ಬೈಟುಕಾಫಿ

ತಿಳ್ಕೊಳೊ ವಿಷ್ಯ

ತಿಳ್ಕೊಳೊ ವಿಷ್ಯ
Published On :

ದರೋಡೆ ತಡೆಯಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು
ಅಪರಿಚಿತರೊಂದಿಗೆ ಅಥವಾ ಅಪರಿಚಿತ ವಾಹನಗಳಲ್ಲಿ ಪ್ರಯಾಣ ಮಾಡಬೇಡಿರಿ. ಅಂತಹ ಸಂದರ್ಭದಲ್ಲಿ ಸರ್ಕಾರಿ ಸಾರಿಗೆ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ.
ರಾತ್ರಿ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ವಾಹನಗಳಲ್ಲಿ ಹಣ ಮತ್ತು ಆಭರಣಗಳನ್ನು ತೆಗೆದುಕೊಂಡು ಸಂಚರಿಸಬೇಡಿ. ಅಪರಿಚಿತರೊಡನೆ ಪ್ರಯಾಣ ದರೋಡೆಗೆ ದಾರಿ ಮಾಡಿಕೊಟ್ಟಂತೆ.
ಹಣ ಮತ್ತು ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸದೆ, ಸುರಕ್ಷಿತವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಿ.
ಮನೆಗಳಿಗೆ ಭದ್ರವಾದ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿ ಹಾಗೂ ಅವುಗಳಿಗೆ ಉತ್ತಮವಾದ ಬೀಗಗಳನ್ನು ಮತ್ತು ಚಿಲಕಗಳನ್ನು ಅಳವಡಿಸಿ.
ಮನೆಗಳಲ್ಲಿ ಖಾರದ ಪುಡಿ, ಲಾಠಿಗಳು, ಟಾರ್ಚ್ ಮುಂತಾದವುಗಳು ದರೋಡೆ ಸಂದರ್ಭದಲ್ಲಿ ದುಷ್ಕರ್ಮಿಗಳ ಕೈಗೆ ಸುಲಭದಲ್ಲಿ ಸಿಗದಂತೆ ಹಾಗೂ ನಿಮ್ಮ ಕೈಗೆ ಅವು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳಿ.
ಅಪರಿಚಿತರು ಮನೆಯ ಬಳಿ ಬಂದು ನಾನಾ ಕಾರಣಗಳನ್ನು ಹೇಳಿ, ನಿಮ್ಮನ್ನು ಮನೆಯ ಬಾಗಿಲು ತೆರೆಯುವಂತೆ ಕೇಳಿದರೆ, ಬಾಗಿಲನ್ನು ತೆರೆಯದೆ ಬಂದ ವ್ಯಕ್ತಿಗಳು ಯಾರು ಎಂಬುದನ್ನು ಖಾತರಿಪಡಿಸಿಕೊಳ್ಳಿ. ಅವರ ಮೇಲೆ ಅನುಮಾನ ಬಂದರೆ ತಕ್ಷಣ ಅಕ್ಕಪಕ್ಕದವರಿಗೆ ಅಥವಾ ದೂರವಾಣಿ 100ಕ್ಕೆ ಕರೆ ಮಾಡಿ ವಿಷಯ ತಿಳಿಸಿ.
ಒಂಟಿ ಮನೆಗಳಲ್ಲಿ ಮತ್ತು ತೋಟದ ಮನೆಗಳಲ್ಲಿ ನಾಯಿಗಳನ್ನು ಸಾಕಿಕೊಳ್ಳಿ. ಸಾಧ್ಯವಾದರೆ ಪರವಾನಗಿ ಇರುವ ಶಸ್ತ್ರಾಸ್ತ್ರವನ್ನು ಹೊಂದುವುದು ಉತ್ತಮ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.