ಸಾಪ್ತಾಹಿಕಪ್ರಭ

ಯಡ್ಡಿ ಸಾಹೇಬ್ರು ಶೆಟ್ಟರ್‌ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರಾ?, ರೋಲ್‌ಕಾಲ್ ಮಾಡ್ತಿದ್ದಾರಾ?

Published On :

ಕೆ.ಬಿ. ಶಿವಕುಮಾರ್, ಕಾಳೀಹುಂಡಿ
= ಒಗಟು ಹೇಳುತ್ತೇನೆ, ಬಿಡಿಸುತ್ತೀಯಾ ಅಂತಾಳಲ್ಲ?
    -ಗೂಗಲ್‌ನಲ್ಲಿ  ಸರ್ಚ್ ಮಾಡಿ!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
= ನನಗೆ ಆದರ್ಶ ಪತಿ ಅನ್ನಿಸಿಕೊಳ್ಳಬೇಕೆಂಬ ಆಸೆ, ಏನ್ಮಾಡಬೇಕು?
    -'ಆದರ್ಶ' ಅಂತ ಹೆಸರಿಟ್ಕೊಳ್ಳಿ !

    ಅಕ್ರಂ ಮಹಮೂದ್, ಚಿತ್ರದುರ್ಗ
= ಯಡ್ಡಿ ಸಾಹೇಬ್ರು ಶೆಟ್ಟರ್‌ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರಾ?,  ರೋಲ್‌ಕಾಲ್ ಮಾಡ್ತಿದ್ದಾರಾ?
    -ಅವೆಲ್ಲ ಮಾಡಿ ಏನೂ ಆಗದೆ ಈಗ ಬರೀ ಇ-ಮೇಲ್ ಮಾಡ್ತಿದ್ದಾರೆ!

    ರವಿಕುಮಾರ್ ಜಿ.ಬಿ., ಬೆಂಗಳೂರು
= ಯಡಿಯೂರಪ್ಪನವರು ಶೆಟ್ಟರ್ ಸರ್ಕಾರಕ್ಕೆ ಬರಿ 'ಡೆಡ್‌ಲೈನ್‌'ಗಳನ್ನೇ ನೀಡುತ್ತಾರೆ ಏಕೆ?
    -ಅವರಿಗೆ ಬೇರೆ 'ಲೈನ್ ಹೊಡೆಯೋಕೆ' ಬರ್ತಿಲ್ಲ!

    ಪವನಕುಮಾರ್ ಕೆ.ವಿ., ಬಳ್ಳಾರಿ
= ಪಾದಯಾತ್ರೆ ಮಾಡಬೇಕೆಂದಿರುವೆ, ಎಲ್ಲಿಂದ ಶುರು ಮಾಡಲಿ ಘ್ನಾನಣ್ಣ?
    -ಶ್ರೀರಾಮುಲು ಬಿಟ್ಟಲ್ಲಿಂದ, ಕಾಂಗ್ರೆಸ್‌ನೋರು ಇನ್ನೂ ಹೋಗದ ಜಾಗದಿಂದ!

    ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
= ಬದುಕನ್ನು ಅನುಭವಿಸಲೇಬೇಕಾ?
    -ಬದುಕನ್ನು ಬದುಕಿದ್ರೂ ಸಾಕು!

    ಪಿ.ಜೆ. ರಾಘವೇಂದ್ರ, ಮೈಸೂರು
    ಅತ್ಯಾಚಾರಿಗಳಿಗೆ ಸಂತಾನಹರಣ ಶಿಕ್ಷೆ, ಭ್ರಷ್ಟಾಚಾರಿಗಳಿಗೆ?
    -ಮಾನಹರಣ ಶಿಕ್ಷೆ, ಚುನಾವಣೆಯಲ್ಲಿ!

    ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
= ಪ್ರೇಯಸಿ 'ಮಿಸ್ಡ್‌ಕಾಲ್‌' ಕೊಟ್ರೆ ತಕ್ಷಣ ಕರೆ ಮಾಡುವ ಕೆಲವರು ಮಡದಿ ಕಾಲ್ ಮಾಡಿದ್ರೂ ರಿಸೀವ್ ಮಾಡೋದಿಲ್ವಲ್ಲ ಯಾಕೆ?
    -ಲವ್ ಕಾಲ್‌ಗೂ 'ಯಮಗಂಡಕಾಲ್‌'ಗೂ ವ್ಯತ್ಯಾಸವಿದೆಯಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.