ವಿ. ಹೇಮಂತ್ ಕುಮಾರ್, ಬೆಂಗಳೂರು
- ಜಿಪುಣನಿಗೂ ನಿಪುಣನಿಗೂ ವ್ಯತ್ಯಾಸವೇನು?
-ಅವನು ಕಾಸ್ಪಾರ್ಟಿ, ಇವನು ಕ್ಲಾಸ್ಪಾರ್ಟಿ!
ಕೆ.ಎಂ. ಲಿಂಗರಾಜು, ನಂಜನಗೂಡು
- ಋಷಿಗಳ ಮೌನವ್ರತಕ್ಕೂ ಮನಮೋಹನ್ಸಿಂಗ್ರ ಮೌನವ್ರತಕ್ಕೂ ವ್ಯತ್ಯಾಸವೇನು?
- ಯೋಗ, ರೋಗಗಳಿಗಿರುವಷ್ಟೆ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಅತ್ಯಾಚಾರಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಫೂಲನ್ದೇವಿಯಂತವರು ಹುಟ್ಟಿದರೆ?
-ಈಗ ಹುಟ್ಟುವುದು ಪೂನಂಪಾಂಡೆಯಂಥವರು!
ವಿಷ್ಣುಶಂಕರ್, ಶಿವಮೊಗ್ಗ
ಯಡ್ಡಿ ಕೆಜೆಪಿ ಕಟ್ಟಿ ಯಡವಟ್ಟು ಮಾಡಿಕೊಂಡ್ರು ಅಂತ ಅನ್ನಿಸುತ್ತಿದೆಯಲ್ಲ?
-ನಿಮ್ಮ ಅಭಿಪ್ರಾಯ ರೇಣುಕಾಚಾರ್ಯರ ಅಭಿಪ್ರಾಯ ಒಂದೇ ಇದೆಯಲ್ಲ!
ಉದಯಶಂಕರ ರಾವ್, ದೊಡ್ಡಬಳ್ಳಾಪುರ
ಮಹಾಭಾರತದ ಕುಂತಿಯಂತೆ ಈಗಲೂ ಮಂತ್ರ ಜಪಿಸಿದರೆ ಮಕ್ಕಳಾಗುವಂತಿದ್ದರೆ ಪುರುಷರ ಗತಿ?
-ಯಾವುದಾದರೂ ಯಂತ್ರದ ಮೊರೆ ಹೋಗಬೇಕು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಬಲವಂತಕ್ಕೂ ಬಲಾತ್ಕಾರಕ್ಕೂ ವ್ಯತ್ಯಾಸ?
-ಯಡಿಯೂರಪ್ಪನವರು ಮೊನ್ನೆ ಮೊನ್ನೆಯವರೆಗೆ ಮಾಡಿದ್ದು ಬಲವಂತ, ಈಗ ಮಾಡ್ತಿರೋದು ಬಲಾತ್ಕಾರ!
ಸ್ವಾಮಿ ನಿರ್ಮಲಾ, ಉಡಿಗಾಲ
ಅಷ್ಟೊಂದು ಚಿಕ್ಕ ಲಲಾಟದಲ್ಲಿ ಹಣೆ ಬರಹ ಬರೆಯಲು ಹೇಗೆ ಸಾಧ್ಯ?
-ಹಣೆ ಬರಹ ಬ್ರಹ್ಮನ ಕಾಲದಲ್ಲೇ 'ಡಿಜಿಟಲೈಸ್' ಆಗಿದೆ!
ಬರ್ಕ್ಲಿ ರಮೇಶ್, ಮಂಡ್ಯ
ತಲೆಯಲ್ಲಿ ಕೂದಲು ಇಲ್ಲದಿದ್ದರೆ ಅಂತವರಿಗೆ ಬುದ್ಧಿ ಜಾಸ್ತಿಯಂತೆ ನಿಜಾನ?
-ಹೇರ್ಸ್ಟೆ ೈಲ್ ಬಗ್ಗೆ ಯೋಚನೆ ಮಾಡೋಕ್ಕಾಗಲ್ವಲ್ಲ, ಹಾಗಾಗಿ ಲೈಫ್ಸ್ಟೆ ೈಲ್ ಬಗ್ಗೆ ಯೋಚಿಸ್ತಾರೆ!
-ಘಾಟಿ