

ಹೊಸಮಳೆಯ
ಮೃದು ಚಿಗುರುಗಳ ಸುಗಂಧವೇ
ಹೇಮಂತ
ಹೇಮಂತದ ಬಿಸಿಲಿಗೆ
ಬೇರುಗಳನ್ನರಸುವ ಭೂಮಿಯ
ಹದವಾದ ತಾಪವಿದೆ
ಎಲ್ಲಿಯಾದರೂ ಅದರ ಬೇರುಗಳನ್ನು
ಹರಿಯಬಿಡಬೇಕೆಂದು
ನನ್ನ ಆತ್ಮ ಬಯಸಿರೆ
ಚಳಿಗಾಲದ ಬೈಗುಗಳಲಿ
ತಂಪಾದ ಗಾಳಿ
ಕಿಟಕಿಯ ಗಾಜುಗಳಿಗೆ
ಅಪ್ಪಳಿಸುವಾಗ
ನಾನು ಲಜ್ಜೆಬಿಟ್ಟು
ನಿನ್ನ ದೇಹವನು
ಪ್ರೀತಿಸಿದೆ
- ರಶ್ಮಿ ಕಾಸರಗೋಡು
(ಮಾಧವಿಕುಟ್ಟಿ ಅವರ ಮಲಯಾಳಂ ಕವಿತೆ 'ಮಂಞುಕಾಲಂ'ನ ಅನುವಾದ)