ಪ್ರಧಾನ ಸುದ್ದಿ

ಭಲೇ ಅರ್ಜುನ ನೀನೆ ಬಲಶಾಲಿ...

ಭಲೇ ಅರ್ಜುನ ನೀನೆ ಬಲಶಾಲಿ...
Published On :

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಅರಮನೆಗೆ ಆಗಮಿಸಿದ ಆನೆಗಳ ತೂಕವನ್ನು ಶನಿವಾರ ಪರೀಕ್ಷಿಸಲಾಯಿತು. ಅಂಬಾರಿ ಹೊರುವ ಅರ್ಜುನ ತನ್ನ ತೂಕವನ್ನು ಸ್ವಲ್ಪ ವ್ಯತ್ಯಾಸದಲ್ಲಿ ಕಳೆದ ವರ್ಷದಷ್ಟೇ ಕಾಯ್ದುಕೊಂಡಿದ್ದಾನೆ.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅರ್ಜುನ, ಗಜೇಂದ್ರ, ಬಲರಾಮ, ಅಭಿಮನ್ಯು, ವರಲಕ್ಷ್ಮಿ ಹಾಗೂ ಸರಳ ಸೇರಿದಂತೆ ಆರು ಆನೆಗಳನ್ನು ಅರಮನೆಯಿಂದ ಪೊಲೀಸ್ ಬೆಂಗಾವಲಿನೊಂದಿಗೆ ಕರೆದೊಯ್ಯಲಾಯಿತು. ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ವಾರ್ತಾ ಇಲಾಖೆ ಸಮೀಪದ ಶ್ರೀಸಾಯಿ ವೇ ಬ್ರಿಡ್ಜ್‌ನಲ್ಲಿ ಇವುಗಳ ತೂಕದ ಗಣನೆ ನಡೆಯಿತು. ಬಳಿಕ ಅವುಗಳನ್ನು ಮತ್ತೆ ಅರಮನೆಗೆ ಕರೆತರಲಾಯಿತು. ಇನ್ನೂ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗಲಿದೆ.
ಅರ್ಜುನ
5,535 ಕೆಜಿ
2012ರ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗ 5,520 ಕೆ.ಜಿ ಇದ್ದ. ಶನಿವಾರ 5,535 ಕೆ.ಜಿ. ತೂಗುತ್ತಿದ್ದ. ಕಳೆದ ಬಾರಿ ದಸರಾ ಮುಗಿಸಿ ಹಿಂದಿರುಗುವಾಗ ಆತ 5,776 ಕೆ.ಜಿಗೆ ಏರಿದ್ದ.
ಗಜೇಂದ್ರ
4,755 ಕೆಜಿ
ತೂಕ 4,560 ಕೆ.ಜಿ. ಎಂದು ಅಂದಾಜಿಸಲಾಗಿತ್ತು. ಆದರೆ ಈಗಿನ ತೂಕ 4,755 ಕೆ.ಜಿ.
ಅಭಿಮನ್ಯು
 4,870 ಕೆಜಿ
4,650 ಕೆ.ಜಿ. ತೂಕ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈತ 4,870 ಕೆ.ಜಿ. ಇದ್ದಾನೆ.
ಸರಳ
 3,290 ಕೆಜಿ
3,250 ಕೆ.ಜಿ. ಇರಬಹುದು ಎಂದು ಅಂದಾಜಿಸಲಾಗಿತ್ತು. ಆಕೆ 3,290 ಕೆ.ಜಿ. ತೂಗುತ್ತಿದ್ದಾಳೆ.
ವರಲಕ್ಷ್ಮೀ
2,965 ಕೆಜಿ
ತೂಕವನ್ನು 3,325 ಎಂದು ಅಂದಾಜಿಸಿದ್ದು, 2,965 ಕೆ.ಜಿ.ಗೆ ಇಳಿಕೆಯಾಗಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.