಾಯಲ್ಪಾಡು ರಾಘವೇಂದ್ರರಾವ್, ಕೋಲಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

