ಸಾಪ್ತಾಹಿಕಪ್ರಭ

ಸಿಎಂ ಸಿದ್ದು ಕುರುಚಲು ಗಡ್ಡ ಬಿಟ್ಟಿದ್ದಾರೆ, ಕಾರಣವೇನು?

Published On :

ಪಿ.ಜೆ.ರಾಘವೇಂದ್ರ, ಮೈಸೂರು
    ಜೂಜಿಗೂ ಬಾಜಿಗೂ ವ್ಯತ್ಯಾಸವೇನು?
    - ಜೂಜು ಬ್ಯುಸಿನೆಸ್, ಬಾಜಿ 'ಸೈಡ್‌' ಬ್ಯುಸಿನೆಸ್!

    ಜೆ.ಆರ್. ಆದಿನಾರಾಯಣಮುನಿ,
    ಶ್ರೀಕೋಡಿಹಳ್ಳಿ ಮಠ
    ಕ್ರಿಕೆಟ್ ಈಗ ಕೆಟ್ಟ ಜೂಜಾಟವಾಯ್ತಲ್ಲ?
    - ಅದಕ್ಕೀಗ 420- 420 ಕ್ರಿಕೆಟ್ ಅಂತಾರೆ!

    ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
    ನಿಮಗೆ ಶೌರ್ಯ ಪ್ರಶಸ್ತಿ ನೀಡಬೇಕೆಂದಿರುವೆ, ಎಲ್ಲಿ ಸಿಗುತ್ತೀರಿ?
    - ಯಾವ ಜಾಗ ಅಂತ ಹೇಳೋಕೆ ಭಯವಾಗ್ತಿದೆ!

    ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
    ಅರಿತರೆ ಪ್ರೇಮ, ಬೆರೆತರೆ ಪ್ರಣಯ, ಮುನಿದರೆ ವಿರಸ, ಸುಮ್ಮನಿದ್ದರೆ?
    - ಸಂಸಾರ!

    ಓಂ ಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ
    ಯಮಧರ್ಮನಿಗೇಕೆ ದೇವಸ್ಥಾನವಿಲ್ಲ, ಯಾರೂ ಆತನನ್ನು ಪೂಜಿಸುವುದಿಲ್ಲ ಏಕೆ?
    - ಸಾವು ಅಕ್ಕಪಕ್ಕ ಇರುತ್ತೆ, ನಮ್ಮ ಮನಸ್ಸಲ್ಲೇ ಇರುತ್ತಲ್ಲ!

    ಚಂದನಪ್ರಿಯ, ರಾಮಕೃಷ್ಣನಗರ, ಮೈಸೂರು
    ಉತ್ತರಗಳೇ ಇಲ್ಲದ ಪ್ರಶ್ನೆಗಳು ನಿಮ್ಮಲ್ಲಿ ಎಷ್ಟು
    ಇವೆ ಸಾರ್?
    - ಗೊತ್ತಿಲ್ಲ!

    ವಿಶ್ವಸುಹೃದಯ, ದಾವಣಗೆರೆ
    ಎಲ್ಲಾ ವಿಷಯಗಳಿಗೂ ಹೆಣ್ಣು ಸ್ಫೂರ್ತಿ ಎನ್ನುತ್ತಾರೆ ಹಾಗಾದರೆ ಗಂಡು?
    - ಹುಮ್ಮಸ್ಸು, ಶಕ್ತಿ!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
    ಸಿಎಂ ಸಿದ್ದು ಕುರುಚಲು ಗಡ್ಡ ಬಿಟ್ಟಿದ್ದಾರೆ, ಕಾರಣವೇನು?
    - ನಾನು ಅಷ್ಟು 'ನೈಸ್‌' ಅಲ್ಲ ಅಂತ     ತೋರಿಸ್ಕೊಳ್ಳೋಕೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.