ಅಹಲ್ಯೆಯ ಕತೆಯೇನು?

ಅಹಲ್ಯೆಯ ಕತೆ ತಿಳಿಯದವರಿಲ್ಲ. ಈಕೆ ಮುನಿಶ್ರೇಷ್ಠ ಗೌತಮರ ಪತ್ನಿ. ಬ್ರಹ್ಮ ಈಕೆಯ ತಂದೆ. ಮೂರು ಲೋಕಗಳನ್ನು ಮೊದಲು ಸುತ್ತಿ ಬರುವವನಿಗೆ ಆಕೆ ಅರ್ಪಿತ ಎಂಬುದು ತಂದೆ ಆಕೆಗಿಟ್ಟ ಸ್ವಯಂವರದ ಪಣ. ಸ್ಪರ್ಧೆಗೆ ಬಿದ್ದ ಇಂದ್ರ ಮತ್ತು ಗೌತಮರಲ್ಲಿ ಗೆಲ್ಲುವವನು ಗೌತಮ. ಅಂದಿನಿಂದ ಇಂದ್ರನಿಗೆ ಆಕೆಯ ಮೇಲೆ ಕಣ್ಣು, ಕಾಮೇಚ್ಛೆ.
ಇತ್ತ ಅಹಲ್ಯೆ, ಗೌತಮರ ಪತ್ನಿಯಾಗಿ ಆಶ್ರಮಕ್ಕೆ ನಡೆಯುತ್ತಾಳೆ. ದೇವರ್ಷಿ ಗೌತಮರಿಗೆ ಪತ್ನಿಯನ್ನು ರಮಿಸುತ್ತ ಕೂತಿರಲು ವೇಳೆಯೆಲ್ಲಿಯದು? ಅವರು ಪರಬ್ರಹ್ಮದಲ್ಲಿ ರಮಿಸುವವರು. ಅಹಲ್ಯೆ ಒಳಗೊಳಗೇ ನಿಟ್ಟುಸಿರು ಬಿಟ್ಟಿರಬೇಕು. ಒಂದು ಮುಂಜಾನೆ, ಗೌತಮನೆದ್ದು ನದಿಗೆ ಸ್ನಾನಕ್ಕೆ ಹೋದಾಗ, ಇಂದ್ರ ಗೌತಮನ ವೇಷದಲ್ಲಿ ಬಂದ. ಮಧುರ ಮಾತುಗಳಿಂದ ಅಹಲ್ಯೆಯನ್ನು ಒಲಿಸಿಕೊಂಡ. ಇಬ್ಬರೂ ಮನಸ್ವೇಚ್ಛೆ ಭೋಗಿಸಿದರು. ಆತ ನಿಜಕ್ಕೂ ಗೌತಮನಲ್ಲ, ಇಂದ್ರ ಎಂಬುದು ಅಹಲ್ಯೆಗೆ ಗೊತ್ತಾಗಿರಲಿಲ್ಲವೆ? ಗೊತ್ತಿತ್ತು!
ಮುನಿವೇಷಂ ಸಹಸ್ರಾಕ್ಷಂ ವಿಜ್ಞಾಯ ರಘುನಂದನ
ಮತಿಂ ಚಕಾರ ದುರ್ಮೇಧಾ ದೇವರಾಜಕುತೂಹಲಾತ್
ಇದು ವಿಶ್ವಾಮಿತ್ರರು ರಾಮನಿಗೆ ಹೇಳುತ್ತಿರುವ ಕತೆ. ಅಹಲ್ಯೆಗೆ ಈತ ಇಂದ್ರನೆಂದು ಗೊತ್ತಾಯಿತು. ಆದರೆ 'ದೇವರಾಜ'ನ ಜತೆ ಭೋಗಿಸುವ 'ಕುತೂಹಲ' ತಾಳದಾಯಿತು. ಗೌತಮ ತಪಸ್ಸು ಮಾಡುತ್ತಿರುವುದು ಸ್ವರ್ಗಸುಖ ಪಡೆಯಲಿಕ್ಕಾಗಿಯೇ ಅಲ್ಲವೆ? ಆ 'ಸ್ವರ್ಗಸುಖ' ಬಾಗಿಲಿಗೆ ಹುಡುಕಿ ಬಂದರೆ ಒದೆಯುವುದುಂಟೆ?
ಅಹಲ್ಯೆಯನ್ನು ಇಂದ್ರ ಮೋಸ ಮಾಡಿದ ಎಂಬ ಕತೆಯನ್ನು ತುಂಬ ಮಂದಿ ನಂಬಿದ್ದಾರೆ. ಆದರೆ ಅದು ನಿಜವಲ್ಲ. ವಾಲ್ಮೀಕಿಯೇ ಹೇಳಿದ ಪ್ರಕಾರ ಕತೆಯಿದು- ಅಹಲ್ಯೆ ಮನಸ್ಸಿನ ಮಾತಿಗೆ ಮೈ ಕೊಟ್ಟವಳು. ಆ ಅರ್ಥದಲ್ಲಿ ಅವಳೊಬ್ಬಳು ಮುಕ್ತ ಹೆಣ್ಣು. <
= ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


