ಮಕ್ಕಳಿಗೆ ದಿನಕ್ಕೊಂದು ಕಥೆ ಕೇಳಲು ನಿತ್ಯವೂ ಹೊಸಹೊಸ ಕಥೆ ಎಲ್ಲಿಂದ ಹುಡುಕುವುದು ಎಂದು ಯೋಚಿಸುತ್ತಿರುವ ಪಾಲಕರು, ಕಥೆ ಕೇಳುವ ಹುಮ್ಮಸ್ಸಿನ ಮಕ್ಕಳಿಗಾಗಿ 250 ಕಥೆಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದೆ ಬೆಂಗಳೂರಿನ ಭಾಗ್ಯಲಕ್ಷ್ಮೀ ಪ್ರಕಾಶನ. ಕಥೆಗಳನ್ನು ಸಂಗ್ರಹಿಸಿ ಕೊಟ್ಟವರು ಸಿ.ಎನ್. ಕೃಷ್ಣಮೂರ್ತಿ ಅವರು. 'ಕಥಾ ಸೌರಭ'ದಲ್ಲಿ ರಾಮಾಯಣ, ಮಹಾಭಾರತ, ಪಂಚತಂತ್ರ ಮತ್ತು ಪೌರಾಣಿಕ ಕಥೆಗಳಿವೆ. 87 ಕಥೆಗಳನ್ನು ಹೊಂದಿರುವ ಕೃತಿಯ ಬೆಲೆ 150 ರುಪಾಯಿ. 105 ಕಥೆಗಳುಳ್ಳ 'ಕಥಾಚಂದನ'ದಲ್ಲಿ ಅರೇಬಿಯನ್ ನೈಟ್ಸ್, ಅಕ್ಬರ್ ಮತ್ತು ಬೀರಬಲ್ಲನ ಕಥೆಗಳ ಜತೆಗೆ ಆಸಕ್ತಿದಾಯಕ ಇನ್ನೂ ಕೆಲವು ಕಥೆಗಳಿವೆ. ಬೆಲೆ 120 ರುಪಾಯಿ. 'ಕಥಾಸುಗಂಧ' ಹಿತೋಪದೇಶದ ಕಥೆಗಳು, ಈಸೋಪನ ಕಥೆಗಳು, ವಿಕ್ರ ಬೇತಾಳನ ಕಥೆಗಳು, ತೆನ್ನಾಲಿ ರಾಮಕೃಷ್ಣನ ಕಥೆಗಳನ್ನು ಒಳಗೊಂಡಿದೆ. 80 ಕಥೆಗಳುಳ್ಳ ಈ ಸಂಪುಟದ ಬೆಲೆ 140 ರುಪಾಯಿ. ಮಾಹಿತಿಗೆ: ಭಾಗ್ಯಲಕ್ಷ್ಮೀ ಪ್ರಕಾಶನ, ನಂ. 87, 3ನೇ ಅಡ್ಡರಸ್ತೆ, 4ನೇ ಬ್ಲಾಕ್, ಬನಶಂಕರಿ 3ನೇ ಘಟ್ಟ, 3ನೇ ಹಂತ, ಬೆಂಗಳೂರು- 85. ದೂರವಾಣಿ: (080) 26695715.