ಪ್ರಧಾನ ಸುದ್ದಿ

ಗಂಡನಿಂದಲೇ 'ಪಾಸಿಟಿವ್'

Published On :

ಮಂಗಳೂರು: ಎಲ್ಲರಂತೆ ನನಗೂ ಜೀವನದಲ್ಲಿ ಮದುವೆ, ಮಕ್ಕಳು, ಸಂಸಾರದ ಬಗ್ಗೆ ಸಾವಿರಾರು ಕನಸುಗಳಿದ್ದವು. ಬದುಕಿನ ಬಗ್ಗೆ ಸದಾ ಪಾಸಿಟಿವ್ ದೃಷ್ಟಿಕೋನವನ್ನೇ ಹೊಂದಿದ ನಾನು ಎಚ್ಐವಿನೇ 'ಪಾಸಿಟಿವ್' ಎಂದಾಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಮನೆಯಲ್ಲಿ ನೋಡಿದ ಖಾಸಗಿ ಬಸ್ ಚಾಲಕರೊಬ್ಬರೊಂದಿಗೆ 18 ವರ್ಷಗಳ ಹಿಂದೆ ನನ್ನ ಮದುವೆಯಾಯಿತು. ನಾನು ಕನಸು ಕಂಡಂತೆಯೇ ಬದುಕು ಸಾಗಿತ್ತು. ಎರಡೇ ವರ್ಷದಲ್ಲಿ ಮಗನೂ ಹುಟ್ಟಿದ. ಆದರೆ, ದಾಂಪತ್ಯಕ್ಕೆ ಕಾಲಿಟ್ಟ ಮೂರನೇ ವರ್ಷದಲ್ಲಿ ಗಂಡನ ಆರೋಗ್ಯದಲ್ಲಿ ವಿಪರೀತ ಏರುಪೇರಾಯಿತು. ಪರೀಕ್ಷೆ ಮಾಡಿಸಿದರೆ ಎಚ್ಐವಿ ಸೋಂಕಿತ ಎಂಬುವುದು ಪತ್ತೆಯಾಯಿತು. ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ಸತ್ತೇ ಹೋದರು. ಹೇಗೋ ಬದುಕಿನ ಗಾಡಿ ತಳ್ಳುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ, ನನಗೆ ಹಾಗೂ ನನ್ನ ಮಗನಿಗೂ ಎಚ್ಐವಿ ಸೋಂಕು ತಗುಲಿರುವುದು ತಿಳಿದಾಗ ಮಾತ್ರ ಏನು ಮಾಡುವುದೆಂದೇ ತೋಚಲಿಲ್ಲ.
ಬರೀ ಕತ್ತಲೇ ತುಂಬಿಕೊಂಡಿದ್ದ ನನ್ನ ಬದುಕಿನಲ್ಲಿ ಬೆಳಕು ತೋರಿದ್ದು ಬಂಟ್ವಾಳದ ಕಾರ್ಡ್ಸ್ ಸಂಸ್ಥೆ. ಈ ಸಂಸ್ಥೆ ನನ್ನ ಬಾಳಿಗೊಂದು ದಿಕ್ಕು ತೋರಿಸಿತು.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.