ಕೃಷ್ಣ ಪ್ರೇಮ ಪಥ

'ರಾಜಕಾರಣಕ್ಕೆ ಒಬ್ಬ ವ್ಯಕ್ತಿ ಬರಬೇಕಾದರೆ, ಗ್ರಾಸ್ ರೂಟ್ ಲೆವೆಲ್ನಿಂದ ಕೆಲಸ ಮಾಡಿರಬೇಕು. ಆದರೆ ಈಗೆಲ್ಲ ಗ್ರೌಂಡ್ ವರ್ಕ್ ಇಲ್ಲದೇ ನೇರ ಪಾಲಿಟಿಕ್ಸ್ಗೆ ಇಳೀತಿದಾರೆ. ಹಾಗಾಗಿ ರಾಜಕಾರಣಿಗಳು ಅಂದ್ರೆ ಈಗ ಜನರಲ್ಲಿ ಒಳ್ಳೆ ಭಾವನೆ ಇಲ್ಲ. ಅದನ್ನು ಸರಿಪಡಿಸಬೇಕಿದೆ. ಮುಂದಾದರೂ ರಾಜಕೀಯ, ಅರ್ಥಪೂರ್ಣವಾಗಿ, ಗಂಭೀರವಾಗಿ, ಮರ್ಯಾದೆಯಿಂದ ಇರುವಂತಾಗಬೇಕು...'
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಬಾಳಸಂಗಾತಿ ಪ್ರೇಮ ಸ್ವತಃ ಸೋಶಿಯಾಲಜಿ, ಪೊಲಿಟಿಕಲ್ ಸೈನ್ಸ್ ವ್ಯಾಸಂಗ ಮಾಡಿರುವವರು. ಹೀಗಾಗಿ ಪಾಲಿಟಿಕ್ಸ್ ಬಗ್ಗೆ ಅವರಿಗೆ ವಿಶೇಷ ಆಸಕ್ತಿ. ಅವರೊಂದಿಗೆ ಮಾತಿಗೆ ಕುಳಿತಾಗ...
ನಿಮಗೆ, ಕೃಷ್ಣ ಅವರು ಇಂಥ ಅಧಿಕಾರ/ ಹುದ್ದೆಯಲ್ಲಿರಬೇಕು ಅಂತ ಆಸೆಯಿತ್ತಾ?
ನನ್ನ ಆಸೆಗಿಂತ, ಕೃಷ್ಣ ಅವರು ಎಂಎಲ್ಎ ಆದ ನಂತರ ಮಿನಿಸ್ಟರ್, ಹೀಗೆ, ಸ್ಟೆಪ್ ಬೈ ಸ್ಟೆಪ್ ಅಚೀವ್ ಮಾಡ್ತಾ ಇದ್ರು. ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ವಿದೇಶಾಂಗ ಸಚಿವರಾಗಬೇಕು ಅಂತ ಅವರ ಕನಸಾಗಿತ್ತು, ಅದು ಫಲಿಸಿತು. ನಂಗೆ ಅವರ ಅಚೀವ್ಮೆಂಟ್ಸ್ನಲ್ಲಿ ತೃಪ್ತಿಯಿದೆ.
ರಾಜಕೀಯದಲ್ಲಿದ್ದಾಗ ಅಥವಾ ಈಗ ಎಲೆಕ್ಷನ್ ಟೈಂನಲ್ಲಿ ರಾಜಕೀಯದ ಬಗ್ಗೆ ನಿಮ್ಮ ಹತ್ರ ಡಿಸ್ಕಸ್ ಮಾಡ್ತಾರಾ? ನೀವು ಆಸಕ್ತಿ ತೋರಿಸ್ತೀರಾ?
ಹೂಂ. ನಂಗೆ ಪಾಲಿಟಿಕ್ಸ್ ಅಂದ್ರೆ ಇಂಟ್ರೆಸ್ಟ್ ಇದೆ. ನಾನು ಸಾಮಾನ್ಯವಾಗಿ ಅವರ ಬಳಿ ಮಾತನಾಡುವಾಗ ಹೇಳ್ಬಿಡ್ತೀನಿ, ಪರ್ಸನಲ್ ಆಗಿ ಹೇಳಿಕೆ ಕೊಡೋದಾಗ್ಲಿ, ಇನ್ನೊಬ್ಬರನ್ನು ದೂರುವುದಾಗ್ಲಿ ಮಾಡಬಾರದು. ನಂಗೆ ಇಷ್ಟ ಆಗಲ್ಲ. ಮನುಷ್ಯರಲ್ಲಿ ತಪ್ಪು ಹುಡುಕ್ತಾ ಇದ್ರೆ ಎಲ್ಲ ತಪ್ಪೇ ಕಾಣತ್ತೆ. ಎಲ್ಲದರಲ್ಲೂ ತಪ್ಪು ಇರುತ್ತೆ, ಸರೀನೂ ಇರುತ್ತೆ. ಇದನ್ನು ಜವಾಬ್ದಾರಿಯುತ ಪ್ರಜಾಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.
ಅವರ ಮುಂದಿನ ಹೆಜ್ಜೆ ಏನು?
ಅವರು ಯಾವಾಗ್ಲೂ ಹೇಳೋ ಹಾಗೆ ನಾವು ಎಲ್ಲಾನೂ ಅನುಭವಿಸಿದ್ದೀವಿ. ಜನರು ಸಹಕರಿಸಿದ್ದಾರೆ. ಈಗ ಯಾವ ಆಸೆಯೂ ಇಲ್ಲ. ಆರೋಗ್ಯ, ಮನಸ್ಸಿಗೆ ನೆಮ್ಮದಿ ಸಿಕ್ರೆ ಸಾಕು.
ಕೃಷ್ಣರವರು ಒಂದಲ್ಲಾ ಒಂದು ಹುದ್ದೆಯಲ್ಲಿದ್ದವರು. ಈಗ ಹೇಗನಿಸುತ್ತೆ?
ಅವರು ಅಧಿಕಾರದಲ್ಲಿರಲಿ, ಇಲ್ಲದಿರಲಿ, ಕೈಯಲ್ಲಿರುವ ಕೆಲಸ ನಿರ್ವಂಚನೆಯಿಂದ, ದಕ್ಷತೆಯಿಂದ ಮಾಡ್ತಾರೆ.
ಈಗ ಅಧಿಕಾರದಲಿಲ್ಲ, ಇದು ರಾಜಕೀಯ ನಿವೃತ್ತಿ ಅಂತಾನಾ ಅಥವಾ ಮತ್ತೆ ರಾಜಕೀಯಕ್ಕಿಳಿಯುವ ಸಾಧ್ಯತೆಯಿದೆಯೇ?
ನಿವೃತ್ತಿ ಅಂತ ಏನೂ ಇಲ್ಲ. ಪಾರ್ಟಿಗೆ ಕೆಲಸ ಮಾಡ್ತಿದೀನಿ, ಪಾರ್ಟಿಗೆ ಕೆಲಸ ಮಾಡುವವರಿಗೆ ನಿವೃತ್ತಿ ಅನ್ನೋದೇ ಇರಲ್ಲ ಅಂತ ಹೇಳ್ತಿರ್ತಾರೆ. ಜನರಿಗೋಸ್ಕರ, ದೇಶಕ್ಕೋಸ್ಕರ ಕೆಲಸ ಮಾಡಿದರೆ, ನಿರಂತರವಾಗಿ ಮಾಡಬಹುದು.
ಕೃಷ್ಣರವರು ಹೈಲಿ ಕ್ವಾಲಿಫೈಡ್. ಅವರ ಲೈಫ್ಸ್ಟೈಲ್ ಬಗ್ಗೆ ಹೇಳಿ...
ಅತ್ಯಂತ ಸಿಂಪಲ್ ಲೈಫ್ಸ್ಟೈಲ್ ಅವರದು. ಎಲ್ಲರೊಡನೆ ಬೆರೆತು, ಅವರಂತೆಯೇ ಹೊಂದಿಕೊಳ್ತಾರೆ.
ಅವರ ಸೆನ್ಸ್ ಆಫ್ ಹ್ಯೂಮರ್ ಬಗ್ಗೆ...
ಅವರು ವ್ಯಂಗ್ಯವಾಗಿ ಹಾಸ್ಯ ಮಾಡೋದು ಜಾಸ್ತಿ. ಯಾರ್ನೂ ನೋಯಿಸಲ್ಲ.
ಅವರಿಗೆ ತುಂಬಾ ಇಷ್ಟವಾದ ತಿನಿಸು?
ಜಾಮೂನು, ಕೇಸರಿಬಾತ್ ತುಂಬಾ ಇಷ್ಟ.
ನಿಮ್ಮ ಬಾಲ್ಯದ ಬಗ್ಗೆ ಹೇಳಿ..
ನಾನು ಶಿವಮೊಗ್ಗ ತಾಲೂಕಿನ ಕಡುಮಲ್ಲೆಲಿ ಹುಟ್ಟಿದ್ದು. ಓದಿದ್ದು ತೀರ್ಥಹಳ್ಳೀಲಿ. ಥ್ರೋಬಾಲ್ ಆಡ್ತಿದ್ದೆ. ನಮ್ಮ ತಂದೆ ಕಾಂಗ್ರೆಸ್ನವರು.
ಅವರು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾಗ, ನಿಮ್ಮ ಜೊತೆ ಹೇಗೆ ಟೈಂ ಮಾಡ್ಕೋತಿದ್ರು?
ರಾಜಕಾರಣಿಗಳ ಟೈಮಿಂಗ್ಸೇ ಬೇರೆ ಇರುತ್ತೆ. ಎಷ್ಟೊತ್ತಿಗೆ ಮೀಟಿಂಗ್ ಇರುತ್ತೆ, ಎಷ್ಟೊತ್ತಿಗೆ ಜನ ಬರ್ತಾರೆ, ಹೀಗೇ ಅಂತ ಇರಲ್ಲ. ಬಾಕಿ ಟೈಂನಲ್ಲಿ ನಮ್ಮ ಜೊತೆ ಸಂಗೀತ ಕಾರ್ಯಕ್ರಮಕ್ಕೆ ಬರ್ತಾರೆ. ಟೈಂ ಕೊಡ್ತಾರೆ.
ಅವರಲ್ಲಿ ನೀವು ಮೆಚ್ಚಿದ ಗುಣ?
ಅವರಿಗೆ ಅಪಾರ ಸಹನೆಯಿದೆ. ತುಂಬಾ ವಿಮರ್ಶೆ ಮಾಡಿ ಯೋಚನೆ ಮಾಡಿಯೇ ಮಾತಾಡೋದು. ಸುಮ್ನೆ ಏನೂ ಮಾತಾಡಲ್ಲ, ಯಾರ ಬಗ್ಗೆಯೂ ಕೆಟ್ಟದು ಯೋಚನೆ ಮಾಡಲ್ಲ, ಮಾತಾಡಲ್ಲ.
ಅವರು ನಿಮ್ಮಲ್ಲಿ ಮೆಚ್ಚಿದ ಗುಣ?
ಅವರು ಯಾರ ಬಗ್ಗೆಯೂ ಮುಕ್ತವಾಗಿ ಮೆಚ್ಚಿ ಮಾತಾಡೋದು ಕಮ್ಮಿ. ಅವರ ಭಾವನೆಗಳನ್ನು ಮನಸ್ಸಲ್ಲೇ ಇಟ್ಕೋತ್ತಾರೆ.
ಅವರು ರಾಜಕೀಯದಲ್ಲಿದ್ದುದು ತಿಳಿದೂ ಮದ್ವೆ ಆದ್ರಿ, ಹೇಗನಿಸಿತ್ತು?
ಅವರು ಮದುವೆಗೆ ಮುಂಚೆ ಕೇಳಿದ್ರು ನನ್ನ, ನಾನು ಪೊಲಿಟಿಶಿಯನ್, ನನ್ನ ಜೀವನ ಹೇಗಿರುತ್ತೋ ಗೊತ್ತಿಲ್ಲ. ಜೈಲ್ಗೂ ಹೋಗಬೇಕಾಗಬಹುದು, ಚೆನ್ನಾಗಿಯೂ ಇರಬಹುದು, ಪರ್ವಾಗಿಲ್ವಾ ಅಂತ. ನಾನು ಆಗ ಅಷ್ಟೇನೂ ಡೀಪ್ ಆಗಿ ಯೋಚನೆ ಮಾಡ್ಲಿಲ್ಲ. ಮದುವೆ ಆದ ಮೇಲೆ ರಾಜಕಾರಣಿಯ ಜೀವನ ಗೊತ್ತಾಯ್ತು.
ಕೃಷ್ಣರವರ ಹಾಬೀಸ್?
ಶಾಸ್ತ್ರೀಯ ಸಂಗೀತ ಇಷ್ಟ, ಬುಕ್ಸ್ ಓದ್ತಾರೆ. ಟೆನ್ನಿಸ್ ತುಂಬಾ ಇಷ್ಟ. ಮ್ಯಾಚ್ ಎಷ್ಟು ಹೊತ್ತಿಗಾದ್ರೂ ಬರ್ಲಿ, ತಪ್ಪದೇ ನೋಡ್ತಾರೆ. ಎಷ್ಟೋ ಸತಿ ವಿಂಬಲ್ಡನ್ಗೂ ಹೋಗಿ ಮ್ಯಾಚ್ ನೋಡಿ ಬಂದಿದ್ದಾರೆ.
ನಿಮ್ಮ ಹಾಬೀಸ್?
ನಂಗೆ ಶಾಸ್ತ್ರೀಯ ಸಂಗೀತ, ಗಾರ್ಡನಿಂಗ್ ತುಂಬಾ ಇಷ್ಟ. ನಾನು ತುಂಬಾ ಒಳ್ಳೆ ಹೋಸ್ಟ್. ಅತಿಥಿ ಸತ್ಕಾರ ಮಾಡೋದು ತುಂಬಾ ಇಷ್ಟ.
ಅವರು ತುಂಬಾ ಬ್ಯುಸಿ ಆಗಿದ್ದಾಗ, ನೀವು ಹೇಗೆ ಟೈಂ ಸ್ಪೆಂಡ್ ಮಾಡ್ತಿದ್ರಿ?
ನನಗೆ ಹಾಗೇ ಟೈಂ ಸರಿದು ಹೋಗುತ್ತೆ. ಇದ್ದಕ್ಕಿದ್ದ ಹಾಗೆ ಜನ ಇವರನ್ನು ನೋಡಕ್ಕೆ ಬರ್ತಿದ್ರು. ಅವರಿಗೆ ಕಾಫಿ ತಿಂಡಿ ಮಾಡಿ ಕೊಡುವುದು. ಅವರನ್ನ ಮಾತಾಡಿಸುವುದು. ಎಷ್ಟೋ ಸರ್ತಿ ಅರ್ಧ ರಾತ್ರೀಲಿ ಅಡಿಗೆ ಮಾಡಿ ಬಡಿಸಿದ್ದೂ ಉಂಟು...
ನಿಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ, ಕಾರಣ?
ನಾನು ವಂಶರಾಜಕೀಯ ಇಷ್ಟಪಡಲ್ಲ. ನನ್ನ ಪ್ರಕಾರ ರಾಜಕೀಯಕ್ಕೆ ಬರಬೇಕೆಂದರೆ ಗ್ರಾಸ್ರೂಟ್ ಲೆವೆಲ್ನಿಂದ ಕೆಲಸ ಮಾಡಿ ಕಲಿತು ಬರಬೇಕು.
ಅವರ ಫಿಟ್ನೆಸ್ ಗುಟ್ಟು..
ಟ್ರೆಡ್ ಮಿಲ್ ಮಾಡ್ತಾರೆ. ರೆಗ್ಯುಲರ್ ಆಗಿ ಟೆನ್ನಿಸ್ ಆಡ್ತಿದ್ರು. ಸದಾ ಟ್ರಿಮ್ ಆಗಿ ಫಿಟ್ ಆಗಿರೋದು ಅವರಿಗೆ ಇಷ್ಟ.
ಅವರೊಡನೆ ಒಂದು ಮರೆಯಲಾಗದ ಘಟನೆ
ಇವರು ಗೌರ್ನರ್ ಆಗಿದ್ದಾಗ ಸತ್ಯ ಸಾಯಿಬಾಬಾ ತಮಿಳುನಾಡಿಗೆ ನೀರು ಒದಗಿಸಿಕೊಟ್ಟ ಸಮಯದಲ್ಲಿ ಚೆನ್ನೈನಲ್ಲಿ ಫಂಕ್ಷನ್ ಅರೇಂಜ್ ಮಾಡಿದ್ರು, ನಾವು ಹೋಗಿದ್ವಿ. ಅಲ್ಲಿಗೆ ಬಾಬಾ ಬಂದಿದ್ರು, ಆಗ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ್ರು. ಅದು ತುಂಬಾ ಖುಷಿ ಕೊಟ್ಟ ಕ್ಷಣ.
ಚಿಟ್ ಚಾಟ್
ನಿಮಗಿಷ್ಟವಾದ ಸಿನಿಮಾ - 1942 ಲವ್ಸ್ಟೋರಿ
ಆ್ಯಕ್ಟರ್ - ಆನಂತ್ನಾಗ್
ಆಟ - ಟೆನ್ನಿಸ್
ಆಟಗಾರ - ಸಚಿನ್ ತೆಂಡೂಲ್ಕರ್
ವ್ಯಕ್ತಿ - ಸ್ವಾಮಿ ವಿವೇಕಾನಂದ
ತಿನಿಸು - ಪೇಣಿ
ಡ್ರೆಸ್ - ಸೀರೆ
- ಗೀತಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


