ರಾಜ್ಯದ ಮತದಾರ 'ಕೈ' ಹಿಡಿಯಲಿದ್ದಾನೆ ಎಂದು ಸುವರ್ಣ ಸುದ್ದಿವಾಹಿನಿ, ಕನ್ನಡಪ್ರಭ ಹಾಗೂ ಸಿ- ಫೋರ್ ಸಂಸ್ಥೆಯ ಮತದಾನ ಪೂರ್ವ ಹಾಗೂ ಮತಗಟ್ಟೆ ಸಮೀಕ್ಷೆಗಳು ಅಕ್ಷರಶಃ ನಿಜವಾಗಿವೆ. ಮೇ 2ರಂದು ಪ್ರಕಟವಾಗಿದ್ದ ಸಮೀಕ್ಷೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ನತ್ತ ಒಲವು ತೋರಿಸಿದೆ ಎಂದು ವರದಿ ಮಾಡಲಾಗಿತ್ತು. ಮತಗಟ್ಟೆ ಸಮೀಕ್ಷೆಯ ಬಳಿಕವೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು 'ಕನ್ನಡಪ್ರಭ' ವರದಿ ಪ್ರಕಟಿಸಿತ್ತು.
ಎಲ್ಲ ಸಮೀಕ್ಷೆಗಳು ನಿಜವಾಗಿದ್ದು ವರದಿಯಲ್ಲಿ ಹೇಳಿದಂತೆ ಕಾಂಗ್ರೆಸ್ 120ರ ಅಂಕಿಯನ್ನು ದಾಟಿದೆ. ಈ ಮೂಲಕ ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಮೀಕ್ಷೆಗಳಲ್ಲಿ 'ಸುವರ್ಣ ಸುದ್ದಿವಾಹಿನಿ' ಹಾಗೂ 'ಕನ್ನಡಪ್ರಭ' ನಿಖರವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಮತಗಟ್ಟೆ ಸಮೀಕ್ಷೆ ವರದಿ ಹೀಗಿತ್ತು
ಕಾಂಗ್ರೆಸ್ -109-120
ಬಿಜೆಪಿ 40-60
ಜೆಡಿಎಸ್-34-41
ಕೆಜೆಪಿ-05-12
ಇತರೆ-10-15
'ಕೈ ಕುಲುಕಿದ ಮತದಾರ' ಮತ್ತು
'ಕಣದಲ್ಲಿ ಕೈ ಮುಂದು' ಎಂಬ ಶೀರ್ಷಿಕೆಯಡಿಯಲ್ಲಿ ಸುವರ್ಣ ನ್ಯೂಸ್, ಕನ್ನಡಪ್ರಭ ಮತ್ತು ಸಿ ಫೋರ್ ನೀಡಿದ ಸಮೀಕ್ಷಾ ವರದಿಗಳು ಕಾಂಗ್ರೆಸ್ ಬಹುಮತ ಪಡೆಯುವ ಬಗ್ಗೆ ಹೇಳಿದ್ದವು. ಮತಗಟ್ಟೆ ಸಮೀಕ್ಷೆಯಲ್ಲಿ ನಾವು ನೀಡಿದ್ದ ನೇರ 'ಫಲಿತಾಂಶ' ನಿಜವಾಗಿರುವುದನ್ನೂ ಕಾಣಬಹುದು.