

ನಿಮ್ಮ ಮಾಜಿ ಪ್ರೇಯಸಿ, ಪ್ರಿಯತಮನ ಫೋಟೋವನ್ನು ಫೇಸ್ಬುಕ್ನಲ್ಲಿ ಒಂದೇ ಕ್ಲಿಕ್ನಲ್ಲಿ ನೀವು ಡಿಲೀಟ್ ಮಾಡಿರಬಹುದು. ಆದರೆ, ನೀವು ನಿಮ್ಮ ಮುರಿದುಬಿದ್ದ ಪ್ರೀತಿಯಿಂದ ಹೊರಬರಲು ಫೇಸ್ಬುಕ್ನಿಂದ ತೊಂದರೆಯಾದೀತು. ಯಾಕೆಂದರೆ ಈಗಿನ ಡಿಜಿಟಲ್ ಜಮಾನಾದಲ್ಲಿ ಯಾವುದೇ ನೆನಪುಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು ಸುಲಭ. ಆದರೆ, ಅದನ್ನು ಡಿಲೀಟ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಸಂಬಂಧಗಳು ಚೆನ್ನಾಗಿದ್ದಾಗ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ. ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಫೋಟೋಗಳು, ವಿಡಿಯೋಗಳು ನಿಮಗೆ ಸಂತಸ ನೀಡಬಹುದು. ಆದರೆ, ಒಮ್ಮೆ ಬ್ರೇಕ್ಅಪ್ ಆದರೆ ಅದೇ ಫೋಟೋಗಳು ನಿಮ್ಮನ್ನು ಬಿಡದೆ ಕಾಡುತ್ತವೆ. ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಶೇಷವೇನೆಂದರೆ ಫೇಸ್ಬುಕ್ನಲ್ಲಿ ಬೇರೊಬ್ಬರು ಹೊಂದಿರುವ ಫೋಟೋಗಳನ್ನು ಅನ್ಟ್ಯಾಗ್ ಮಾಡಬಹುದು. ಆದರೆ, ಡಿಲೀಟ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬ್ರೇಕ್ಅಪ್ ಬಳಿಕ ಸ್ವಲ್ಪ ಸಮಯದ ಬಳಿಕವಾದರೂ ನೀವು ಫೇಸ್ಬುಕ್ನಿಂದ ದೂರ ಇರುವುದು ಒಳಿತು.