ಕನ್ನಡ ತಾಯಿಗೆ ನಮನ

ಸುಗಮಸಂಗೀತ ಕ್ಷೇತ್ರದಲ್ಲಿ ಹೊಸತನಕ್ಕೆ ಮನೆಮಾತಾಗಿರುವ ಆದರ್ಶ ಸುಗಮ ಸಂಗೀತ ಅಕಾಡೆಮಿಯು ಇದೀಗ 'ಕನ್ನಡ ತಾಯಿಗೆ ನಮನ' ಸರಣಿ ಕಾರ್ಯಕ್ರಮವನ್ನು ಮೇ 24, 2014ರಂದು ಬೆಂಗಳೂರಿನ ಎನ್.ಆರ್ ಕಾಲೋನಿಯ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಆಯೋಜಿಸಿದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಸೂಕ್ತ ತರಬೇತಿ ನೀಡಿ, ವೇದಿಕೆ ಕಲ್ಪಿಸಿಕೊಡುವ, ಆ ಮೂಲಕ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವುದು, ಉಳಿಸುವುದು ಗೀತಗಾಯನ-ವಾದ್ಯಸಂಗೀತ ಸರಣಿಯ ಉದ್ದೇಶವಾಗಿದೆ. ಮೇ ತಿಂಗಳ ಸರಣಿಯ ಪ್ರಥಮ ಕಾರ್ಯಕ್ರಮದಲ್ಲಿ ಬಾಲ ಕಲಾವಿದ, ಮಾ. ಲಿಖಿತ್‌ಕೃಷ್ಣ ಕಿಕ್ಕೇರಿ (12 ವರ್ಷ) ಹಾಡಲಿದ್ದಾನೆ. ಈ ಪ್ರತಿಭಾವಂತ ನಿರರ್ಗಳವಾಗಿ ಮೂರು ಗಂಟೆಗಳ ಕಾಲ ಸುಗಮಸಂಗೀತ ಹಾಡಬಲ್ಲ, ಕೀಬೋರ್ಡ್ ನುಡಿಸಬಲ್ಲ. ಈ ಸಂದರ್ಭದಲ್ಲಿ ಗೀತಾಲಯ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮವಿದೆ.
ಈ ಕಾರ್ಯಕ್ರಮವನ್ನು ಡಾ. ಟಿ.ಎ. ಶರವಣ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಿಕ್ಕೇರಿ ಕೃಷ್ಣಮೂರ್ತಿಯವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಶಿವಮೊಗ್ಗ ಸುಬ್ಬಣ್ಣ, ಡಾ. ಬಿ.ಕೆ. ಸುಮಿತ್ರಾ, ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ನಾಗರತ್ನ ನಾಗರಾಜ್, ಎಚ್.ಆರ್. ಸುರೇಶ್, ಎಚ್.ಎಸ್.ಆರ್. ಕೃಷ್ಣಮೂರ್ತಿ ಆಗಮಿಸಲಿದ್ದಾರೆ.
ದಿನಾಂಕ: 24-5-2014, ಸಮಯ: ಸಂಜೆ 5-00ಕ್ಕೆ, ಸ್ಥಳ: ಬಿ.ಎಂ.ಶ್ರೀ ಸಭಾಂಗಣ, ಎನ್.ಆರ್. ಕಾಲೋನಿ, ಬೆಂಗಳೂರು-04. ವಿವರಗಳಿಗೆ ಕಿಕ್ಕೇರಿ ಕೃಷ್ಣಮೂರ್ತಿ-9448046816.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


