ಹಾಳು ಮಾಡದಿರಿ ಪರಿಸರ
ಬೆಳೆಸಿರಿ ಎಲ್ಲೆಡೆ ಗಿಡಮರ॥
ಬೆಳೆಸಿರಿ ಎಲ್ಲೆಡೆ ಹಸಿರು
ಅದುವೆ ನಮ್ಮೆಲ್ಲರ ಉಸಿರು
ಕುಡಿಯಲು ದೊರೆವುದು ಗಾಳಿ ನೀರು
ಮಾಡಬಹುದು ಮಾದರಿ ನಮ್ಮೂರು॥
ಆಗಿದೆ ನಮ್ಮದು ಗಣರಾಜ್ಯ
ಕಳೆದಾಯಿತು ಅರವತ್ಮೂರು ನಿಜ
ನೀರು-ಗಡಿ ಅಡಿಗಡಿಗೆ ವ್ಯಾಜ್ಯ
ಕನಸ ಕಂಡೆವು ರಾಮರಾಜ್ಯ॥
ಆಳುವವರು ಹೊಂದಿಹರು ಬಹುಮಹಡಿ
ವಾಸಿಸಲು ಹವಾನಿಯಂತ್ರಿತ ಕೊಠಡಿ
ಅವರಿಗಿಲ್ಲ ನಮ್ಮ ಚಿಂತೆ ಬಿಡಿ
ಮರಳಿ ಬೇಡುವರು 'ವೋಟು ಕೊಡಿ'॥
ಪ್ಲಾಸ್ಟಿಕ್ ಬಳಕೆಯು ಹಾನಿಕರ
ನೆನೆದರೆ ಇದು ಘೋರ ಭೀಕರ
ಊರೆಲ್ಲ ಹರಡಿದೆ ಇದರ ಕರ
ಮಾಡಬೇಕಿದರೆದುರು ಸಮರ॥
ಬಿಡೋಣ ಪ್ಲಾಸ್ಟಿಕ್ ಬಳಕೆಯನಿಂದು
ತೊಡೋಣ ದೀಕ್ಷೆಯ ನಾವಿಂದು
ನನಸು ಮಾಡೋಣ ರಾಮರಾಜ್ಯದ ಕನಸು
ಉಳಿಸಿ ಬೆಳೆಸೋಣ ಪರಿಸರ ಸೊಗಸು॥
-ಖೈ.ನಾ. ಜೋಯಿಸ್