

ಶಿಕ್ಷಣವೆಂದರೆ ಭಾವ ಪ್ರವಾಹದ ಅಭಿವ್ಯಕ್ತಿಗೆ ಸೂಕ್ತ ಸಂಸ್ಕಾರ ನೀಡಿ, ಅದನ್ನು ಬದುಕಿಗೆ ಉಪಯುಕ್ತವಾಗಿಸುವ ನಿರಂತರ ತರಬೇತಿ ಎಂಬುದಾಗಿ ಸ್ವಾಮಿ ವಿವೇಕಾನಂದರು ವ್ಯಾಖ್ಯಾನಿಸುತ್ತಾರೆ.
ಹುಲಿಯ ಕೆಣಕುವುದು ಹುಲಿ,
ಕಪಿಯನಣಕಿಪುವುದು ಕಪಿ,
ಹುಲಿ ಕಪಿಗಳವಿತಿರದ ನರಜಂತುವೆಲ್ಲಿ
ಮಲಗಿರುವ ಮಣಗವನಂತಿರಲು
ಬಿಡುವುದೇ ಜಾಣು
ಕುಲಕದಿರು ಬಾಲವನು ಮಂಕುತಿಮ್ಮ
- ಡಿವಿಜಿಯವರ ಈ ನುಡಿಯಂತೆ, ಪ್ರತಿಯೊಬ್ಬರಲ್ಲೂ ಹುದುಗಿರುವ ಹುಲಿ-ಕಪಿ ಭಾವಗಳನ್ನು ಸಂಸ್ಕರಿಸಿ, ಸಮಾಜಮುಖಿಯಾಗಿಸುವುದೇ ಶಿಕ್ಷಣ. ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಣೆಯಲ್ಲ. ಅದು, ವ್ಯಕ್ತಿತ್ವವನ್ನು ರೂಪಿಸುವ, ಬದುಕನ್ನು ಕಟ್ಟುವ, ಜ್ಞಾನದ ಸದ್ಬಳಕೆಗೆ ಪ್ರೇರೇಪಿಸುವ ನಿರಂತರ ತರಬೇತಿ. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಸಂಪಾದನೆಯಲ್ಲ. ನಿರಂತರ ಜ್ಞಾನದಾಹವನ್ನು ಪ್ರೇರೇಪಿಸುವುದು. ಈ ನಿಟ್ಟಿನಲ್ಲಿ ಗಳಿಸಿದ ಶಿಕ್ಷಣ ನಿಜಕ್ಕೂ ಗಟ್ಟಿಯಾಗಿರುತ್ತದೆ. ಮಾಡುವ ವೃತ್ತಿಯನ್ನು ಪ್ರೀತಿಸುವಂತೆ ಮಾಡುತ್ತದೆ.
ಶಿಕ್ಷಣ ಬದುಕಿಗೆ ಉಪಯುಕ್ತವಾಗಬೇಕಾದರೆ, ನಾವು ಕಲಿತಿದ್ದನ್ನು ಜೀವನೋಪಾಯಕ್ಕೆ ಬಳಸಬೇಕು. ಆ ನಿಟ್ಟಿನಲ್ಲಿ ಜ್ಞಾನ ಗಳಿಸಿಕೊಳ್ಳುವುದೇ ವೃತ್ತಿ ಶಿಕ್ಷಣ. ನಾವು ಪಡೆದುಕೊಂಡ ಜ್ಞಾನದ ಮೌಲ್ಯವರ್ಧನೆ ಮಾಡಿಕೊಂಡು, ಕೆಲಸಕ್ಕೆ ಬೇಕಾಗುವ ಕೌಶಲ್ಯಗಳನ್ನು ಪಡೆದುಕೊಳ್ಳುವುದೇ ವೃತ್ತಿ ಶಿಕ್ಷಣ. ನಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು, ಅದರಿಂದ ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ಜ್ಞಾನವನ್ನು ಸಂಪಾದಿಸುವುದೇ ವೃತ್ತಿ ಶಿಕ್ಷಣ.
ವೃತ್ತಿ ಶಿಕ್ಷಣ ಏಕೆ ಬೇಕು?