ಎಂ.ಎಸ್ ಛಪ್ಪರ್‌ಬಂದ್, ವಿಜಾಪುರ
1) ಮುಸ್ಲಿಂ ಹೆಂಗಸೊಬ್ಬಳು ಜೀವನಾಂಶ ಭತ್ಯೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಿಂಗಳಿಗೆ ರೂ 1500/- ನೀಡುವಂತೆ ಆದೇಶ ಪಡೆದಳು. ಹಣ ಪಾವತಿ ಆಗದೆ ಇದ್ದಾಗ ರಿಕವರಿಗಾಗಿ ಅರ್ಜಿಹಾಕಿದಳು, ಅದು ಮುಗಿಯುವುದರೊಳಗೆ ಅವಳು ತೀರಿಕೊಂಡಳು ಅಲ್ಲಿಯವರೆಗೆ ಬಾರದಿದ್ದ ಹಣವನ್ನು ಆಕೆಯ ತಾಯಿಯು ಪಡೆಯಬಹುದೇ? 2) ಮುಸ್ಲಿಂ ಹೆಂಗಸೊಬ್ಬಳು ಮದುವೆಯಾಗಿ 12 ವರ್ಷವಾದರೂ ಮಕ್ಕಳನ್ನು ಹಡೆಯಲಿಲ್ಲ, ಆಕೆಯ ಗಂಡ ಮದುವೆಯ ದಾಖಲೆಗಳನ್ನು ನಾಶ ಮಾಡಿದ್ದರಿಂದ ಆಕೆ ಮದುವೆಯಾದಾಗಿನ ಭಾವಚಿತ್ರ, ಪಡಿತರ ಚೀಟಿ ಇತ್ಯಾದಿಗಳನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿದ್ದಾಳೆ. ತೀರ್ಪು ಏನಾಗಬಹುದು ?
1) ಮುಸ್ಲಿಂ ಷರಿಯಾತ್ ಕಾನೂನಿನಂತೆ ತಾಯಿಯು ಮಗಳ ಬಾಕಿಯಿರುವ ಜೀವನಾಂಶ ಭತ್ಯೆ ಪಡೆಯಲು ಅರ್ಹಳು. 2) ಮುಸ್ಲಿಂ ವಿವಾಹ ಪದ್ಧತಿಯಲ್ಲಿ (ಸುನ್ನಿಗಳಲ್ಲಿ) ಮದುವೆಯು ಇಬ್ಬರು ಸಾಕ್ಷಿಗಳ ಮುಂದೆ ನಡೆಯಬೇಕೆಂದು ಕಡ್ಡಾಯ. ಆ ಸಾಕ್ಷಿಗಳಿದ್ದರೂ ನೆರೆಹೊರೆಯವರ ಸಾಕ್ಷಿಗೆ ಬೇರೆ ದಾಖಲಾತಿಗಳು, ಪಡಿತರ ಚೀಟಿ, ಜೊತೆಗಿನ ಭಾವಚಿತ್ರ ಮುಂತಾದವು ಮದುವೆಯಾಗಿದೆ ಎಂದು ಸಾಬೀತು ಪಡಿಸಲು ಸಾಕು.
- ಎಚ್.ಆರ್. ಕಸ್ತೂರಿರಂಗನ್