

ಅಂತೂ ಇಷ್ಟು ದಿನ ಇಷ್ಟಪಟ್ಟು, ಕಷ್ಟಪಟ್ಟು ಓದಿದ ಪಠ್ಯವನ್ನು ಉತ್ತರ ರೂಪದಲ್ಲಿ ಬರೆದು ಪಿಯುಸಿ ಪರೀಕ್ಷೆ ಎಂಬ ಶೈಕ್ಷಣಿಕ ಘಟ್ಟವನ್ನು ಮುಗಿಸಿಯಾಯಿತು. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಕಾಯುವುದಷ್ಟೇ ಕೆಲಸ.
ಪಾಸು ಫೇಲುಗಳ ಹಾವು ಏಣಿಯಾಟ ಬದುಕಿನಲ್ಲಿ ಇದ್ದದ್ದೆ. ಹಾಗಂತ ರಜೆಯ ಮಜಾವನ್ನು ಅದೇ ಗುಂಗಿನಲ್ಲಿ ಹಾಳು ಮಾಡಿಕೊಳ್ಳಬೇಕೇ?
ಖಂಡಿತಾ ಬೇಡ. ಪರೀಕ್ಷೆ ಮುಗಿಸಿ, ತಿಂಗಳ ಕಾಲ ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ಒಂದಷ್ಟು ಟಿಪ್ಸ್ಗಳು ಇಲ್ಲಿವೆ...