ಬೈಟುಕಾಫಿ

ಏನನ್ನು ಕೊಡಬೇಕು?

ಏನನ್ನು ಕೊಡಬೇಕು?
Published On :

ಅದೊಂದು ಸಮುದ್ರ. ಎಲ್ಲೋ ಮಧ್ಯದಲ್ಲಿ ಬಲೆ ಎಸೆಯುತ್ತೇವೆ. ಗಂಟೆಯಾದರೂ ಒಂದು ಮೀನೂ ಬೀಳುವುದಿಲ್ಲ. ಅದೂ ಸಮುದ್ರದಲ್ಲಿ! ಹಾಗೆಯೇ, ನಗರದಲ್ಲೊಂದು ಆಟೋ. ಅವನು ಮುಖ್ಯರಸ್ತೆಯಲ್ಲೇ ಗಂಟೆಗಟ್ಟಲೆ ನಿಲ್ಲಿಸಿಕೊಂಡಿದ್ದಾನೆ. ಯಾರೂ ಅವನ ಆಟೋ ಏರಲು ಬರುವುದಿಲ್ಲ.
ಕೆಲವೊಮ್ಮೆ ನಮ್ಮ ಗುರುತಿಸುವಿಕೆ ಈ ಥರ ತಪ್ಪಾಗುತ್ತದೆ. ಅದರಲ್ಲೂ ವ್ಯಾಪಾರಸ್ಥರಿಗೆ ತಾವೆಲ್ಲಿ ಅಂಗಡಿ ಇಡಬೇಕೆಂಬುದು, ಬರಹಗಾರರಿಗೆ ತಾವೇನು ಬರೆದರೆ ಜನಕ್ಕದು ತಲುಪುತ್ತದೆಂಬುದು, ನಿರ್ದೇಶಕನಿಗೆ ತಾನೇನನ್ನು ಕೊಟ್ಟರೆ ಪ್ರೇಕ್ಷಕರು ಅದನ್ನು ನೋಡ್ತಾರೆಂಬುದು, ಟೈಲರೊಬ್ಬ ತಾನ್ಯಾವ ಟ್ರೆಂಡನ್ನು ಪ್ರಸ್ತುತ ಪಡಿಸಿದರೆ ಗ್ರಾಹಕರು ಆಕರ್ಷಿತರಾಗುತ್ತಾರೆಂಬುದು ಬಹಳ ಮುಖ್ಯವಾಗಿರುತ್ತದೆ. ನಮ್ಮ ವೃತ್ತಿಯಲ್ಲೇ ಜಾಣ್ಮೆ ಹುಡುಕಿ, ಯಶಸ್ವಿಯಾಗುವ ಕಲೆ ಗೊತ್ತಿರಬೇಕು. ಅದೇನು ತನ್ನಿಂತಾನೆ ಬರುವಂಥದ್ದಲ್ಲ. ಆ ಕ್ಷೇತ್ರದ ಅನುಭವವೇ ಅಂಥ ಗುರುತಿಸುವಿಕೆಯನ್ನು ಹೇಳಿಕೊಡುತ್ತದೆ. ಕೆಲಸಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳುತ್ತಾ ಸಾಗಿದಷ್ಟು ಯಶಸ್ಸಿನ ದಾರಿಗಳು ಗೋಚರಿಸುತ್ತವೆ. ಆ ಕಣ್ಣು ನಮ್ಮದಾಗಿರಲಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.