ಬೈಟುಕಾಫಿ

ವೆಜಿಟೇಬಲ್ ಪಕೋಡ

ವೆಜಿಟೇಬಲ್ ಪಕೋಡ
Published On :

ಮಳೆಗಾಲ ಮತ್ತೆ ಬಂದಿದೆ. ಗರಿಗರಿ, ಬಿಸಿಬಿಸಿ ಕುರುಕಲು ತಿಂಡಿ ಹೆಸರೆತ್ತಿದ್ರೆ ಸಾಕು, ಬಾಯಲ್ಲಿ ನೀರೂರುತ್ತೆ. ಹೊರಗಡೆ ಆರೋಗ್ಯ ಹಾಳು ಮಾಡಿಕೊಳ್ಳುವ ಭಯದಲ್ಲೇ ಬೇಡದ ಎಣ್ಣೆಯಲ್ಲಿ ಕರಿದ, ಕಳಪೆ ಮಟ್ಟದ ಹಿಟ್ಟಿನಿಂದ ತಯಾರಿಸಿದ ತಿಂಡಿಗಳನ್ನು ತಿನ್ನುವುಕ್ಕಿಂತ ಮನೆಯಲ್ಲೇ ಕುಳಿತು ಸುಲಭವಾಗಿ ರುಚಿಕಟ್ಟಾದ ಕರಿದ ತಿಂಡಿ ತಯಾರಿಸಿಕೊಳ್ಳಿ.
ಬೇಕಾಗುವ ಪದಾರ್ಥಗಳು:  ಒಂದು ಕಪ್ಪು ಮೈದಾ ಹಿಟ್ಟು, 2 ಟೀಸ್ಪೂನ್ ಎಣ್ಣೆ, 1 ಚಮಚ ಜೀರಿಗೆ, ಅರ್ಧ ಚಮಚ ಉಪ್ಪು, 1ರಿಂದ 2 ಹೆಚ್ಚಿದ ಹಸಿಮೆಣಸಿನಕಾಯಿ, ಅರ್ಧ ಲೋಟ ನೀರು, ಬೇಯಿಸಿ ಹೆಚ್ಚಿದ ಆಲೂಗಡ್ಡೆ, ಕೋಸು, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ.

ಮಾಡುವ ವಿಧಾನ:  ಮೈದಾ ಹಿಟ್ಟಿಗೆ ಉಪ್ಪು, ಜೀರಿಗೆ, ಹಸಿಮೆಣಸು, ಎಣ್ಣೆ, ನೀರು ಸೇರಿಸಿ ಚೆನ್ನಾಗಿ ಕಲೆಸಿ. ಅರ್ಧ ಗಂಟೆ ಮಿಶ್ರಣವನ್ನು ಪಕ್ಕಕ್ಕಿಡಿ. ನಂತರ ತರಕಾರಿಗಳನ್ನು ಸೇರಿಸಿ ಕುದಿಯುತ್ತಿರುವ ಎಣ್ಣೆಗೆ ಇಷ್ಟಿಷ್ಟೇ ಹಿಟ್ಟನ್ನು ಬಿಡಿ. ಕೆಂಪಾಗುವವರೆಗೆ ಬೇಯಿಸಿ ಎಣ್ಣೆ ಬಸಿಯುವಂತ ಪಾತ್ರೆಗೆ ಹಾಕಿಡಿ. ಈಗ ವೆಜಿಟೇಬಲ್ ಪಕೋಡ ಚಟ್ನಿ ಇಲ್ಲವೇ ಟೊಮ್ಯಾಟೋ ಸಾಸ್‌ನೊಂದಿಗೆ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.