ಮತಗಾನ
ಎಸ್.ಎಲ್. ಭೈರಪ್ಪ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರ 'ಮತದಾನ' ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಎಲೆಕ್ಷನ್...

ಎಸ್.ಎಲ್. ಭೈರಪ್ಪ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರ 'ಮತದಾನ' ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಎಲೆಕ್ಷನ್ ಆಸುಪಾಸಲ್ಲಿಲ್ಲದಾಗ, ಅಂದರೆ 2001ರಲ್ಲಿ ತೆರೆಕಂಡಿತ್ತು. ಕಿರುತೆರೆಯಲ್ಲಿಯೂ ರಾಜಕೀಯಲೇಪನ ಇರುವ ಸಾಮಾಜಿಕ ಧಾರಾವಾಹಿಗಳನ್ನೇ ನಿರ್ದೇಶಿಸಿ ಖ್ಯಾತರಾಗಿರುವ ಸೀತಾರಾಮ್, ಸಮಾಜವಾದದ ಚಳುವಳಿಗಳ ಹಿನ್ನೆಲೆಯಿಂದ ಬಂದವರು. ಗೌರಿಬಿದನೂರು ಕ್ಷೇತ್ರದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದ ಸೀತಾರಾಮ್, ಈ ರಾಜಕೀಯ ಕತೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ದೃಶ್ಯಮಾಧ್ಯಮಕ್ಕೆ ತಂದಿದ್ದರು. ಚಿತ್ರದ ಸಂಗೀತ ಸಿ. ಅಶ್ವಥ್ ಹಾಗೂ ಸಾಹಿತ್ಯ ಬಂಡಾಯ ಹಾಗೂ ದಲಿತಕವಿಯೆಂದೇ ಖ್ಯಾತರಾಗಿದ್ದ ಸಿದ್ದಲಿಂಗಯ್ಯ ಅವರದು. ಸಾಮಾನ್ಯ ಪ್ರಜೆಗಳಲ್ಲಿ ಚುನಾವಣೆಯ ಸಮಯದಲ್ಲಿ ಹೊಮ್ಮುವ ಭಾವಗಳನ್ನು, ರಾಜಕಾರಣಿಗಳ ಸೋಗಲಾಡಿತನಗಳನ್ನು, ರಾಜಕೀಯ ಕಾರಣಗಳಿಂದ ವೈಯಕ್ತಿಕ ಜೀವನ ನರಳುವುದನ್ನು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ನೇರಭಾಷೆಯಲ್ಲಿ ಈ ಹಾಡು ಬಿಂಬಿಸಿದೆ.
ಐದು ವರ್ಷಕ್ಕೊಮ್ಮೆ ಬರುವ
ಕಡು ಬಡವಗು ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗೂ ಅಮೂಲ್ಯವಾದ ಮತದಾನ
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಾಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗೂ
ಅಮೂಲ್ಯವಾದ ಮತದಾನ
ಬಣ್ಣ ಬಣ್ಣದ ಭಾಷಣದಲ್ಲಿ
ಬಣ್ಣ ಬಣ್ಣದ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗೂ ಅಮೂಲ್ಯವಾದ ಮತದಾನ
ಮತಪೆಟ್ಟಿಗೆಯೇ ಪ್ರೀತಿಯ ಒಡಲು
ಜಾತಿಯ ಮಾತೆ ನೀತಿಯ ಮಡಿಲು
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆಯಿಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗೂ ಅಮೂಲ್ಯವಾದ ಮತದಾನ
ನಾಡ ದುರಂತ ಹೃದಯವ ತಟ್ಟಿ
ದೇಶವ ಉಳಿಸುವ ಕನಸನು ಕಟ್ಟಿ
ಪಣವನು ತೊಟ್ಟು ಬಂದವರನ್ನು
ಸಂಚುಕೋರರ ವ್ಯೂಹಕೆ ತಳ್ಳಿ
ಬೆಸೆದ ಮನಗಳ ಬೇರೆ ಮಾಡಿದ ಮತದಾನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


