ಅಂತರಂಗ-ಬಹಿರಂಗ ಬೇರೆಯಲ್ಲದ ಅದ್ವೈತ ವ್ಯಕ್ತಿತ್ವ!
'ಆಹಾ! ವಿವೇಕಾನಂದರಿಂದ ಅಲ್ಲಿ ವಿಜ್ಞಾನ, ತತ್ತ್ವಶಾಸ್ತ್ರ, ಚರಿತ್ರೆ ಎಲ್ಲವನ್ನೂ ತೆರೆಯಲಾಗಿತ್ತು. ಅವರಿಗೆ ಭೂತಕಾಲವು ವರ್ತಮಾನದ ಅಂಗವೇ ಆಗಿತ್ತು. ಭವಿಷ್ಯವು ತೆರೆದಿಟ್ಟ ಪುಸ್ತಕವಾಗಿತ್ತು' ಹೀಗೆಂದು ಎಮ್ಮಾ ಕಾಲ್ವೃ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾಳೆ.
ಒಮ್ಮೆ ಎಲ್ಲರೂ ಈಜಿಪ್ತ್ನ ಕೈರೋದ ರೈಲು ನಿಲ್ದಾಣದ ವಿಶ್ರಾಂತಿ ಕೋಣೆಯಲ್ಲಿ ಸ್ವಾಮೀಜಿಯ ಸುತ್ತಲೂ ಕುಳಿತು ಅವರ ಮಾತುಗಳನ್ನು ಮಂತ್ರಮುಗ್ಧರಾಗಿ ಕೇಳುತ್ತಿದ್ದಾರೆ. ಸಮಯದ ಪರಿವೆಯೇ ಇಲ್ಲ, ಕೊನೆಗೆ ಸ್ವಾಮೀಜಿ ಮಾತಿಗೆ ವಿರಾಮ ನೀಡಿದಾಗ ಅವರು ಕಾಯುತ್ತಿದ್ದ ರೈಲು ಹೋಗಿ ಎಷ್ಟೋ ಹೊತ್ತಾಗಿದೆ ಎಂದು ಗೊತ್ತಾಯಿತು!
ಒಮ್ಮೆ ಎಲ್ಲರೂ ದಾರಿತಪ್ಪಿ ಯಾವುದೋ ರಸ್ತೆಗೆ ಬಂದುಬಿಟ್ಟರು. ಅಲ್ಲಿ ಅರ್ಧಂಬರ್ಧ ವಸ್ತ್ರಧಾರಿಗಳಾದ ಹೆಂಗಸರು ಕಿಟಕಿ ಬಾಗಿಲುಗಳಿಂದ ಕಾಣಿಸಿಕೊಳ್ಳುತ್ತಿದ್ದುದರಿಂದ ಇವರೆಲ್ಲಾ ಕಸಿವಿಸಿಪಟ್ಟುಕೊಳ್ಳುತ್ತಿದ್ದರೆ, ಸ್ವಾಮೀಜಿ ಮಾತ್ರ ಇದಾವುದನ್ನೂ ಗಮನಿಸದೆ ಸಾವಧಾನವಾಗಿ ನಡೆದುಹೋಗುತ್ತಿದ್ದರು. ಆಗ ರಸ್ತೆಯ ಪಕ್ಕದ ಬೆಂಚಿನ ಮೇಲೆ ಕುಳಿತಿದ್ದ ಕೆಲವು ಹೆಂಗಸರು ನಗುತ್ತ ಇವರನ್ನು ಕೂಗಿ ಕರೆಯತೊಡಗಿದರು. ಆಗ ಜತೆಯಲ್ಲಿದ್ದವರು ಸ್ವಾಮೀಜಿಯನ್ನು ಅವಸರಪಡಿಸುತ್ತಾ ಬೇಗಬೇಗ ಹೆಜ್ಜೆಹಾಕತೊಡಗಿದರು. ಆಗ ಸ್ವಾಮೀಜಿ ಆ ಹೆಂಗಸರು ಕುಳಿತಿದ್ದ ಬೆಂಚಿನೆಡೆಗೆ ಹೋಗಿ 'ಅಯ್ಯೋ! ದುರ್ದೈವವೆ! ನೋಡು ಮಗಳನ್ನು! ತಾನು ಯಾರೆಂಬುದನ್ನೇ ಮರೆತುಬಿಟ್ಟಿದ್ದಾಳೆ. ತನ್ನ ದೈವತ್ವವನ್ನು ದೇಹದೊಳಗೆ ಮರೆಮಾಚುತ್ತಿದ್ದಾಳೆ!' ಎಂದು ಕಣ್ಣೀರು ಸುರಿಸತೊಡಗಿದರು. ಇದನ್ನು ಕಂಡ ಆ ಹೆಂಗಸರು ನಾಚಿಕೆಯಿಂದ ಬಾಗಿ ಸ್ವಾಮೀಜಿಯ ಬಟ್ಟೆಯಂಚನ್ನು ಮುಟ್ಟಿ ಸ್ಪ್ಯಾನಿಷ್ ಭಾಷೆಯಲ್ಲಿ 'ದೇವಮಾನವ, ದೇವಮಾನವ!' ಎಂದು ಉದ್ಗರಿಸಿ, ಅಲ್ಲಿಂದ ಹೊರಟುಹೋದರು.
ಸ್ವಾಮೀಜಿ ವ್ಯಕ್ತಿತ್ವದ ಮಹಿಮೆ ಕಂಡ ಪ್ರವಾಸಿಗರು ಅವರ ಅದ್ವೈತ ವ್ಯಕ್ತಿತ್ವಕ್ಕೆ ಶರಣಾದರು.ಟಿ
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

