ಕಾಮಿಡಿ ಕಮ್ಯಾಂಡ್, ಕಾಮಿಡಿಗೆ ಡಿಮ್ಯಾಂಡ್

2014ರ ಭಾರತೀಯ ಕಿರುತೆರೆಯ ಟಾಪ್ಟೆನ್ ಮನರಂಜನಾ ಕಾರ್ಯಕ್ರಮಗಳು ಯಾವುವು ಎಂದು ವೆಬ್ಸೈಟೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು.
ಅದುರಾಷ್ಟ್ರಮಟ್ಟದ ಸಮೀಕ್ಷೆಯಾಗಿದ್ದ ಕಾರಣ ಕೇವಲ ಹಿಂದಿ ಕಾರ್ಯಕ್ರಮಗಳು ಮಾತ್ರ ಪರಿಗಣಿತವಾಗಿದ್ದವು. ಆದರೆ ಆ ಪಟ್ಟಿಯಲ್ಲಿದ್ದ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಎಲ್ಲ ಜನರೂ ಮೆಚ್ಚಿಕೊಂಡಿರೋದಂತೂ ಸತ್ಯ . ಆ ಪಟ್ಟಿಯನ್ನು ಒಮ್ಮೆ ನೋಡಿದರೆ ನೀವೂ ಒಪ್ಪುತ್ತೀರಿ. ನೀವು ಈವರೆಗೆ ನೋಡಿಲ್ಲವಾದರೆ ಇನ್ಮುಂದೆ ಆ ಕಾರ್ಯಕ್ರಮವನ್ನು ನೋಡಲು ಶುರುವಿಟ್ಟುಕೊಳ್ಳುತ್ತೀರಿ.
ಕಾಮಿಡಿ ನೈಟ್ಸ್ ವಿಥ್ ಕಪಿಲ್
ಇತ್ತೀಚಿನ ದಿನಗಳಲ್ಲಿ ಕಪಿಲ್ನನ್ನು ಮೀರಿಸುವಂಥ ಸ್ಟಾಂಡ್ಅಪ್ ಕಾಮಿಡಿಯನ್ ಬೇರೊಬ್ಬನಿಲ್ಲ. ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವ ಏಕೈಕ ಟಾಕ್ ಷೋ.
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್
ನಾಲ್ಕು ಸೀಸನ್ ನೂರಾಮೂವತ್ತು ಎಪಿಸೋಡ್ ಮುಗಿಸಿ ಇನ್ನೂ ನಂಬರ್ ಒನ್ ಡ್ಯಾನ್ಸ್ ರಿಯಾಲಿಟಿ ಶೋ ಆಗಿ ಮುನ್ನುಗ್ಗುತ್ತಿರುವ ಡಿಐಡಿ, ಚಲನಚಿತ್ರಕ್ಕೂ ಸ್ಪೂರ್ತಿಯಾಯ್ತು. ಇದೇ ಮಾದರಿಯಲ್ಲಿ ಎಲ್ಲ ಪ್ರಾದೇಶಿಕ ಚಾನೆಲ್ಗಳಲ್ಲೂ ಡ್ಯಾನ್ಸ್ ಷೋ ಹುಟ್ಟಿಕೊಂಡಿತು.
ದಿಯಾ ಔರ್ ಬಾತಿ ಹಮ್
2011ರಿಂದ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗುತ್ತಿರೋ ಧಾರಾವಾಹಿ ಇದೀಗ ಮೂರು ವರ್ಷ ಪೂರೈಸಿದೆ. ಆಮೀರ್ ಖಾನ್ ಕೂಡ ಧಾರಾವಾಹಿಯ ಸ್ಪೆಶಲ್ ಎಪಿಸೋಡ್ ಸಂಭ್ರಮದಲ್ಲಿ ಭಾಗವಹಿಸಿದ್ದು ಇದರ ಜನಪ್ರಿಯತೆಗೆ ಸಾಕ್ಷಿ.
ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ
ಆರನೇ ವರ್ಷದಲ್ಲಿ ಯಶಸ್ವಿಯಾಗಿ ನೋಡಿಸಿಕೊಳ್ಳುತ್ತಿರುವ ಹಾಸ್ಯ ಧಾರಾವಾಹಿ, ಐಎಂಡಿಬಿಯಲ್ಲಿ ಹತ್ತಕ್ಕೆ ಎಂಟು ಅಂಕ ಪಡೆದಿರುವ ಹೆಗ್ಗಳಿಕೆ. ಸಬ್ಟಿವಿಯಲ್ಲಿ ಪ್ರಸಾರ.
ಪವಿತ್ರ ರಿಷ್ತಾ
ಟಿಪಿಕಲ್ ಏಕ್ತಾ ಕಪೂರ್ ಧಾರಾವಾಹಿ. ಝೀಟೀವಿಯಲ್ಲಿ ಪ್ರಸಾರ. ಈಗಾಗಲೇ ಐದನೇ ವರ್ಷದಲ್ಲಿದೆ.
ಕಾಮಿಡಿ ಸರ್ಕಸ್ ಮಹಾಬಲಿ
2007ರಲ್ಲಿ ಶುರುವಾದ ಸ್ಪರ್ಧಾತ್ಮಕ ರಿಯಾಲಿಟಿ ಶೋ ಚಿತ್ರರಂಗಕ್ಕೆ ಹಲವು ಕಾಮಿಡಿ ನಟರನ್ನು ಕೊಟ್ಟಿದೆ. ಮಿಕ್ಕ ನಾಲ್ಕು ಸ್ಥಾನಗಳನ್ನು ಈ ಕೆಳಗಿನ ಕಾರ್ಯಕ್ರಮಗಳು ಅಲಂಕರಿಸಿವೆ:
ಕ್ರೈಮ್ ಪ್ಯಾಟ್ರೋಲ್ ದಸ್ತಕ್
ಮ್ಯಾಡ್ ಇನ್ ಇಂಡಿಯಾ
ತುಮ್ಹಾರಿ ಪಖಿ
ಸರಸ್ವತಿ ಚಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


