ಬೈಟುಕಾಫಿ

ಚಿನ್ನದ ಎಸೆತ

ಚಿನ್ನದ ಎಸೆತ
Published On :

ಅಂತಾರಾಷ್ಟ್ರೀಯ ಜಾವೆಲಿನ್ ಪಟು, ಕರ್ನಾಟಕದ ಕಾಶೀನಾಥ ನಾಯ್ಕ ಅವರ ಗರಡಿಯಲ್ಲಿ ಪಳಗಿದ ಇಬ್ಬರು ಕ್ರೀಡಾಪಟುಗಳು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲು ಅರ್ಹತೆ ಪಡೆದುಕೊಂಡಿದ್ದಾರೆ.
2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಜಾವಲಿನ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿಯನ್ನು ಬೆಳಗಿದ ಅಂತಾರಾಷ್ಟ್ರೀಯ ಕ್ರೀಡಾಪಟು ಕಾಶೀನಾಥ ನಾಯ್ಕ. ಇವರ ಗರಡಿಯಲ್ಲಿ ಪಳಗುತ್ತಿರುವ ಇಬ್ಬರು ಶಿಷ್ಯರು ಜೂನ್ 7ರಂದು ಶನಿವಾರ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಹೊಸ ದಾಖಲೆ ಬರೆದರು.
ಕಾಶೀನಾಥ ನಾಯ್ಕ ಶಿಷ್ಯೆ, ಉತ್ತರ ಪ್ರದೇಶದ ಅನುರಾಣಿ ಮಹಿಳೆಯರ ವಿಭಾಗದ ಅಥ್ಲೆಟಿಕ್ಸ್ ಜಾವಲಿನ್‌ನಲ್ಲಿ 58.83 ಮೀಟರ್ ಎಸೆದು ದಾಖಲೆ ಬರೆದರು. ಭಾರತದ ಮಹಿಳಾ ವಿಭಾಗದಲ್ಲಿ ಗುರುಮಿತ್ ಕೌರ್ ಅವರ 58.64 ಮೀಟರ್ ಎಸೆತ ಇದುವರೆಗಿನ ದಾಖಲೆಯಾಗಿತ್ತು. ಮತ್ತೊಬ್ಬ ಶಿಷ್ಯ ಪಂಜಾಬ್‌ನ ದೇವೇಂದ್ರ ಸಿಂಗ್ 76.60 ಮೀಟರ್ ಎಸೆದರು. ಇಬ್ಬರೂ ಕಾಮನ್‌ವೆಲ್ತ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅಣಿಯಾಗಿದ್ದಾರೆ.
ಪಟಿಯಾಲದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಶೀನಾಥ ನಾಯ್ಕ ಬಳಿ ಅನುರಾಣಿ ಹಾಗೂ ದೇವೇಂದ್ರ ಸಿಂಗ್ ಒಂದೂವರೆ ವರ್ಷದಿಂದ ತರಬೇತಿ ಪಡೆಯುತ್ತಿದ್ದಾರೆ. ಇಬ್ಬರೂ ಪ್ರತಿ ದಿನ 7 ತಾಸು ತರಬೇತಿ ಪಡೆಯುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆಯಂತಹ ಕುಗ್ರಾಮದಲ್ಲಿ ಜನಿಸಿದ ಕಾಶೀನಾಥ ನಾಯ್ಕ ಬಡತನವನ್ನು ಮೆಟ್ಟಿ ನಿಂತು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಿರಂತರ ಬೆವರು ಸುರಿಸಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಜಾವಲಿನ್‌ನಲ್ಲಿ ಪದಕ ಗೆದ್ದಿದ್ದರು. ನಂತರ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ  ಹಾಗೂ ಏಕಲವ್ಯ  ಪ್ರಶಸ್ತಿ ನೀಡಿ ಗೌರವಿಸಿದೆ. ಬಡತನದಿಂದಾಗಿ ಬೇಕರಿಯಲ್ಲಿ ಕೆಲಸ ಮಾಡಿ ಕಷ್ಟಪಟ್ಟು ಮೇಲಕ್ಕೇರಿದ ಕಾಶೀನಾಥ ನಾಯ್ಕ ಇತರರರಿಗೆ ಮಾದರಿ.


-ವಿನಯ ದಂಟಕಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.