ಬೈಟುಕಾಫಿ

ಈ ಬಂಧ ಅನುಬಂಧ

ಈ ಬಂಧ ಅನುಬಂಧ
Published On :

ವಿನೂತನ ರಿಯಾಲಿಟಿ ಶೋಗಳು ಹಾಗೂ ವೈಭವೋಪೇತ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಈಟಿವಿಗೆ ಪ್ರಶಸ್ತಿ ಪ್ರದಾನ ಸಮಾರಂಭಗಳು ಹೊಸತೇನಲ್ಲ. ಆದರೆ ವಾಹಿನಿಯು ಈ ವರ್ಷ ಅದನ್ನು ಇನ್ನಷ್ಟು ಹೊಸ ರೂಪುರೇಷೆಗಳೊಂದಿಗೆ ಇನ್ನಷ್ಟು ವರ್ಣರಂಜಿತವಾಗಿ ಹತ್ತುಹಲವು ಹೊಸ ಐಡಿಯಾಗಳೊಂದಿಗೆ ವಿನ್ಯಾಸಗೊಳಿಸಿದೆ. ಈ ಬಾರಿ 'ಈಟಿವಿ ಕನ್ನಡ ಅನುಬಂಧ' ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಿರುವ ಲೈವ್ ವಯಾಕಾಂ18 ಸಂಸ್ಥೆ, ತನ್ನ ವೀಕ್ಷಕರಿಗೂ ಇದರಲ್ಲಿ ಭಾಗಿಯಾಗುವ ಅವಕಾಶ ಒದಗಿಸಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈಟಿವಿ ಕನ್ನಡ ಫ್ಯಾಮಿಲಿಯ ಸಂಭ್ರಮಾಚರಣೆಯೂ ಇದ್ದು  ಇದರೊಂದಿಗೆ , ತಮ್ಮ ಟೀವಿ ಕುಟುಂಬದ ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಯೋಜನೆ ಹಾಕಿಕೊಂಡಿದೆ.
ಕಾರ್ಯಕ್ರಮದಲ್ಲಿ ಈಟಿವಿ ಕನ್ನಡದ ಸ್ಟಾರ್‌ಗಳಾದ ಚಿತ್ರಲೇಖದ ನಂದಿನಿಗೌಡ, ಬದುಕು ಧಾರಾವಾಹಿಯ ಸಿರಿ, ಗಾಳಿಪಟದ ಪಲ್ಲವಿ, ಚರಣದಾಸಿಯ ಕಾವ್ಯ, ಅಮ್ಮ ನಿನಗಾಗಿಯ ವಾಣಿಶ್ರೀ, ಪುಟ್ಟಗೌರಿಮದುವೆಯ ರಂಜಿನಿ,  ಅಗ್ನಿಸಾಕ್ಷಿಯ ವಿಜಯ್, ಅಕ್ಕ ಧಾರಾವಾಹಿಯ ಅನುಪಮಗೌಡ, ಚಿಟ್ಟೆಹೆಜ್ಜೆಯ ನವೀನ್ ಮಾಧವ, ಮಹಾಪರ್ವದ ಅಶ್ವಿನಿಗೌಡ, ಅಶ್ವಿನಿನಕ್ಷತ್ರದ ಮಯೂರಿ ಹಾಗೂ ರೋಬೊಫ್ಯಾಮಿಲಿಯ ಮಾಸ್ಟರ್ ಆನಂದ್ ಪಾಲ್ಗೊಳ್ಳಲಿದ್ದು, ಬಿಗ್‌ಎಫೆಮ್‌ನ ಆರ್‌ಜೆ ಶೃತಿ ನಿರೂಪಣೆ ಮಾಡಲಿದ್ದಾರೆ.
ಪ್ರೇಕ್ಷಕರಿಗೂ ತಮ್ಮ ನೆಚ್ಚಿನ ತಾರೆಯರಿಗೆ ವೋಟಿಂಗ್ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ಪ್ರೇಕ್ಷಕರ ಮತಗಳನ್ನು ಪರಿಗಣಿಸಿ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ31ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆಯಲಿದ್ದು , ಈಟಿವಿಯಲ್ಲಿ  ಜೂನ್14 ಹಾಗೂ15ರಂದು  ರಾತ್ರಿ 8 ರಿಂದ11ರವರೆಗೆ ಪ್ರಸಾರವಾಗುತ್ತದೆ.

ನಾಮ ನಿರ್ದೇಶನ  ವಿಭಾಗಗಳು
(ಇನ್‌ಹೌಸ್ ವೋಟಿಂಗ್)
ಮನೆಮೆಚ್ಚಿದ ಮಗ
ಮನೆಮೆಚ್ಚಿದ ಮಗಳು
ಮನೆಮೆಚ್ಚಿದ ಸೊಸೆ
ಮನೆಮೆಚ್ಚಿದ ಅತ್ತೆ
ಮನೆಮೆಚ್ಚಿದ ಅಪ್ಪ
ಮನೆಮೆಚ್ಚಿದ ಅಮ್ಮ
ಮನೆಮೆಚ್ಚಿದ ಹಿರಿಯ
ಮನೆಮೆಚ್ಚಿದ ದಂಪತಿ
ಮನೆಮೆಚ್ಚಿದ ಶಕುನಿ
ಮನೆಮೆಚ್ಚಿದ ಮಂಥರೆ
ಮನೆಮೆಚ್ಚಿದ ವಿದೂಷಕ
ಮನೆಮೆಚ್ಚಿದ ಒಡಹುಟ್ಟಿದವರು
ಮನೆಮೆಚ್ಚಿದ ಮಾತಿನ ಮಲ್ಲ (ಅಕುಲ್)

ಪಬ್ಲಿಕ್ ವೋಟಿಂಗ್
ಜನ ಮೆಚ್ಚಿದ ಸಂಸಾರ
ಜನ ಮೆಚ್ಚಿದ ತಾರೆ (ಪುರುಷ)
ಜನ ಮೆಚ್ಚಿದ ತಾರೆ (ಸ್ತ್ರೀ)
ಜನ ಮೆಚ್ಚಿದ ಹಾಡು
ದಶಕಗಳಿಂದಲೂ ಈಟಿವಿ ಕನ್ನಡ ವಾಹಿನಿಯು ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಪ್ರತಿ ವರ್ಷವೂ ಸಂಸ್ಥೆಯು ಹೊಸ ಮಾದರಿಯ  ಕಾರ್ಯಕ್ರಮಗಳನ್ನು ಪರಿಚಯಿಸುತ್ತಾ ಬಂದಿದೆ. ಅಲ್ಲದೆ ಇಂದು ಕರ್ನಾಟಕದ  ಮೂಲೆ ಮೂಲೆಗಳಲ್ಲಿಯೂ ತನ್ನ ಕಾರ್ಯಕ್ರಮಗಳು ಪ್ರದರ್ಶನವಾಗುವಂತೆ ಮಾಡಿದೆ. ಇದೀಗ ನೂತನ ಈಟಿವಿ ಫ್ಯಾಮಿಲಿ ಅವಾರ್ಡ್ಸ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ವಿಭಿನ್ನ ಅನುಭವದ ರಸದೌತಣ ನೀಡಲಿದ್ದೇವೆ.
- ಪರಮೇಶ್ವರ ಗುಂಡ್ಕಲ್, ಕಾರ್ಯಕ್ರಮ ಮುಖ್ಯಸ್ಥ, ಈಟಿವಿ ಕನ್ನಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.