ಬೈಟುಕಾಫಿ

ದೀರ್ಘಾಯು ಮರಗಳು

Published On :

ಬ್ಯಾಕ್ಟೀರಿಯಾಗಳ ಆಯುಷ್ಯ ಅರ್ಧಗಂಟೆ ಮಾತ್ರ. ಕೆಲವು ಸಸ್ಯಗಳು ಒಂದು ವರ್ಷ ಬದುಕಿದರೆ, ಇನ್ನು ಕೆಲವು ಹಲವು ವರ್ಷಗಳವರೆಗೆ ಬದುಕುತ್ತವೆ. ಆಲ ಮತ್ತು ಅರಳಿಮರಗಳು ಹಲವು ಶತಮಾನಗಳವರೆಗೆ ಬದುಕಬಲ್ಲವು.
ಕ್ಯಾಲಿಫೋರ್ನಿಯಾದಲ್ಲಿ ಎಲ್ಲೋಸ್ಟೋನ್ ಪಾರ್ಕ್ ನಲ್ಲಿನ ಪೈನ್ ಬಳಗಕ್ಕೆ ಸೇರಿದ ಸಿಕ್ಟೋಯಿ ಮರಗಳು ಆಯುಷ್ಯದ ಮಟ್ಟಿಗೆ ಜೀವಸಾಮ್ರಾಜ್ಯದಲ್ಲಿ ದಾಖಲೆ ಸ್ಥಾಪಿಸಿವೆ. ಕೆಲವು ಸಿಕ್ಟೋಯಿ ಮರಗಳ ಆಯುಷ್ಯ 3500-5000 ವರ್ಷಗಳು ಎಂದು ತಿಳಿದುಬಂದಿದೆ. ಜನರಲ್ ಶೆರ್ಮನ್ ಮರ 3500 ವರ್ಷಗಳಿಂದ ಅಚಲವಾಗಿ ನಿಂತೇ ಇದೆ. ಅಷ್ಟೇ ಅಲ್ಲ ಬ್ರಿಸ್ಲ್‌ಕೋನ್ ಪೈನ್ ಮರ 4600 ವರ್ಷಗಳಷ್ಟು ಹಳೆಯದೆಂದು ತಿಳಿದುಬಂದಿದೆ. ಇವು ಗಿನ್ನೆಸ್ ಪುಸ್ತಕ ಸೇರಿ ದಾಖಲೆ ಮಾಡಿವೆ.
ಮೆಥುಸೆಲಾ ಎಂಬ ಕಂಟಿಯ ವಯಸ್ಸು 4,900 ವರ್ಷಗಳು. ಮೊಜಾವ್ ಮರುಭೂಮಿಯ ಕ್ರಿಯೊಸೋಟ್ ಪೊದೆಗಳ ಆಯುಷ್ಯ 10,000 ವರ್ಷಗಳೆಂದು ಸಸ್ಯವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಹಕ್ಲ್‌ಬೆರಿ ಹೆಸರಿನ 13000 ವರ್ಷಗಳಷ್ಟು ಹಿಂದಿನ ಗಿಡಗಂಟಿಗಳು ಪತ್ತೆಯಾಗಿವೆ. ಟಾಸ್ಮೇನಿಯಾದ ಮಳೆಕಾಡುಗಳಲ್ಲಿ ಬೆಳೆಯುವ ಲುಮಾಟಿಯಾ ಟಾಸ್ಮಾನಿಕಾ ಸಸ್ಯ 43000 ವರ್ಷಗಳಷ್ಟು ಹಳೆಯದು!


- ಸುಭಾಷ್ ಎನ್. ನೇಳಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.