ಬೈಟುಕಾಫಿ

ಓ ತ್ಯಾಗವೇ ದೇಹ ಧರಿಸಿದ ನೀನೇ ಧನ್ಯ!

Published On :

ಮತ್ತೊಮ್ಮೆ ಅಮೆರಿಕದತ್ತ ಪ್ರಯಾಣ ಬೆಳೆಸಿದ ವಿವೇಕಾನಂದರು ಈ ಬಾರಿ ಪಶ್ಚಿಮ ಕರಾವಳಿಯ ನಗರಗಳಲ್ಲಿ ಸಿಂಹನಾದ ಮೊಳಗಿಸಿದರು. ಈ ಕಾರ್ಯದಲ್ಲಿ ಸ್ವಾಮೀಜಿ ನೆರವಿಗೆ ಬಂದವರು ಮೀಡ್ ಸಹೋದರಿಯರು. ಇಷ್ಟು ಜರೂರಿನ ಉಪನ್ಯಾಸಗಳನ್ನು ನೀಡುವ, ದೇಹಾರೋಗ್ಯದ ಬಗ್ಗೆ ಲೆಕ್ಕಿಸದೆ ತರಗತಿಗಳನ್ನು ನಡೆಸುವುದರ ಹಿಂದೆ ಎರಡು ಉದ್ದೇಶಗಳಿದ್ದವು. ಒಂದು ವೇದಾಂತ ಪ್ರಸಾರವಾದರೆ ಮತ್ತೊಂದು ಧನಸಂಗ್ರಹವಾಗಿತ್ತು. ಹಳದ ಅವಶ್ಯಕತೆ ಏಕಿತ್ತೆಂದರೆ, ಬೇಲೂರು ಮಠದ ಹೊಸ ನಿವೇಶನದ ಮೇಲೆ ಅಲ್ಲಿಯ ಪುರಸಭೆ ಭಾರೀ ಮೊತ್ತದ ತೆರಿಗೆ ಹಾಕಿತ್ತು. ಇದರಿಂದ ಮಠ ತೀವ್ರ ಆರ್ಥಿಕ ಒತ್ತಡಕ್ಕೆ ತುತ್ತಾಗಿತ್ತು. ವಕೀಲರ ಖರ್ಚು ಹಾಗೂ ಕೋರ್ಟ್ ವೆಚ್ಚಕ್ಕೆ ಸಾವಿರಾರು ರುಪಾಯಿ ಬೇಕಾಯಿತು. ಇದರಿಂದ ಆಶ್ರಮವಾಸಿಗಳಿಗೆ ಅನ್ನಾಹಾರಗಳಿಗೆ ಕುತ್ತು ಬರುವ ಪರಿಸ್ಥಿತಿ ಒದಗಿತ್ತು. ಈ ಕಾರಣಕ್ಕಾಗಿ ಉಪನ್ಯಾಸಗಳಿಂದ ಸಾಕಷ್ಟು ಹಣ ಸಂಗ್ರಹಿಸತೊಡಗಿದ್ದರು. ತಮ್ಮ ಬಳಿ ಇದ್ದ ಹಾಗೂ ಮೆಕ್‌ಲಾಡ್ ಅವರು ನೀಡಿದ ಹಣವನ್ನು ತಕ್ಷಣ ಮಠಕ್ಕೆ ಕಳುಹಿಸಿಕೊಟ್ಟರು. ಇದರಿಂದ ಮಠವು ದೊಡ್ಡ ಸಂಕಷ್ಟದಿಂದ ಪಾರಾಯಿತು.
ದೇಹಶಕ್ತಿಗಿಂತ ಆತ್ಮಶಕ್ತಿ ಪ್ರಬಲವಾದುದು. ಸ್ವಾಮೀಜಿ ನಂಬಿದ್ದು ಅಂತಹ ಆತ್ಮಶಕ್ತಿಯನ್ನು ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ. ರಾಮಕೃಷ್ಣ ಮಠಕ್ಕೆ ಒದಗಿದ ಸಂಕಷ್ಟಗಳನ್ನು ನಿವಾರಿಸಲು ಸ್ವಾಮೀಜಿ ಎಂತಹ ತ್ಯಾಗಕ್ಕಾದರೂ ಸಿದ್ಧರಾಗುತ್ತಿದ್ದರು. ಅವರೇ ಒಂದೆಡೆ ಹೇಳುತ್ತಾರೆ, 'ಕೆಲವರು ಕಷ್ಟವನ್ನು ಪ್ರೀತಿಸಲೆಂದೇ ಹುಟ್ಟಿರುತ್ತಾರೆ. ನಾನು ಅಂಥವರಲ್ಲೊಬ್ಬ. ನಾನು ಯಾರ ನಡುವೆ ಹುಟ್ಟಿದೆನೋ ಆ ದೇಶಬಾಂಧವರಿಗಾಗಿ ನನ್ನ ರಕ್ತವನ್ನು ಬಸಿಯಲೂ ಸಿದ್ಧ!'ಟಿ
-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.