ವಿಶ್ವ ಆರೋಗ್ಯ ಸಂಸ್ಥೆ

Updated on: 

ಆಗಾಗ ಪತ್ರಿಕೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಗ್ಗೆ ಓದಿಯೇ ಇರ್ತೀರಿ. ಏನಿದು ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು ಅಲ್ಲವೆ?
ವಿಶ್ವ ಆರೋಗ್ಯ ಸಂಸ್ಥೆ (ಡಬ್ಯ್ಯೂಎಚ್ಒ) ಅನ್ನೋದು ವಿಶ್ವಸಂಸ್ಥೆಯ ಅಂಗಸಂಸ್ಥೆ. ವಿಶ್ವದ ಎಲ್ಲಾ ದೇಶಗಳ ಸಾರ್ವಜನಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇದರ ಕಾರ್ಯ. ಎರಡನೇ ಮಹಾಯುದ್ಧದ ನಂತರ ನಡೆದ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಆರೋಗ್ಯ ವಿಷಯಗಳ ಬಗ್ಗೆ ನಿಗಾ ವಹಿಸುವ ಸಂಸ್ಥೆಯೊಂದು ಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು. ಅದಕ್ಕೆ ಪೂರಕವಾಗಿ ಸಂವಿಧಾನವನ್ನೂ ಸಿದ್ಧಪಡಿಸಲಾಯಿತು ಮತ್ತು 1946ರ ಜುಲೈ 22ರಂದು ಎಲ್ಲ 61 ಸದಸ್ಯ ರಾಷ್ಟ್ರಗಳು ಅದಕ್ಕೆ ಅಂಗೀಕಾರದ ಮುದ್ರೆ ಒತ್ತಿದವು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು ಮಾತ್ರ 1948ರ ಏಪ್ರಿಲ್ 7ರಂದು. ಇದರ ಕೇಂದ್ರ ಕಚೇರಿ ಜಿನೀವಾದಲ್ಲಿದೆ.
ಆರಂಭದ ದಿನಗಳಲ್ಲಿ ಸಿಡುಬಿನ ನಿರ್ಮೂಲನೆಗೆ ಆದ್ಯತೆ ನೀಡಿದ್ದ ಡಬ್ಯ್ಯೂಎಚ್ಒ, ಆ ನಂತರ ಸಾಂಕ್ರಾಮಿಕ ರೋಗಗಳು, ಎಚ್ಐವಿ/ ಏಡ್ಸ್, ಮಲೇರಿಯಾ, ಕ್ಷಯ, ಪೌಷ್ಟಿಕತೆ, ಆಹಾರ ಭದ್ರತೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಗಮನ ನೀಡುತ್ತಿದೆ. ಪ್ರತಿವರ್ಷ ತನ್ನ ಹುಟ್ಟುಹಬ್ಬವನ್ನು 'ವಿಶ್ವ ಆರೋಗ್ಯ ದಿನ'ವಾಗಿ ಆಚರಿಸಿಕೊಳ್ಳುವ ಡಬ್ಯ್ಯೂಎಚ್ಒ, ಅಂದು ವಾರ್ಷಿಕ ವಿಶ್ವ ಆರೋಗ್ಯ ವರದಿಯನ್ನೂ ಬಿಡುಗಡೆ ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com