ಯೋಗ ವೈಭೋಗ
ನಮ್ಮ ಪ್ರಾಚೀನ ಪದ್ಧತಿಯಾದ ಯೋಗ ಇಂದು ಮಾಡರ್ನ್ ನಟನಟಿಯರ ಮೈಕಟ್ಟನ್ನು ಬೇಕಾದ ಆಕಾರದಲ್ಲಿಟ್ಟು ...

ನಮ್ಮ ಪ್ರಾಚೀನ ಪದ್ಧತಿಯಾದ ಯೋಗ ಇಂದು ಮಾಡರ್ನ್ ನಟನಟಿಯರ ಮೈಕಟ್ಟನ್ನು ಬೇಕಾದ ಆಕಾರದಲ್ಲಿಟ್ಟು ಅವರಿಗೆ ಕೋಟಿ ಕೋಟಿ ಸಂಭಾವನೆ ತರುತ್ತಿದೆ. ಇದು ಕೇವಲ ಪೂರ್ವದೇಶಗಳಿಗೆ ಸೀಮಿತವಾಗದೆ ಪಾಶ್ಚಾತ್ಯ ದೇಶಗಳಿಗೂ ಜಿಗಿದು ಜನಪ್ರಿಯತೆ ಗಳಿಸಿರುವುದು ಯೋಗದ ಯೋಗಾಯೋಗವೇ ಸರಿ. ಮೊನ್ನೆ ಮೊನ್ನೆ ದೇವೇಗೌಡರ ಆರೋಗ್ಯದ ಗುಟ್ಟನ್ನೂ ರಟ್ಟಾಗಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡಿರುವ ಯೋಗದ ಬಗ್ಗೆ ಸೆಲೆಬ್ರಿಟಿಗಳು ಹೀಗಂತಾರೆ ಕೇಳಿ.
ಬಿಪಾಶಾ ಬಸು
ಕೃಷ್ಣ ಸುಂದರಿ ಬಿಪಾಶಾಳ ಸ್ಪೋರ್ಟ್ಸ್ ಫಿಟ್ ದೇಹ ಯೋಗದ ಕೈಚಳಕ. ಪ್ರತಿದಿನ 2 ಗಂಟೆಗಳ ಕಾಲ 108 ಬಾರಿ ಸೂರ್ಯನಮಸ್ಕಾರ ಮಾಡುತ್ತಾಳಂತೆ ಈ ಬೆಂಗಾಳಿ ಚೆಲುವೆ.
'ದೇಹ ಮತ್ತು ಮನಸ್ಸನ್ನು ಸರಿಯಾದ ಆಕಾರದಲ್ಲಿಡಲು ಯೋಗ ಸಹಕಾರಿ'
ಶಿಲ್ಪಾ ಶೆಟ್ಟಿ
ನಡುವಿನ ಉದ್ದಗಲಗಳೇ ಶಿಲ್ಪಾಳಿಗೆ ಖ್ಯಾತಿ ತಂದುಕೊಟ್ಟಿರುವುದು. ಮಗನಿಗೆ ಜನ್ಮ ನೀಡಿದ 10 ತಿಂಗಳಲ್ಲಿ 20 ಕೆಜಿಗೂ ಅಧಿಕ ತೂಕ ಇಳಿಸಿದ ಈಕೆ ಯೋಗಸಾಧಕಿಯೇ. ತನ್ನ ಯೋಗದ ಡಿವಿಡಿ ಕೂಡಾ ಬಿಡುಗಡೆ ಮಾಡಿದ್ದಾಳೆ.
'ನಾನು ವರ್ಕ್‌ಔಟ್ ಮಾಡುವಾಗ ಶೇ.100 ಶ್ರಮ ಹಾಕುತ್ತೇನೆ. ಕಡಿಮೆ ತಿನ್ನುವುದಿಲ್ಲ. ಆದರೆ ಉತ್ತಮ ಆಹಾರ ತಿನ್ನುತ್ತೇನೆ.'
ಕರೀನಾ ಕಪೂರ್
ಕರೀನಾ ಜೀರೋ ಫಿಗರ್ ತಲುಪಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದು ಕೂಡಾ ಯೋಗದಿಂದಲೇ. ಅಲ್ಲದೆ ಕರೀನಾ ಅನೇಕ ಬಾಲಿವುಡ್ ಬ್ಯೂಟಿಗಳನ್ನು ಯೋಗಕ್ಕೆಳೆ ತಂದಿದ್ದಾಳೆ.
'ತೂಕ ಕಡಿಮೆಯಾಗಿ ಆರೋಗ್ಯವಂತ ದೇಹ ಹೊಂದಲು ಯೋಗ ನನ್ನ ಮೊದಲ ಆಯ್ಕೆ.'
ಕರಿಶ್ಮಾ ಕಪೂರ್
ಮಕ್ಕಳಾದ ಮೇಲೆ ಊದಿಕೊಂಡಿದ್ದ ನಟಿ ಕರಿಶ್ಮಾ ದೇಹ ಸುಮಾರು 24 ಕೆಜಿಗಳನ್ನು ಕೊಡವಿಕೊಳ್ಳಲು ಸಹಾಯ ಮಾಡಿದ್ದು ಯೋಗ.
'ನಾನು ಯೋಗ ಮಾಡುವುದಲ್ಲದೆ ನನ್ನ ಇಬ್ಬರು ಮಕ್ಕಳೂ ನನ್ನೊಂದಿಗೆ ಯೋಗ ಪ್ರಾಕ್ಟೀಸ್ ಮಾಡುತ್ತಾರೆ. ಯೋಗ ನನ್ನ ಪಾಲಿಗೆ ಅತ್ಯುತ್ತಮ ರಿಲ್ಯಾಕ್ಸೇಶನ್'
ಮಡೋನ್ನಾ
ಅಮೆರಿಕದ ಖ್ಯಾತ ಗಾಯಕಿ, ನಾಯಕಿ ಮಡೋನ್ನಾಳ ಆರೋಗ್ಯದ ಸೀಕ್ರೆಟ್ ಭಾರತದ ಅಷ್ಟಾಂಗ ಯೋಗವಂತೆ. 55ನೇ ವರ್ಷದಲ್ಲೂ 18ರ ದೇಹಾಕಾರ ಹೊಂದಿರುವ ಮಡೋನ್ನಾ ನಾಲ್ಕು ಮಕ್ಕಳ ತಾಯಿ.
'ಸೌಂದರ್ಯ ಪಡೆಯಲು ಶಾರ್ಟ್‌ಕಟ್ ಇಲ್ಲ. ಕಷ್ಟ ಪಡಲೇಬೇಕು. ಯೋಗ, ಡಯಟ್ ನಿಯಮಿತವಾಗಿದ್ದಲ್ಲಿ ನೀವದನ್ನು ಸಾಧಿಸಬಲ್ಲಿರಿ'
ಲೇಡಿ ಗಾಗಾ
ಆಹಾರ ಸಂಬಂಧಿ ಮನೋರೋಗ ಅನೋರೆಕ್ಸಿಯಾದಿಂದ ಬಳಲುತ್ತಿದ್ದ 27ರ ಹರೆಯದ ಪ್ರಖ್ಯಾತ ಸಿಂಗರ್, ಲೇಡಿ ಗಾಗಾ ಯೋಗದಿಂದಾಗಿ ಕಾಯಿಲೆಯಿಂದ ಗುಣಮುಖ ಹೊಂದಿದ್ದಾರೆ.
'ಯೋಗ ದೇಹ ಮತ್ತು ಮೆದುಳನ್ನು ಒಂದಾಗಿಸುತ್ತದೆ. ಯಾವಾಗ ಅವು ಒಂದಾಗುತ್ತವೆ ಮಹತ್ವದ ಸಮಾಧಾನ ಸಿಗುತ್ತದೆ'
ಸೋನಂ ಕಪೂರ್
90 ಕೆಜಿಯಿಂದ ಏಕ್‌ದಂ 57ಕ್ಕೆ ಇಳಿದು ಬಾಲಿವುಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸೋನಂಗೆ ಯೋಗವೇ ಮದ್ದಾಗಿದ್ದು.
'ಅಪ್ಪ ಫಿಟ್ ಆಗಿರಲು ಯೋಗ ಮಾಡುತ್ತಾರೆ. ಹೀಗಾಗಿ ನಾನೂ ಕೂಡಾ ಬಿಕಿನಿ ಬಾಡಿ ಪಡೆಯಲು ಹಾಟ್ ಯೋಗ ಸಾಧನೆಯಲ್ಲಿ ತೊಡಗಿದೆ.'
ಮಲೈಕಾ ಅರೋರ
ಈ ಹಾಟ್ ಅಮ್ಮ ಅಂತಾಳೆ, 'ಪ್ರತಿದಿನ ಯೋಗ ಮತ್ತು ಜಂಕ್ ಫುಡ್‌ಗಳಿಂದ ದೂರವಿರುವುದೇ ನನ್ನ ಸೌಂದರ್ಯದ ಗುಟ್ಟು.'
ರಾಣಿ ಮುಖರ್ಜಿ
ಶೂಟಿಂಗ್‌ಗಾಗಿ ಊರೂರು ಸುತ್ತಬೇಕಾಗಿ ಬಂದರೂ ರಾಣಿ ಯೋಗ ಮಾತ್ರ ಒಂದು ದಿನವೂ ತಪ್ಪಿಸುವುದಿಲ್ಲವಂತೆ.
'ಯೋಗ ಮಾಡುವಾಗ ಉಪವಾಸ ಮಾಡುವ ಅವಶ್ಯಕತೆ ಇಲ್ಲ. ಆದರೆ ಉತ್ತಮ ಆಹಾರ ನನ್ನ ಆದ್ಯತೆ'
ಇಲಿಯಾನಾ
16 ವರ್ಷಕ್ಕಿಂತ ಹೆಚ್ಚು ಕಾಲ ಯೋಗ ಕಲಿತಿರುವ ಇಲಿಯಾನಾ ಯೋಗ ಟೀಚರ್ ಆಗಿ ಅನೇಕರಿಗೆ ಹೇಳಿಕೊಟ್ಟಿದ್ದಾಳೆ. ಈಕೆ ನನ್ನ ಪ್ರತಿ ಉಸಿರಿನಲ್ಲೂ ಯೋಗವಿದೆ ಎನ್ನುತ್ತಾಳೆ.
'ಯೋಗ ನನಗೆ ದೇವರನ್ನೇ ತೋರಿಸಿದೆ. ನನ್ನ ಗುರಿ, ಆರೋಗ್ಯ, ಸೌಂದರ್ಯ ಎಲ್ಲವೂ ಪರ್ಫೆಕ್ಟ್ ಆಗಿ ಇರಲು ಕಾರಣ ಯೋಗಸಾಧನೆಯೇ. ಯೋಗ ಜೀವನದ ದಾರಿ. ಅದು ಜನರೊಂದಿಗೆ ಬೆರೆಯುವುದನ್ನೂ, ಯಶಸ್ಸನ್ನೂ ಹೇಳಿಕೊಡುತ್ತದೆ. ಯೋಗ ನನಗೆ ಆಧ್ಯಾತ್ಮವನ್ನು ಪರಿಚಯಿಸಿದೆ.'
-ರೇಶ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


