ಈಗ ಹಸಿವಿನ ತಾಂಡವ

ಸೋನ್‌ಪ್ರಯಾಗ್(ಉತ್ತರಾಖಂಡ): ವಾರದಿಂದ ಅನ್ನ ಮತ್ತು ನೀರಿಲ್ಲದೆ ಸಿಕ್ಕಿಹಾಕಿಕೊಂಡಿರುವವರು ಸಾಯುವ ಸ್ಥಿತಿಯಲ್ಲಿದ್ದಾರೆ. ಈ ಪೈಕಿ ಹಲವರು ಈಗಾಗಲೇ ಅಸುನೀಗಿದ್ದಾರೆ... ರಕ್ಷಣೆ ಸಿಗಬಹುದೆಂಬ ಭರವಸೆಯೊಂದಿಗೆ ಗುಟುಕು ಜೀವ ಉಳಿಸಿಕೊಂಡ ಕೃಶದೇಹಗಳು... ಇದರ ನಡುವೆ, ತಮ್ಮವರ ಮೃತದೇಹ ಕಣ್ಣ ಮುಂದಿದ್ದರೂ ಕಣ್ಣೀರು ಹಾಕಲಾಗದಷ್ಟೂ ಆಘಾತಕ್ಕೊಳಗಾಗಿರುವ ಯಾತ್ರಾರ್ಥಿಗಳು...
ಇದು ಉತ್ತರಕಾಶಿಯಲ್ಲಿ ಸಾವಿನ ಪ್ರವಾಹದ ಅಬ್ಬರ ಕಡಿಮೆಯಾದ ಬಳಿಕದ ಮೂರನೇ ದಿನವಾದ ಶನಿವಾರ ಕಂಡ ಚಿತ್ರಣ.
ರಕ್ಷಣಾ ಕಾರ್ಯಾಚರಣೆ ತಂಡಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಪರಿಹಾರ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ದುರ್ಗಮ ಕಣಿವೆಗಳಲ್ಲಿ ಗುಟುಕು ಜೀವ ಉಳಿಸಿಕೊಂಡವರು ಅನ್ನ ನೀರಿಲ್ಲದೆ ದಿನಗಳನ್ನು ಎಣಿಸುತ್ತಿದ್ದಾರೆ. ಬರಿಗಾಲಲ್ಲಿ ಕೇದಾರನಾಥದಿಂದ ಸೋನ್‌ಪ್ರಯಾಗ್ ತಲುಪಿದ ಮಂದಿ ಪರಿಹಾರ ಕಾರ್ಯಾಚರಣೆ ಕುರಿತು ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕೃತ ಸಾವಿನ ಸಂಖ್ಯೆ 1 ಸಾವಿರ: ಶನಿವಾರದ ಬೆಳಗ್ಗಿನ ವರೆಗೆ ಅಧಿಕೃತ ಸಾವಿನ ಸಂಖ್ಯೆ 556 ಆಗಿತ್ತು. ಸಂಜೆಯ ವೇಳೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಒಂದು ಸಾವಿರ ಎಂದು ಉತ್ತರಾಖಂಡ ಮುಖ್ಯಮಂತ್ರಿ ವಿಜಯ ಬಹುಗುಣ ತಿಳಿಸಿದರು.
ಮತ್ತೊಂದು ಮಳೆ ಎಚ್ಚರಿಕೆ: ನಿಧಾನಗತಿಯಲ್ಲಿ ಸಾಗುತ್ತಿರುವ ರಕ್ಷಣಾ ಕಾರ್ಯದ ನಡುವೆ ಉತ್ತರಾಖಂಡದ ದುರ್ಗಮ ಪ್ರದೇಶಗಳಲ್ಲಿ ಸಿಲುಕಿರುವ ಸಾವಿರಾರು ಯಾತ್ರಾರ್ಥಿಗಳ ಪಾಲಿಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿದೆ.
ಸೋಮವಾರದಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮತ್ತೊಂದು ಮೇಘ ಸ್ಫೋಟ ಸಂಭವಿಸಿದರೆ ಅನ್ನ, ಆಹಾರ ಇಲ್ಲದೆ ಬದುಕಿರುವ ಸಾವಿರಾರು ಮಂದಿಯಲ್ಲಿ ಯಾರೂ ಬದುಕುಳಿಯುವುದು ಅಸಾಧ್ಯ.
ಶಿವನ ಮುಂದೆ ಹೆಣದ ರಾಶಿ!: ವಾರದ ಹಿಂದಷ್ಟೇ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಓಂ ನಮಃ ಶಿವಾಯ ಮಂತ್ರ ಕೇಳುತ್ತಿದ್ದ ಕೇದಾರನಾಥದಲ್ಲೀಗ ಹೆಣಗಳ ರಾಶಿ ಬಿದ್ದಿದೆ. ದೇವಸ್ಥಾನದ ಹೊರಭಾಗದಲ್ಲಿ ಅಲ್ಲಲ್ಲಿ ಶವಗಳು ಚದುರಿ ಬಿದ್ದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


