ಕ್ಯಾರೆಟ್ ಹೋಳಿಗೆ
ಬೇಕಾಗುವ ಪದಾರ್ಥಗಳು
ತುರಿದ ಕ್ಯಾರೆಟ್ : 2 ಕಪ್ (ನಾಲ್ಕು ಕ್ಯಾರೆಟ್)ಸಣ್ಣ ರವೆ: 10 ಚಮಚ
ಸಕ್ಕರೆ : 1 ಕಪ್
ಏಲಕ್ಕಿ ಪುಡಿ : 1 ಚಮಚ
ಕಣಕಕ್ಕೆ ಮೈದಾ : 1 ಕಪ್,
ಎಣ್ಣೆ 1-2 ಕಪ್, ಅರಿಶಿನ ಒಂದು ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ತುರಿದ ಕ್ಯಾರೆಟ್ಟನ್ನು ತೆಗೆದಿಟ್ಟುಕೊಳ್ಳಿ. ನೀರು ಹಾಕದೇ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ. ಅದನ್ನು ಬಾಣಲೆಯಲ್ಲಿ ಹಾಕಿರಿ. ಸಕ್ಕರೆ, ಏಲಕ್ಕಿ ಪುಡಿ ಸೇರಿಸಿರಿ. ಬೆಂಕಿಯನ್ನು ಸಣ್ಣದಾಗಿ ಉರಿವಂತೆ ಇಡಿ. ಆ ಶಾಖದಲ್ಲ್ಲಿ 15 ನಿಮಿಷ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ರವೆಯನ್ನು ಸೇರಿಸಿ. ಹೂರಣ ತಯಾರಾಗುತ್ತದೆ. ಮೊದಲೇ ತಯಾರಿಸಿದ ಕಣಕದಲ್ಲಿ ಹೂರಣ ತುಂಬಿರಿ. ಲಟ್ಟಿಸಿ ಎಣ್ಣೆ ಹಚ್ಚಿದ ದೋಸೆ ತವಾದಲ್ಲಿ ಬೇಯಿಸಿ. ತುಪ್ಪದೊಂದಿಗೆ ಕ್ಯಾರೆಟ್ ಹೋಳಿಗೆ ಸವಿಯಿರಿ. ಬಿಸಿಬಿಸಿ ಇದ್ದಾಗ ತುಪ್ಪದೊಂದಿಗೆ ತಿನ್ನಬಹುದು. ತಣ್ಣಗಾದ ನಂತರವಾದರೆ ಹಾಲಿನೊಂದಿಗೆ ಅಥವಾ ಬಾದಾಮಿ ಹಾಲಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಆದರೆ ಇತರೆ ಹೋಳಿಗೆಗಳ ಹಾಗೆ ಇದನ್ನು ಹೆಚ್ಚು ದಿನ ಇಡಲಾಗುವುದಿಲ್ಲ. ಕೆಲವರು ಇದನ್ನು ಉಪ್ಪಿನಕಾಯಿಯ ಕಾಂಬಿನೇಷನ್ನಲ್ಲೂ ಸವಿಯುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

