ದಟ್ಟವಾದ ಕಾಡಿನಲ್ಲಿ
ವ್ಯಾಧನೊಬ್ಬನಿದ್ದನು
ಸಿಕ್ಕ ಜನಕೆ ಹಿಂಸೆ ಕೊಟ್ಟು
ಸುಲಿಗೆ ಮಾಡುತಿದ್ದನು
ಮುನಿಯೊಬ್ಬ ಬರುತಲಿರಲು
ವ್ಯಾಧ ಹರುಷಪಟ್ಟನು
ಬಳಿಯಲೇನು ಇಲ್ಲವೆನಲು
ಬಹಳ ಹಿಂಸೆ ಕೊಟ್ಟನು
ಪಾಪಕಾರ್ಯ ಬೇಡವೆಂದು
ಮುನಿಯು ಸಲಹೆ ಕೊಟ್ಟನು
ಪಾಪದಲ್ಲಿ ಬೇರೆಯವರು
ಪಾಲು ಪಡೆಯರೆಂದನು
ಅವನ ಮಡದಿ ಮಕ್ಕಳೆಲ್ಲ
ಪಾಪ ಬೇಡವೆಂದರು
ವಸ್ತು ಒಡವೆ, ಸರಕಿನಲ್ಲಿ
ಪಾಲು ಬೇಕು ಎಂದರು
ತಾನು ಗೈದ ತಪ್ಪಿನಿಂದ
ವ್ಯಾಧ ದುಃಖ ಪಟ್ಟನು
ಮುನಿಯು ದಾರಿ ತೋರುತಿರಲು
ಬಹಳ ಹರುಷಗೊಂಡನು
ಮುನಿಯು ಕೊಟ್ಟ ಸಲಹೆಯಂತೆ
ರಾಮನಾಮ ಜಪಿಸಿದ
'ವಾಲ್ಮೀಕಿ' ಎಂಬ ನಾಮದಿಂದ
'ರಾಮಾಯಣ'ವ ರಚಿಸಿದ <
---
ಹಗಲು ದರೋಡೆ
ಅದೊಂದು ಬ್ಯಾಂಕ್. ಒಂದು ಗ್ಯಾಂಗ್ ಬಂದು ಹಗಲಲ್ಲೇ ದರೋಡೆ ನಡೆಸಿಬಿಟ್ಟಿತು. ಗ್ಯಾಂಗ್ಲೀಡರ್ ಒಂದನೇ ಕ್ಲರ್ಕ್ಗೆ ಕೇಳಿದ, 'ನಾವು ದರೋಡೆ ಮಾಡಿದ್ದನ್ನು ನೋಡಿದ್ಯಾ?'. ಕ್ಲರ್ಕ್ 'ಹೌದು' ಎಂದ. ಗ್ಯಾಂಗ್ಲೀಡರ್ 'ಢಂ' ಎಂದು ಅವನನ್ನು ಶೂಟ್ ಮಾಡಿದ. ನಂತರ ಎರಡನೇ ಕ್ಲರ್ಕ್ಗೆ ಕೇಳಿದ, 'ನಾವು ಕದ್ದಿದ್ದನ್ನ ನೀನು ನೋಡಿದ್ಯಾ?'. ಅವನು ಜಾಣ, 'ಇಲ್ಲಾ ನಾನು ನೋಡಿಲ್ಲ. ಆದರೆ, ನನ್ನ ಹೆಂಡ್ತಿ ನೋಡಿದಳು' ಎಂದು ಪಕ್ಕದಲ್ಲೇ ಇದ್ದ ಮನೆಯಾಕೆಯತ್ತ ಕೈ ತೋರಿಸಿದ!
--
ಸಮಾಧಿ ಮೇಲಿನ ತಮಾಷೆ ಸಾಲು (ತಗೋರಿ!)
ಹತ್ತು 'ಆ್ಯಂಬೀಂಟ್' ಸ್ಲೀಪಿಂಗ್ ಟ್ಯಾಬ್ಲೆಟ್ ತೆಗೆದುಕೊಂಡೆ, ಇನ್ನೂ ನನಗೆ ಎಚ್ಚರವಾಗಿಲ್ಲ!
- ಬೆಂಜಮಿನ್ ಬೋಲ್ಟ್, ಅಲಾಸ್ಕಾ ಸಮಾಧಿ
ಬೀರುವಿನ ಬೀಗದ ಕೈಯನ್ನು ಯಾರಿಟ್ಟುಕೊಳ್ಳಬೇಕೆಂಬ ಸಮಸ್ಯೆಯನ್ನು ಹೇಗೆ ಸಂಭಾಳಿಸಿದೆ?
ಸಕತ್ ಸಿಂಪಲ್... ನನ್ನ ಹೆಂಡತಿಯ ಬೀರುವಿನ ಬೀಗದ ಕೈಯನ್ನು ನಮ್ಮಮ್ಮನಿಗೂ, ನಮ್ಮಮ್ಮನ ಬೀರುವಿನ ಬೀಗದ ಕೈಯನ್ನು ನನ್ನ ಹೆಂಡತಿಗೂ ಕೊಟ್ಬಿಟ್ಟೆ!
ಸ್ವಾಮಿ, ನೀವು ಜಿಂಕೆ ಚರ್ಮದ ಮೇಲೆ ಕುಳಿತಿದ್ದೀರಲ್ಲಾ? ಅರಣ್ಯಾಧಿಕಾರಿಗಳು ನಿಮ್ಮನ್ನು ಬಂಧಿಸಲಿಲ್ವೆ?
ಇಲ್ಲ...ನಾನು ಚರ್ಮವನ್ನು ತಗೊಂಡು ಅವರಿಗೆ ಮಾಂಸವನ್ನು ಕೊಟ್ಟಿದ್ದೀನಲ್ಲ...?
ಜಡ್ಜ್: ನೀನ್ಯಾಕೆ ಬೈಕನ್ನು ಅಷ್ಟು ಸ್ಪೀಡಾಗಿ ಓಡಿಸಿದ್ದು?
ಕೋಲ್ಯ: ಸರ್, ನನ್ನ ಹೆಂಡ್ತೀನ ತವರುಮನೆಗೆ ಬಿಡಲು ಹೋಗುತ್ತಿದ್ದೆ.
ಜಡ್ಜ್: ಓಹ್! ಹಾಗಾ? ಮಾನವೀಯ ದೃಷ್ಟಿಯಿಂದ ನಿನ್ನನ್ನು ನಿರಪರಾಧಿಯೆಂದು ಘೋಷಿಸುತ್ತಿದ್ದೇನೆ!
ನಿಶ್ಶಬ್ದ ಕೋಶ
ಹೆಂಡತಿ: ಹೆಸರಿನಲ್ಲೇ 'ಹೆಂಡ' ಇಟ್ಟುಕೊಂಡು ಮತ್ತೇರಿಸುವ ಜೀವಿ.
ಡ್ರೈವರ್: ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಹುದ್ದೆ.
ಚಾಪೆ: ನಿದ್ರೆಗಾಗಿ ಮೀಸಲಿರುವ ಪೀಠ.
ಬೆರಳು: ಇದರ ಮೇಲೆ ಉಂಗುರ ಕೂತಾಗ ಕಾಳಜಿ ಹೆಚ್ಚು.
ಮೈಕ್: ಗಂಟಲ ಆರೋಗ್ಯವನ್ನು ಕಾಪಾಡಿದ ಸಾಧನ.
ರೈಲು: ಯು- ಟರ್ನ್ ತೆಗೆದುಕೊಳ್ಳುವುದು ಇದಕ್ಕೆ ಗೊತ್ತಿಲ್ಲ.
ಕಲ್ಲಂಗಡಿ: ಕಲ್ಲಿನಲ್ಲೇ ಕಟ್ಟಿದ ಅಂಗಡಿ.
ಲೈಟುಕಂಬ: ನಾಯಿಗಳಿಗಾಗಿ ನಿರ್ಮಿಸಿದ ಶೌಚಾಲಯ.
ಟಿವಿ: 'ರಿಮೋಟ್' ಏರಿಯಾದಲ್ಲೇ ಇರುವ ವಸ್ತು.
ತಲೆ: ವಾಚಾಳಿಗಳಿಗಷ್ಟೇ ಮೀಸಲಿರುವ ಆಹಾರ.
ಕದನ: ಧನ ವ್ಯಯ ಮಾಡಲು ನಡೆಯುವ ಕಾಳಗ.
ಒಂದೇಟು
ಮಹಿಳೆ ಮತ್ತು ಉಗ್ರರು ಒಂದೇ ರೀತಿ ಅಪಾಯಕಾರಿಯಾಗಿದ್ದರೂ ಉಗ್ರರ ನಿರ್ಮೂಲನಕ್ಕಷ್ಟೇ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿದೆ!
ಹೆಂಡತಿ ಮತ್ತು ಗರ್ಲ್ಫ್ರೆಂಡ್ ನಡುವಿನ ವ್ಯತ್ಯಾಸ ಇಷ್ಟೇ, 20 ಕೆ.ಜಿ.!
ಲೈಫ್ ಒಂಥರ ಚೆಸ್ ಇದ್ಹಂಗೆ. ತಪ್ಪಾಗಿ ಹೆಜ್ಜೆ ಇಟ್ರೆ, ಮದ್ವೆ ಆಗ್ಬಿಡ್ತೀರಿ!
ನೀವು ಒಬ್ಬಳನ್ನು ಮದ್ವೆಯಾದರೆ ಆಕೆ ನಿಮ್ಮ ವಿರುದ್ಧ ಹೋರಾಡ್ತಾಳೆ. ಇಬ್ಬರನ್ನು ಮದ್ವೆಯಾದರೆ, ಅವರಿಬ್ಬರೂ ನಿಮಗಾಗಿ ಹೋರಾಡ್ತಾರೆ!
ಹುಡುಗಿಗೆ ಯಾಕೆ ತುಟಿಗೇ ಮುತ್ತು ಕೊಡಬೇಕು? ಏಕೆಂದರೆ, ಅದೊಂದೇ ಮಾರ್ಗ... ಅವಳ ಬಾಯಿ ಮುಚ್ಚಿಸಲು!
2 ಸೆಕೆಂಡ್ ನಕ್ಕರೆ ನಿಮ್ಮ ಅತ್ಯುತ್ತಮ ಫೋಟೋ ತೆಗೆಯಲು ಸಾಧ್ಯ. ಅದೇ ಜೀವನಪೂರ್ತಿ ನಕ್ಕರೆ ನಿಮ್ಮದೊಂದು ಅದ್ಭುತ ಆಲ್ಬಂ ರೆಡಿ! <
ಏನು ಕೊಡಲಿ ಸಾರ್?
ಮಸಾಲೆ ವಡೆ
ಅದರ ಜೊತೆಗೆ ಏನ್ತರಲಿ ಸಾರ್?
ವಡೆ ಹೋದ ಸಲ ಇದ್ದ ಹಾಗೇ ಇದ್ದರೆ, ಅದರ ಜೊತೆಗೆ ಸುತ್ತಿಗೆ ಉಳಿ, ತಗೊಂಡು ಬಾ.
ನನ್ನ ಮಗ ಫಾರಿನ್ನಲ್ಲಿ ಓದ್ತಾ ಇದ್ದಾನೆ. ಅವನ ಪತ್ರ ಬಂದರೆ, ನಾನು ಡಿಕ್ಷನರಿ ತಗೀಬೇಕು ಅವನ ಇಂಗ್ಲಿಷ್ ಅರ್ಥ ಮಾಡ್ಕೊಳ್ಳಕ್ಕೇ...
ಹೌದೆ? ನೀವೇ ಅದೃಷ್ಟವಂತರು. ನನ್ನ ಮಗನ ಪತ್ರ ಬಂದರೆ, ನಾನು ಚೆಕ್ ಪುಸ್ತಕ ತಗೀಬೇಕು.
ಹರಿದ ಕೋಟ್
ಬದುಕಿನಲ್ಲಿ ಅನುಭವವೆನ್ನುವುದು ಬಾಚಣಿಗೆ. ತಲೆಕೂದಲು ಉದುರಿಹೋದ ಮೇಲಷ್ಟೇ ದಕ್ಕುತ್ತದೆ!
ಕೀಪರ್ ಒಬ್ಬ ಸಲಿಂಗಿಯಾಗಿದ್ದರೆ ತುಂಬಾ ಕ್ಯಾಚ್ಗಳು ಮಿಸ್ ಆಗುತ್ತವೆ!
ಒನ್ ಡೇ ಕ್ರಿಕೆಟ್ ಪೈಜಾಮ ಇದ್ದಂತೆ. ಟಿ-20 ಪಕ್ಕಾ ಅಂಡರ್ವೇರ್. ಇಲ್ಲಿ ಕುತೂಹಲ ಹೆಚ್ಚು!
-ನವಜೋತ್ಸಿಂಗ್ ಸಿಧು