ಕಿರಾಣಿ : ರಾಣಿಯೇ ಇಲ್ಲದ ದಿನಸಿಗಳ ಅರಮನೆ.
ಸ್ಪೀಕರ್ : ಮೈಕು, ರೇಡಿಯೋ ಅಷ್ಟೇ ಅಲ್ಲ, ವಿಧಾನಸೌಧದಲ್ಲೂ ಇರುತ್ತೆ.
ಕೋರ್ಟ್ : ಯಾವುದೇ ಕ್ರಿಮಿನಲ್ ಕೇಸುಗಳಿ ಲ್ಲದ ಆಟಗಾರನೂ ಇಲ್ಲಿಗೆ ಹಾಜರಾಗಬೇಕು.
ಪ್ರಶಸ್ತಿ : ಪ್ರತಿಭೆಯಿದ್ದೂ ಅರ್ಜಿ ಬರೆಯಲು ಗೊತ್ತಿಲ್ಲದಿದ್ದರೆ ಇದು ಎಟುಕದು.
ವಿಚ್ಛೇದನ : ದಂಪತಿಗೆ ನ್ಯಾಯಾಲಯ ಕೊಡಿಸುವ ಸ್ವಾತಂತ್ರ್ಯ.
ಕ್ಯಾಲೆಂಡರ್ : ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಪುಸ್ತಕ.
ಮ್ಯೂಸಿಕ್ : ಗುನುಗುವ ಬಾಯಿಯುಳ್ಳವರಿಗೆ ಬರುವ Sick.