ಹೆಸರು ಕೇಳಿದರೇ ವಿಚಿತ್ರ ಅನ್ನಿಸುತ್ತೆ ಅಲ್ವಾ? ಈ ಮರುಭೂಮಿ ಇರೋದು ಇರೋದು ಅಮೆರಿಕದ ಕ್ಯಾಲಿಫೋರ್ನಿಯಾದ ಪಶ್ಚಿಮದಲ್ಲಿ. ಉತ್ತರ ಅಮೆರಿಕದ ಅತ್ಯಂತ ಆಳದಲ್ಲಿರುವ ಮತ್ತು ಅತ್ಯಂತ ಶುಷ್ಕ ವಾತಾವರಣದ ಪ್ರದೇಶವಿದು. ಭೂಮಿಯ ಮೇಲೆ ಗರಿಷ್ಠ ತಾಪಮಾನ ದಾಖಲಾದದ್ದು ಇಲ್ಲಿಯೇ.
ಸಮುದ್ರ ತಳದಿಂದ 282 ಅಡಿ ಕೆಳಗೆ ಇದೆ. ವಿಸ್ತಾರ ಸುಮಾರು 7,800 ಕಿ.ಮೀ. ವಾರ್ಷಿಕ ಮಳೆ ಪ್ರಮಾಣ 60 ಮಿ.ಮೀ. ಭೌಗೋಳಿಕವಾಗಿ ಕಣಿವೆ ಮತ್ತು ಬಯಲು ಪ್ರದೇಶಗಳೆರಡನ್ನೂ ಹೊಂದಿದೆ. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಸಮುದ್ರ ಇದ್ದಿರಬೇಕು. ಕಾಲಾಂತರದಲ್ಲಿ ಆ ನೀರು ಆವಿಯಾದದ್ದರ ಪರಿಣಾಮವಾಗಿ ಉಪ್ಪಿನ ನಿಕ್ಷೇಪಗಳನ್ನು ಹೊಂದಿರುವ ಈ ಮರುಭೂಮಿ ಸೃಷ್ಟಿಯಾಗಿರಬೇಕು ಎಂದು ಅಂದಾಜಿಸಲಾಗಿದೆ. ಇಲ್ಲಿ ಸರೋವರಗಳಿವೆ. ಅಲ್ಲಲ್ಲಿ ಜನರನ್ನೂ ಕಾಣಬಹುದು. ಪ್ರಾಣಿ-ಪಕ್ಷಿಗಳೂ ವಾಸಿಸುತ್ತವೆ. ಕುರುಚಲು ಗಿಡಗಳಬ ಬೆಳೆಯುತ್ತವೆ.
1913ರ ಜುಲೈ 10ರಂದು ಇಲ್ಲಿ 56.7 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿತ್ತು. ನಂತರದ ಐದು ವರ್ಷ ಸತತವಾಗಿ ಉಷ್ಣತೆ 54 ಡಿಗ್ರಿಗಿಂತ ಜಾಸ್ತಿ ಇತ್ತು.
ಡೆತ್ ವ್ಯಾಲಿ ಎಂದು ಏಕೆ ಹೇಳುತ್ತಾರೆಂದು ಅರ್ಥವಾಯಿತಲ್ಲ?