ಯಾಕೆ ಕೋಲ್ಯ ತನ್ನ ಪ್ರೆಗ್ನೆಂಟ್ ಹೆಂಡ್ತಿಯನ್ನು ಮತ್ತೆ ಮತ್ತೆ ಪಿಜ್ಜಾ ಹಟ್ಗೆ ಕರ್ಕೊಂಡ್ ಹೋಗ್ತಿದ್ದಾ?
ಸಿಂಪಲ್, ಅಲ್ಲೊಂದು ಜಾಹೀರಾತು ಫಲಕವಿತ್ತು... “Free Delivery'!
=
ಕೋಲ್ಯನ ಹೆಂಡ್ತಿ ಸತ್ತು ಹೋದಳು. ಆದರೂ, ಕೋಲ್ಯ ಅಳಲೇ ಇಲ್ಲ. ಅವನ ಗೆಳೆಯ ಫಂಟಾ ಜೋರು ಅಳ್ತ ಇದ್ದ. ಕೋಲ್ಯ ಅವನನ್ನು ಸಮಾಧಾನಿಸುತ್ತಾ, 'ಡೋಂಟ್ವರಿ... ನಾನು ಇನ್ನೊಂದು ಮದ್ವೆ ಆಗ್ತೀನೋ...'!
=
ಟೀಚರ್: ಕಾರ್ಬನ್ ಮಾನಾಕ್ಸೈಡ್ನೊಂದಿಗೆ ಕಬ್ಬಿಣದ ಎರಡು ಪರಮಾಣುಗಳು ಸೇರಿದರೆ ಏನಾಗುತ್ತೆ?
ಕೋಲ್ಯ: ಕಾಫೀ.
ಟೀಚರ್: ಏನ್ ತಲೆಗಿಲೆ ಕೆಟ್ಟಿದ್ಯಾ?
ಕೋಲ್ಯ: ಇಲ್ಲಾ ಮೇಡಂ, ನೋಡಿ ಬೇಕಾದ್ರೆ... Co+2Fe = COFFEE.
ಮಹಿಳೆ: ಸರ್, ದಯವಿಟ್ಟು ಕೂಡಲೇ ಡೈವೋರ್ಸ್ ಕೊಡ್ಸಿ.
ಜಡ್ಜ್: ಯಾಕಮ್ಮ? ಏನಾಯ್ತು?
ಮಹಿಳೆ: ನನ್ನ ಗಂಡ ಆಕ್ಟಿವೇ ಇಲ್ಲ.
ಜಡ್ಜ್: ನಿಮ್ಮ ಗಂಡ ಕಬಡ್ಡಿ ಚಾಂಪಿಯನ್ ಅಲ್ವಾ?
ಮಹಿಳೆ: ಅದೇ ಸಮಸ್ಯೆ ಆಗಿರೋದು. ನನ್ನ ಮುಟ್ಟಕ್ಕೆ ಬರ್ತಾರೆ, ಮತ್ತೆ ಓಡಿ ಹೋಗ್ತಾರೆ!
=
ಫಂಟಾ: ಮದ್ವೆಗೆ ಮುಂಚೆ ಪಾರ್ಕು. ನಂತರ?
ಕೋಲ್ಯ: ಲೈಫೇ ಜುರಾಸಿಕ್ ಪಾರ್ಕು!
=
ಕೋಲ್ಯ ಮರದ ಮೇಲೆ ಹೋಗಿ ಕೂತ. ಪಕ್ಕದಲ್ಲೇ ಮಂಗ ಇತ್ತು.
ಮಂಗ: ಮರದ ಮೇಲೆ ಯಾಕೆ ಬಂದೆ?
ಕೋಲ್ಯ: ಸೇಬು ತಿನ್ನಲು.
ಮಂಗ: ಆದರೆ, ಇದು ಮಾವಿನ ಮರ ಅಲ್ವಾ?
ಕೋಲ್ಯ: ಗೊತ್ತು. ಅದಕ್ಕೇ ಕೈಯಲ್ಲಿ ಸೇಬು ಹಿಡ್ಕೊಂಡು ಬಂದಿದ್ದೀನಿ!