ಎರಡನೇ ಶನಿವಾರ ರಜಾ ಏಕೆ?
ಪ್ರತಿ ತಿಂಗಳು ಎರಡನೇ ಶನಿವಾರ ರಾಜ್ಯ ಸರ್ಕಾರದ ರಜೆ ಏಕೆ ಗೊತ್ತಾ?
ಸ್ವಾತಂತ್ರ್ಯಪೂರ್ವದಲ್ಲಿ ಒಬ್ಬ ಆಂಗ್ಲ ಗವರ್ನರ್ನ ಬಂಗಲೆಗೆ ವಯಸ್ಸಾದ ದಂಪತಿ ದೂರು ನೀಡಲು ಬಂದಿದ್ದರು. ಗವರ್ನರ್ ಸಾಹೇಬರು ಅವರ ಅಹವಾಲನ್ನು ಕೇಳಿ ವಿಸ್ಮಯಗೊಂಡರು! ಏಕೆಂದರೆ ಆ ವೃದ್ಧ ದಂಪತಿ ಮಾಡಿದ ದೂರು ಬೇರೆ ಯಾರದೋ ಮೇಲಲ್ಲ, ಸ್ವತಃ ಗವರ್ನರ್ ಸಾಹೇಬರ ಸೆಕ್ಯುರಿಟಿ ಗಾರ್ಡ್ ಮೇಲೆ ಆಗಿತ್ತು.
ಕಾರಣ ಇಷ್ಟೆ, ಆ ಸೆಕ್ಯುರಿಟಿ ಗಾರ್ಡ್ ಆ ವೃದ್ಧ ದಂಪತಿಯ ಒಬ್ಬನೇ ಮಗನಾಗಿದ್ದ. ಆತ ಕಳೆದ ಕೆಲವು ತಿಂಗಳಿಂದ ಅಂದರೆ, ಕೆಲಸಕ್ಕೆ ಸೇರಿದಂದಿನಿಂದ ಒಂದು ಸಾರಿಯೂ ಹೆತ್ತವರ ಮನೆಗೆ ಹೋಗಿರಲಿಲ್ಲ. ಅದೂ ಅಲ್ಲದೆ ಅವರ ಮನೆ ದೂರದ ಊರಾಗಿತ್ತು. ಇದನ್ನೆಲ್ಲ ಕೇಳಿದ ದಯಾಳುವಾದ ಗವರ್ನರ್ ಸಾಹೇಬರು, ಸೆಕ್ಯುರಿಟಿ ಗಾರ್ಡ್ನನ್ನು ಕರೆಸಿ ವಿಚಾರಿಸಲಾಗಿ ಆತ ಕೊಟ್ಟ ಉತ್ತರ ಸಹ ಆತ ಊರಿಗೆ ಹೋಗದಿರಲು ಅಸಹಾಯಕತೆಯನ್ನು ತೋರುತ್ತಿತ್ತು.
ಅವನು ಕೊಟ್ಟ ಕಾರಣವೆಂದರೆ, ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅವರ ಸಾಹೇಬರಿಗೆ, ವಾರದ ಪೂರ್ತಿ ದಿನ ಅವರ ಸೆಕ್ಯುರಿಟಿ ಗಾರ್ಡ್ ಆಗಿ ಅವನು ಸೇವೆ ಸಲ್ಲಿಸಬೇಕು. ಇನ್ನು ಭಾನುವಾರವೂ ಸಾಹೇಬರು ಚರ್ಚ್ಗೆ ಪ್ರಾರ್ಥನೆ ಸಲ್ಲಿಸಲು ಹೋದಾಗ ಸಹ ಅವರಿಗೆ ಸೆಕ್ಯುರಿಟಿ ಸೇವೆ ಒದಗಿಸುವುದು ಅನಿವಾರ್ಯವಾಗಿತ್ತು. ಹೀಗಿರುವಾಗ ರಜೆಯ ಮಾತೆಲ್ಲಿ? ಇದು ಅವನು ಊರಿಗೆ ಹೋಗದಿರುವುದಕ್ಕೆ ಕಾರಣವಾಗಿತ್ತು. ಸಾಹೇಬರು ಒಂದು ಕ್ಷಣ ಯೋಚಿಸಿ, ಒಂದು ನಿರ್ಧಾರಕ್ಕೆ ಬಂದರು. ಅವರೆಂದರು, 'ನೋಡು, ನೀನು ಇನ್ನು ಮುಂದೆ ಪ್ರತಿ ತಿಂಗಳು ಎರಡನೇ ಶನಿವಾರ ರಜಾ ತೆಗೆದುಕೊಂಡು ನಿನ್ನ ಹೆತ್ತವರ ಜತೆಗೆ ಹಾಯಾಗಿದ್ದು ಬಾ'.
ಅಲ್ಲಿಂದ ಇಲ್ಲಿಯವರೆಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪ್ರತಿ ತಿಂಗಳು ಎರಡನೇ ಶನಿವಾರ ಅಧಿಕೃತವಾಗಿ ಸರ್ಕಾರ ರಜೆ ನೀಡುತ್ತಾ ಬರುತ್ತಿದೆ.
-ತಂಗಿ ಸುರೇಶ, ಕುರುಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

